ವಿವಿಗಳ ಪಠ್ಯ, ಡಾಕ್ಟರೆಟ್‌ ನಿಯಮಕ್ಕೆ ಸಮಿತಿ

Published : May 21, 2026, 07:17 AM IST
vidhan soudha

ಸಾರಾಂಶ

ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಪಠ್ಯಕ್ರಮ ಬದಲಾವಣೆ, ಘಟಿಕೋತ್ಸವ ಶಿಷ್ಟಾಚಾರ ಮತ್ತು ವಸ್ತ್ರಸಂಹಿತೆ, ಗೌರವ ಡಾಕ್ಟರೆಟ್ ಪ್ರದಾನ ಮಾಡುವ ಸಂಬಂಧ ನಿಯಮಾವಳಿಗಳನ್ನು ರೂಪಿಸಲು ಮೂರು ಉಪ ಸಮಿತಿಗಳನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

 ಬೆಂಗಳೂರು :  ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಪಠ್ಯಕ್ರಮ ಬದಲಾವಣೆ, ಘಟಿಕೋತ್ಸವ ಶಿಷ್ಟಾಚಾರ ಮತ್ತು ವಸ್ತ್ರಸಂಹಿತೆ, ಗೌರವ ಡಾಕ್ಟರೆಟ್ ಪ್ರದಾನ ಮಾಡುವ ಸಂಬಂಧ ನಿಯಮಾವಳಿಗಳನ್ನು ರೂಪಿಸಲು ಮೂರು ಉಪ ಸಮಿತಿಗಳನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಪಠ್ಯಕ್ರಮ ಸಮಿತಿಗೆ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ತಿಮ್ಮೇಗೌಡ, ಘಟಿಕೋತ್ಸವ ಶಿಷ್ಟಾಚಾರ ಮತ್ತು ವಸ್ತ್ರಸಂಹಿತೆಗೆ ಜಾನಪದ ವಿವಿ ವಿಶ್ರಾಂತ ಕುಲಪತಿ ಡಾ। ಅಂಬಾಲಿಕೆ ಹಿರಿಯಣ್ಣ ಹಾಗೂ ಗೌರವ ಡಾಕ್ಟರೆಟ್ ಪ್ರದಾನಕ್ಕೆ ಬೆಂಗಳೂರು ಉತ್ತರ ವಿವಿ ವಿಶ್ರಾಂತ ಕುಲಪತಿ ಡಾ। ಟಿ.ಡಿ. ಕೆಂಪರಾಜು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಕಳೆದ ಫೆ.21ರಂದು ಸಾರ್ವಜನಿಕ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮ್ಮೇಳನದಲ್ಲಿ ಉಪ ಸಮಿತಿಗಳನ್ನು ರಚಿಸುವ ಸಂಬಂಧ ಚರ್ಚಿಸಲಾಗಿತ್ತು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಒಳಗೊಂಡ ಸಭೆಯಲ್ಲಿ ಉನ್ನತ ಶಿಕ್ಷಣ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಲಾಗಿತ್ತು. ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಪಠ್ಯಕ್ರಮ ಬದಲಾವಣೆ, ಘಟಿಕೋತ್ಸವ ಶಿಷ್ಟಾಚಾರ ಮತ್ತು ವಸ್ತ್ರಸಂಹಿತೆ, ಗೌರವ ಡಾಕ್ಟರೆಟ್ ಪ್ರದಾನ ಮಾಡುವುದಕ್ಕೆ ಪ್ರತ್ಯೇಕ ಸಮಿತಿ ರಚನೆಗೂ ನಿರ್ಣಯಿಸಲಾಗಿತ್ತು.

ಪ್ರೊ.ತಪಕ್‌ ಗವರ್ನರ್‌ ಪ್ರತಿನಿಧಿ:

ಮೂರು ಸಮಿತಿಗೆ ಒಡಿಸ್ಸಾದ ಚತ್ರಾಪುರ್ ಮಹಾರಾಜ ಚತ್ರಸಾಲ್ ಬಂಡಲ್‌ಖಂಡ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಟಿ.ಆರ್. ತಪಕ್ ಅವರನ್ನು ತಮ್ಮ ಪ್ರತಿನಿಧಿಯಾಗಿ ರಾಜ್ಯಪಾಲರು ನಾಮ ನಿರ್ದೇಶನ ಮಾಡಿದ್ದಾರೆ. ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಡಾ। ಕೆ.ಜಿ.ಚಂದ್ರಶೇಖರ್ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ. ಇವರಿಬ್ಬರ ಜತೆಗೆ ಎಲ್ಲ ತಂಡಗಳಿಗೂ ಒಬ್ಬ ಸದಸ್ಯರನ್ನು ನೇಮಿಸಲಾಗಿದೆ.

ಉಪ ಸಮಿತಿಗಳು ರಾಜ್ಯದ ವಿವಿಗಳೊಂದಿಗೆ ಸಮಾಲೋಚನೆ ನಡೆಸಿ ಕೈಗೊಂಡ ಕ್ರಮದ ವರದಿಯನ್ನು ತುರ್ತಾಗಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಪಠ್ಯಕ್ರಮ ಬದಲಾವಣೆ, ಘಟಿಕೋತ್ಸವ ಶಿಷ್ಟಾಚಾರ ಮತ್ತು ವಸ್ತ್ರಸಂಹಿತೆ, ಗೌರವ ಡಾಕ್ಟರೆಟ್ ಪ್ರದಾನ ಮಾಡುವ ಸಂಬಂಧ ನಿಯಮಾವಳಿಗಳನ್ನು ರೂಪಿಸಲು ಮೂರು ಉಪ ಸಮಿತಿಗಳನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸಮಿತಿ ಅಧ್ಯಕ್ಷರು ಯಾರು?

ಘಟಿಕೋತ್ಸವ ಶಿಷ್ಟಾಚಾರ ಮತ್ತು ವಸ್ತ್ರಸಂಹಿತೆಗೆ ಜಾನಪದ ವಿವಿ ವಿಶ್ರಾಂತ ಕುಲಪತಿ ಡಾ। ಅಂಬಾಲಿಕೆ ಹಿರಿಯಣ್ಣ, ಗೌರವ ಡಾಕ್ಟರೆಟ್ ಪ್ರದಾನಕ್ಕೆ ಬೆಂಗಳೂರು ಉತ್ತರ ವಿವಿ ವಿಶ್ರಾಂತ ಕುಲಪತಿ ಡಾ। ಟಿ.ಡಿ.ಕೆಂಪರಾಜು, ಪಠ್ಯಕ್ರಮ ಸಮಿತಿಗೆ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಅಧ್ಯಕ್ಷರಾಗಿ ನೇಮಕ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಜಿಬಿಎಗೆ ಚುನಾವಣೆ ಆ.31ರೊಳಗೆ ನಡೆಸಲೇಬೇಕು: ಸುಪ್ರೀಂ ಆದೇಶ
15,000 ಶಿಕ್ಷಕರ ನೇಮಕಾತಿಗೆ ಸಿಎಂ ಒಪ್ಪಿಗೆ