ಕರ್ನಾಟಕದ ಮೂವರು ಸೇರಿ ಈ ಬಾರಿ 74 ಮಹಿಳಾ ಸಂಸದರು

KannadaprabhaNewsNetwork |  
Published : Jun 06, 2024, 12:31 AM IST
ಪ್ರಭಾ ಮಲ್ಲಿಕಾರ್ಜುನ | Kannada Prabha

ಸಾರಾಂಶ

ಈ ಬಾರಿಯ 18ನೇ ಲೋಕಸಭೆಗೆ ಕರ್ನಾಟಕದ ಮೂವರು ಮಹಿಳಾ ಸಂಸದರು ಸೇರಿ ಒಟ್ಟು 74 ಮಹಿಳೆಯರು ಪ್ರವೇಶಿಸಿದ್ದಾರೆ. ಕಳೆದ ಸಲಕ್ಕಿಂತ 4 ಸೀಟು ಕಡಿಮೆಯಾಗಿದೆ.

ನವದೆಹಲಿ: ಈ ಬಾರಿಯ 18ನೇ ಲೋಕಸಭೆಗೆ ಕರ್ನಾಟಕದ ಮೂವರು ಮಹಿಳಾ ಸಂಸದರು ಸೇರಿ ಒಟ್ಟು 74 ಮಹಿಳೆಯರು ಪ್ರವೇಶಿಸಿದ್ದಾರೆ. ಕಳೆದ ಸಲಕ್ಕಿಂತ 4 ಸೀಟು ಕಡಿಮೆಯಾಗಿದೆ.ಪಶ್ಚಿಮ ಬಂಗಾಳದಿಂದ ಅತಿ ಹೆಚ್ಚು 11 ಮಹಿಳಾ ಸಂಸದರು ಆಯ್ಕೆಯಾಗಿದ್ದಾರೆ. ಇನ್ನು ಪಕ್ಷವಾರು ಲೆಕ್ಕದಲ್ಲಿ ಬಿಜೆಪಿಯಿಂದ ಅತಿ ಹೆಚ್ಚು 30 ಸ್ತ್ರೀಯರು ಆಯ್ಕೆಯಾಗಿದ್ದಾರೆ. ಇದರ ನಂತರಲ್ಲಿ ಕಾಂಗ್ರೆಸ್‌ನಿಂದ 14, ಟಿಎಂಸಿಯಿಂದ 11, ಸಮಾಜವಾದಿ ಪಕ್ಷದಿಂದ 4, ಡಿಎಂಕೆಯಿಂದ 3 ಹಾಗೂ ಜೆಡಿಯು ಹಾಗೂ ಎಲ್‌ಜೆಪಿಯಿಂದ ತಲಾ ಇಬ್ಬರು ಮಹಿಳೆಯರು ಸಂಸತ್‌ ಪ್ರವೇಶಿಸಿದ್ದಾರೆ.

ಎಷ್ಟು ಮಹಿಳೆಯರು ಸ್ಪರ್ಧಿಸಿದ್ದರು?

ಚುನಾವಣೆಗೆ ಒಟ್ಟು 797 ಮಹಿಳೆಯರು ಸ್ಪರ್ಧಿಸಿದ್ದರು. ಈ ಪೈಕಿ ಬಿಜೆಪಿಯಿಂದ ಅತಿ ಹೆಚ್ಚು 69, ಕಾಂಗ್ರೆಸ್‌ನಿಂದ 41 ಮಹಿಳೆಯರು ಕಣಕ್ಕಿಳಿದಿದ್ದರು.

ಯಾರಿಗೆಲ್ಲ ಜಯ?

ಗೆದ್ದವರಲ್ಲಿ ಬಿಜೆಪಿಯಿಂದ ಕಂಗನಾ ರಾಣಾವತ್‌, ಹೇಮಾ ಮಾಲಿನಿ, ಡಿಎಂಕೆಯ ಕನಿಮೋಳಿ, ಕಾಂಗ್ರೆಸ್‌ನ ಪ್ರಿಯಾಂಕಾ ಜಾರಕಿಹೊಳಿ, ಪ್ರಭಾ ಮಲ್ಲಿಕಾರ್ಜುನ, ಎನ್‌ಸಿಪಿ (ಶರದ್‌) ಸುಪ್ರಿಯಾ ಸುಳೆ, ಎಸ್ಪಿಯ ಡಿಂಪಲ್‌ ಯಾದವ್‌ ಪ್ರಮುಖರಾಗಿದ್ದಾರೆ.

ಹಿಂದಿನ ಚುನಾವಣೆಗಳಲ್ಲಿ ಎಷ್ಟು ಮಹಿಳೆಯರಿದ್ದರು?

2019ರ 17 ಲೋಕಸಭೆ ಇತಿಹಾಸದಲ್ಲಿಯೇ ಅತಿ ಹೆಚ್ಚು 78 ಸಂಸದೆಯರು ಆಯ್ಕೆಯಾಗಿದ್ದರು. 2014ರ 16ನೇ ಲೋಕಸಭೆಯಲ್ಲಿ 64, 2009ರ 15ನೇ ಲೋಕಸಭೆಯಲ್ಲಿ 52 ಮಹಿಳೆಯರು ಇದ್ದರು. ಇನ್ನು ಮೊದಲ ಹಾಗೂ ಎರಡನೇ ಲೋಕಸಭೆ ಎರಡರಲ್ಲಿಯೂ 24 ಮಹಿಳೆಯರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ