ಆರು ವರ್ಷದ ಬಳಿಕ ಮೆಗಾ ಡೇರಿಗೆ ಉದ್ಘಾಟನೆ ಭಾಗ್ಯ

KannadaprabhaNewsNetwork |  
Published : Jul 03, 2024, 12:19 AM IST
ಸಿಕೆಬಿ-1 ಚಿಕ್ಕಬಳ್ಳಾಪುರ ಮೆಗಾ ಡೈರಿಸಿಕೆಬಿ-2  2018ರ ಮಾರ್ಚ್ 28 ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ ಮೆಗಾ ಡೈರಿ ಉಧ್ಘಾಟನೆಗೆ ಆಗಮಿಸಿದಾಗ ಜೊತೆಯಲ್ಲಿ ಅಂದಿನ ಶಾಸಕ ಹಾಗೂ ಇಂದಿನ ಸಂಸದ ಡಾ.ಕೆ.ಸುಧಾಕರ್ ಮತ್ತಿತರ ಮುಖಂಡರು(ಸಂಗ್ರಹ ಚಿತ್ರ) | Kannada Prabha

ಸಾರಾಂಶ

ಕೋಲಾರ- ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೋಚಿಮುಲ್)ನಿಂದ ಈ ಹಿಂದಿನ ಬಿಜೆಪಿ ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಒಕ್ಕೂಟ ಭೇರ್ಪಡೆ ಮಾಡಿ ಒಂದು ವರ್ಷ ಕಾರ್ಯಾಚರಣೆ ಮಾಡಿತ್ತಾದರೂ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

2018ರ ಮಾರ್ಚ್ 28ರಂದು ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೋಚಿಮುಲ್) ನಂದಿ ಕ್ರಾಸ್ ಬಳಿ 160 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಿದ್ದ ಮೆಗಾ ಡೇರಿ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ ಸಂದರ್ಭದಲ್ಲಿಯೇ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡೇರು ಉದ್ಘಾಟಿಸದೆ ಹಿಂತಿರುಗಿದ್ದರು.

ಈಗ ಮೆಗಾ ಡೇರಿ ಜೊತೆಗೆ ಕೋಚಿಮುಲ್‌ನಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಚಿಮೂಲ್) ರಚನೆಯಾಗಲಿದೆ, ಇವೆರಡರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವ ನಿರೀಕ್ಷೆ ಇದೆ. ಆರು ವರ್ಷಗಳಿಂದ ಉದ್ಘಾಟನೆ ಆಗದಿದ್ದರೂ ಮೆಗಾ ಡೇರಿಯಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟಿಸಲು ನೂತನ ಚಿಮೂಲ್ ಒಕ್ಕೂಟ, ನೂತನ ಹಾಲಿನ ಪಾಕೇಟ್ ಘಟಕ ಹಾಗೂ ಮೆಗಾ ಡೇರಿ ಸಿದ್ಧವಾಗುತ್ತಿವೆ. ಪ್ರತ್ಯೇಕಿಸಲು ತಾಂತ್ರಿಕ ಅಡ್ಡಿ

ಕೋಲಾರ- ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೋಚಿಮುಲ್)ನಿಂದ ಈ ಹಿಂದಿನ ಬಿಜೆಪಿ ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಒಕ್ಕೂಟ ಭೇರ್ಪಡೆ ಮಾಡಿ ಒಂದು ವರ್ಷ ಕಾರ್ಯಾಚರಣೆ ಮಾಡಿತ್ತಾದರೂ ಕೆಲ ತಾಂತ್ರಿಕ ಕಾರಣಗಳಿಂದ ಒಕ್ಕೂಟದ ಕೆಲ ನಿರ್ದೇಶಕರು ಹೈ ಕೋರ್ಟ್ ನಲ್ಲಿ ದಾವೆ ಹೂಡಿದ್ದರಿಂದ ಕೋಚಿಮುಲ್‌ ಮುಂದುವರಿದಿದೆ.

ಇತ್ತೀಚೆಗೆ ಕೋಲಾರ ಚಿಕ್ಕಬಳ್ಳಾಪುರಗಳ ಉಸ್ತುವಾರಿ ಸಚಿವರುಗಳಾದ ಬೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್, ಕೋಚಿಮುಲ್ ನ ಈಗಿನ ಅಧ್ಯಕ್ಷ ಹಾಗೂ ಮಾಲೂರು ಶಾಸಕ ಕೆ.ವೈ ನಂಜೇಗೌಡ.ಎರಡು ಜಿಲ್ಲೆಗಳ ಕಾಂಗ್ರೆಸ್ ಶಾಸಕರು. ಕೋಚಿಮುಲ್ ನಿರ್ದೇಶಕರುಗಳು ಸಹಕಾರ ಸಚಿವ ಕೆ.ಎನ್.ರಾಜಣ್ಣ ನೇತೃತ್ವದಲ್ಲಿ ಸಭೆ ಸೇರಿ ತಾತ್ವಕ ಒಪ್ಪಗೆ ನೀಡಿದ್ದು, ಕೋಚಿಮುಲ್ ಸಾಮಾನ್ಯ ಸಭೆಯಲ್ಲಷ್ಟೆ ಅನುಮೋಧನೆ ಆಆಗ ಬೇಕಿದ್ದು, ಇನ್ನು ಎರಡು ತಿಂಗಳಲ್ಲಿ ಚಿಮೂಲ್ ಆಗಿ ಪರಿವರ್ತನೆ ಆಗಲಿದೆ. ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಹ್ವಾನಿಸಲು ಸಹಾ ಸಿದ್ದತೆ ಮಾಡಿಕೊಳ್ಳುತ್ತಿರುವುದಾಗಿ ಮೂಲಗಳು ತಿಳಿಸಿವೆ. ಚಿಮುಲ್‌ ಉದ್ಘಾಟನೆ:

ಅಂದು ನೀತಿ ಸಂಹಿತೆಯ ಛಾಯೆ ಕಾರಣದಿಂದ ಉದ್ಘಾಟನೆ ಸಾಧ್ಯವಾಗಿರಲಿಲ್ಲ. ಈಗ ಮೆಗಾ ಡೇರಿ ಮತ್ತು ನೂತನ ಒಕ್ಕೂಟವನ್ನು ಅದ್ದೂರಿಯಾಗಿ ಉದ್ಘಾಟಿಸಬೇಕು ಎನ್ನುವ ಇಚ್ಛೆಯನ್ನು ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಚಿವರು ಮತ್ತು ಕಾರ್ಯಕರ್ತರು ಹೊಂದಿದ್ದಾರೆ. ಇತ್ತೀಚೆಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮೆಗಾ ಡೇರಿ ಉದ್ಘಾಟಿಸಿದ್ದರೂ ಸಹ ಈಗ ಸಿದ್ದರಾಮಯ್ಯ ಅವರಿಂದಲೇ ನೂತನ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಚಿಮೂಲ್) , 130 ಕೋಟಿ ವೆಚ್ಚದ ಹಾಲಿನ ಪಾಕೇಟ್ ಘಟಕ ಹಾಗೂ ಮೆಗಾ ಡೇರಿ ಉದ್ಘಾಟಿಸಲಾಗುವುದು ಎಂದು ಚಿಕ್ಕಬಳ್ಳಾಪುರ ತಾಲೂಕು ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ತಿಳಿಸಿದ್ದಾರೆ. ಉದ್ಘಾಟನೆ ಮರೆತ ಬಿಜೆಪಿ-ಜೆಡಿಎಸ್!

2018ರಲ್ಲಿ ಚುನಾವಣಾ ನೀತಿ ಸಂಹಿತೆ ಕಾರಣ ಮೆಗಾ ಡೇರಿ ಉದ್ಘಾಟನೆ ಸಾಧ್ಯವಾಗಲಿಲ್ಲ. ಆದರೆ ಮುಂದೆ ಬಂದ ಎಚ್.ಡಿ.ಕುಮಾರಸ್ವಾಮಿ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿಯೂ ಮೆಗಾ ಡೇರಿ ಉದ್ಘಾಟನೆ ಆಗಲಿಲ್ಲ. ಕೆಲಸ ಕಾರ್ಯಗಳು ನಡೆಯುತ್ತಿದ್ದರೂ ಭವನ ಅಧಿಕೃತವಾಗಿ ಉದ್ಘಾಟನೆ ಆಗಲಿಲ್ಲ. ಜಿಲ್ಲೆಯಲ್ಲಿ ಡಾ.ಕೆ.ಸುಧಾಕರ್ ಪ್ರಭಾವಿ ಸಚಿವರಾಗಿದ್ದರು. ಬಸವರಾಜ ಬೊಮ್ಮಾಯಿ ಕಡಿಮೆ ಅವಧಿಯಲ್ಲಿ ಹೆಚ್ಚು ಬಾರಿ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಎನಿಸಿದರೂ ಡೇರಿ ಉದ್ಘಾಟನೆಯತ್ತ ಚಿತ್ತ ಹರಿಸಿರಸಲಿಲ್ಲ.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ