‘ನನ್ನನ್ನು ಟೀಕಿಸಿದವರಿಗೆ 10ನೇ ಕ್ಲಾಸ್‌ ಮಕ್ಕಳೇ ಉತ್ತರಿಸಿದ್ದಾರೆ’

Published : Jun 15, 2025, 11:48 AM IST
Madhu Bangarappa Karnataka

ಸಾರಾಂಶ

ಹೇರ್‌ಸ್ಟೈಲ್ ಸರಿಯಿಲ್ಲ, ಸರಿಯಾಗಿ ಕನ್ನಡ ಮಾತನಾಡುವುದಕ್ಕೆ ಬರುವುದಿಲ್ಲ ಅಂತ ನನ್ನ ಬಗ್ಗೆ ಹಗುರವಾಗಿ ಮಾತನಾಡಿದವರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದ ಮೂಲಕವೇ ಉತ್ತರ ನೀಡಲಾಗಿದೆ

ಶಿವಮೊಗ್ಗ : ಹೇರ್‌ಸ್ಟೈಲ್ ಸರಿಯಿಲ್ಲ, ಸರಿಯಾಗಿ ಕನ್ನಡ ಮಾತನಾಡುವುದಕ್ಕೆ ಬರುವುದಿಲ್ಲ ಅಂತ ನನ್ನ ಬಗ್ಗೆ ಹಗುರವಾಗಿ ಮಾತನಾಡಿದವರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದ ಮೂಲಕವೇ ಉತ್ತರ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಶಿಕ್ಷಣ ಸಚಿವನಾದ ಬಳಿಕ ಹಲವರು ನಾನಾ ಬಗೆಯ ಟೀಕೆ ಮಾಡಿದ್ದರು. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ನನ್ನ ಕೆಲಸವನ್ನು ಮಾಡುತ್ತಾ ಬಂದಿದ್ದು, ಈಗ ಅದಕ್ಕೆ ಉತ್ತರ ಸಿಕ್ಕಿದೆ. ಟೀಕೆ-ಟಿಪ್ಪಣಿ ಮಾಡಿದವರಿಗೆ ನಮ್ಮ ಇಲಾಖೆಯ ಮಕ್ಕಳೇ ತಮ್ಮ ಸಾಧನೆಯ ಮೂಲಕ ಉತ್ತರ ನೀಡಿದ್ದಾರೆ ಎಂದು ಎಸ್‌ಎಸ್‌ಎಲ್‌ಸಿ 2ನೇ ಪರೀಕ್ಷೆಯಲ್ಲಿ ಶೇ.70ರಷ್ಟು ಫಲಿತಾಂಶ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಶಿಕ್ಷಣ ಸಚಿವರಾಗಿ 2 ವರ್ಷ ಆಗಿದ್ದು, ಮೊದಲ ಪರೀಕ್ಷೆಯಲ್ಲಿ ಪಾಸ್‌ ಆಗದವರಿಗೆ ಇನ್ನೇರೆಡು ಬಾರಿ ಅವಕಾಶ ಮಾಡಿಕೊಡಲಾಗಿದೆ. ಯಾವುದೇ ರೀತಿಯ ಪರೀಕ್ಷಾ ಶುಲ್ಕ ಪಡೆಯದೆ ಎಕ್ಸಾಂ ನಡೆಸುವುದು ನಮ್ಮ ರಾಜ್ಯದಲ್ಲಿ ಮಾತ್ರ ಎಂದರು.

PREV
Read more Articles on

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ