ಮತಗಳ್ಳತನ: ರಾಗಾ ಆರೋಪಕ್ಕೆ ಬಿಜೆಪಿಯ ಲಿಂಬಾವಳಿ ತಿರುಗೇಟು

KannadaprabhaNewsNetwork |  
Published : Aug 09, 2025, 12:00 AM ISTUpdated : Aug 09, 2025, 05:58 AM IST
ಅರವಿಂದ ಲಿಂಬಾವಳಿ | Kannada Prabha

ಸಾರಾಂಶ

ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರದಲ್ಲಿ ಮತಗಳ್ಳತನ ನಡೆದಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ‘ಆಟಂ ಬಾಂಬ್‌’ ಸ್ಫೋಟಿಸಿದ್ದರು. ಅವರು ಮಾಡಿದ್ದ ಆರೋಪಗಳಿಗೆ ಮಹದೇವಪುರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಅರವಿಂದ ಲಿಂಬಾವಳಿ ತಿರುಗೇಟು ಕೊಟ್ಟಿದ್ದಾರೆ.  

 ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರದಲ್ಲಿ ಮತಗಳ್ಳತನ ನಡೆದಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ‘ಆಟಂ ಬಾಂಬ್‌’ ಸ್ಫೋಟಿಸಿದ್ದರು. ಅವರು ಮಾಡಿದ್ದ ಆರೋಪಗಳಿಗೆ ಮಹದೇವಪುರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಅರವಿಂದ ಲಿಂಬಾವಳಿ ತಿರುಗೇಟು ಕೊಟ್ಟಿದ್ದಾರೆ. ದಾಖಲೆಗಳನ್ನೂ ಒದಗಿಸಿದ್ದಾರೆ.

1. ಗುರುಕೀರತ್‌ ಸಿಂಗ್‌ ಡಾಂಗ್‌ ಎಂಬ 27 ವರ್ಷದ ಯುವ ಮತದಾರನ ಹೆಸರು ಬೆಂಗಳೂರು ಸೆಂಟ್ರಲ್‌ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದ 4 ಕಡೆಗಳಲ್ಲಿ ಪತ್ತೆಯಾಗಿದೆ. 4 ಗುರುತಿನ ಚೀಟಿಗಳನ್ನು ಆತ ಹೊಂದಿದ್ದಾನೆ.2. ಆದಿತ್ಯ ಶ್ರೀವಾಸ್ತವ ಎಂಬಾತನ ಹೆಸರು ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶದ ಮತದಾರರ ಪಟ್ಟಿಯಲ್ಲೂ ಪತ್ತೆಯಾಗಿದೆ

3. ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಸಿಂಗಲ್‌ ಬೆಡ್‌ರೂಂ ಮನೆಯ ವಿಳಾಸವನ್ನು ನೀಡಿ 80 ಮಂದಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿದ್ದಾರೆ4. ಬೆಂಗಳೂರು ಸೆಂಟ್ರಲ್‌ ಕ್ಷೇತ್ರ ವ್ಯಾಪ್ತಿಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುಂದಿತ್ತು. ಮಹದೇವಪುರದಲ್ಲಿ ಮಾತ್ರ ಬಿಜೆಪಿಗೆ ಲೀಡ್‌ ಸಿಕ್ಕಿತ್ತು

5. ಮಹದೇವಪುರ ವಿಧಾನಸಭಾ ಕ್ಷೇತ್ರಗಳಲ್ಲಿ 1 ಲಕ್ಷ ಮತಗಳ ಕಳುವಾಗಿವೆ. ಐದು ಮಾದರಿಯ ಚುನಾವಣಾ ಅಕ್ರಮಗಳು ನಡೆದಿವೆ6. ಮಹದೇವಪುರ ಕ್ಷೇತ್ರದ ಹಲವು ಮತದಾರರು ತಮ್ಮ ವಿಳಾವನ್ನು ‘00’ ಎಂದು ನಮೂದಿಸಿದ್ದಾರೆ

7.ಒಬ್ಬರೇ ಮತದಾರ ಹಲವು ಕಡೆ ಹೆಸರು ಹೊಂದಿದ್ದಾನೆ. ಗುರುತಿನ ಚೀಟಿಯನ್ನೂ ಪಡೆದಿದ್ದಾನೆ

1. ಮತದಾರರ ಪಟ್ಟಿಗೆ ಹೆಸರು ಸೇರಿಸಲು 4 ಬಾರಿ ಗುರುಕೀರತ್‌ ಸಿಂಗ್‌ ಅರ್ಜಿ ಸಲ್ಲಿಸಿದ್ದರು. 4 ಬಾರಿಯೂ ತಿರಸ್ಕಾರವಾಗಿತ್ತು. ಮತಪಟ್ಟಿ ಬಂದಾಗ ಬಳಿಕ 4 ಕಡೆ ಹೆಸರು ಕಾಣಿಸಿಕೊಂಡಿದೆ. ಬಳಿಕ 3 ಕಡೆ ಅವರು ಹೆಸರು ರದ್ದು ಕೋರಿದ್ದರು.

2. ಆತ ಲಖನೌದಲ್ಲಿ ಹೆಸರು ಸೇರಿಸಿದ್ದರು. ಮುಂಬೈನಲ್ಲಿ ಕೆಲಸಕ್ಕೆ ಸೇರಿದಾಗ ಅಲ್ಲೂ ಮತದಾರರಾಗಿದ್ದರು. ಬೆಂಗಳೂರಿಗೆ ಬಂದ ಮೇಲೆ ಇಲ್ಲೂ ಮತದಾರರ ಪಟ್ಟಿಗೆ ಹೆಸರು ಸೇರಿಸಿದ್ದಾರೆ. ಬಳಿಕ ಬೆಂಗಳೂರಲ್ಲೇ ಮತ ಹಾಕಿದ್ದಾರೆ 

3. ಕ್ಷೇತ್ರದಲ್ಲಿ ವಲಸಿಗರ ಸಂಖ್ಯೆ ಹೆಚ್ಚಿದೆ. ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಡಾರ್ಮೆಟ್ರಿಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿ ಹಲವು ರೂಮ್‌ಗಳು ಇವೆ.4. ಸುಳ್ಳು. 

4 ಕ್ಷೇತ್ರಗಳಲ್ಲಿ (ರಾಜಾಜಿನಗರ, ಗಾಂಧಿನಗರ, ಸಿ.ವಿ.ರಾಮನ್‌ನಗರ, ಮಹದೇವಪುರ)ಲ್ಲಿ ಬಿಜೆಪಿ ಅಭ್ಯರ್ಥಿಗೆ ಲೀಡ್‌ ದೊರಕಿತ್ತು

5. ಮಹದೇವಪುರ ಕ್ಷೇತ್ರ ಬಹಳ ವೇಗವಾಗಿ ಬೆಳೆಯುತ್ತಿದೆ.2016-17ರಲ್ಲಿ 1,48,743 ಆಸ್ತಿಗಳಿದ್ದವು. ಇದರಿಂದ 361 ಕೋಟಿ ರು. ತೆರಿಗೆ ಬಿಬಿಎಂಪಿಗೆ ಬರುತ್ತಿತ್ತು. 2024-25ರಲ್ಲಿ 3,59,468 ಆಸ್ತಿಗಳಿವೆ. ಇದರಿಂದ ಬಿಬಿಎಂಪಿಗೆ 885 ಕೋಟಿ ರು. ತೆರಿಗೆ ಬರುತ್ತಿದೆ.

6. ಸಿದ್ದರಾಮಯ್ಯ ಸ್ವಕ್ಷೇತ್ರ ವರುಣ, ಸಂಡೂರು, ಮಾನ್ವಿ, ಮಸ್ಕಿ ಕ್ಷೇತ್ರಗಳಲ್ಲೂ ಇದೇ ಸಂಖ್ಯೆ ಇದೆ

7. ಚಾಮರಾಜಪೇಟೆಯಲ್ಲಿ ಆಯಿಷಾ ಬಾನು, ಶಿವಾಜಿನಗರದಲ್ಲಿ ರೆಹಮತುಲ್ಲಾ ಕೂಡ 2 ಕಡೆ ಮತ ಹೊಂದಿದ್ದಾರೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಪ್ರಯತ್ನ ವಿಫಲವಾದರೂ ಪ್ರಾರ್ಥನೆ ಆಗಲ್ಲ: ಡಿಕೆ ಬ್ರದರ್ಸ್‌ ನಿಗೂಢ ಪೋಸ್ಟರ್‌ ಸಂಚಲನ
ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ