;Resize=(412,232))
ನವದೆಹಲಿ: ಎಸ್‌ಐಆರ್ ಮೂಲಕ ಚುನಾವಣಾ ಆಯೋಗ ಮತಗಳವು ಮಾಡಿರುವ ಹಾಗೂ ಸಿಇಸಿ ಜ್ಞಾನೇಶ್ ಕುಮಾರ್ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಯ ನೇತೃತ್ವ ಮತ್ತು ಶ್ರೇಯದ ವಿಚಾರದಲ್ಲಿ ಸಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿಗರ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ವಾಕ್ಸಮರ ಶುರುವಾಗಿದೆ.
ಸಿಜೆಪಿ ವಕ್ತಾರ ಆಶುತೋಷ್ ರಾಂಕಾ, ‘ಅಭಿಜೀತ್ ದೀಪ್ಕೆಯವರು ಲಕ್ಷಾಂತರ ಭಾರತೀಯರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರುವುದನ್ನು ಟೀಕಿಸಲು, ಸ್ವಯಂ-ಘೋಷಿತ ಉದಾರವಾದಿಗಳ ಸಂಪೂರ್ಣ ವ್ಯವಸ್ಥೆಯೇ ಸಕ್ರಿಯಗೊಂಡಿದೆ. ತಮಾಷೆಯೆಂದರೆ, ಈ ವ್ಯವಸ್ಥೆಯು ಟ್ವಿಟರ್‌ನಲ್ಲಷ್ಟೇ ಅಸ್ತಿತ್ವದಲ್ಲಿದ್ದರೂ, ತಾವೇ ಪ್ರಜಾಪ್ರಭುತ್ವದ ಏಕೈಕ ರಕ್ಷಕರು ಎಂದು ಭಾವಿಸುತ್ತಾರೆ’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ಕುಟುಕಿದ್ದರು.
ಇದರಿಂದ ಕೆರಳಿದ ಕಾಂಗ್ರೆಸ್, ‘ರಾಹುಲ್ ಗಾಂಧಿ ಮತ್ತು ಇಂಡಿಯಾ ಕೂಟವು ರಾಜ್ಯ ಚುನಾವಣೆಗಳಲ್ಲಿನ ಮತದಾರರ ಪಟ್ಟಿಯ ಲೋಪದೋಷಗಳು ಹಾಗೂ ಮತ ಕಳ್ಳಗಳವನ್ನು ವ್ಯವಸ್ಥಿತವಾಗಿ ಬಯಲಿಗೆಳೆದಿದೆ. ಆದರೆ ಇಂತಹ ಸಾಂಸ್ಥಿಕ ವಿರೋಧದ ಪ್ರಯತ್ನಗಳನ್ನು ಹಳಿತಪ್ಪಿಸಲು ಈ ಗುಂಪು ಯತ್ನಿಸುತ್ತಿದೆ’ ಎಂದು ಆರೋಪಿಸಿದೆ.