ಬಿಜೆಪಿಗರ ಮೇಲಿನ SIR ಎಫ್ಐಆರ್‌ ರದ್ದಾಗದಿದ್ರೆ ಠಾಣೆಗೆ ಮುತ್ತಿಗೆ : ಬಿವೈವಿ

Published : Oct 04, 2026, 05:03 AM IST
BY Vijayendra

ಸಾರಾಂಶ

ಎಸ್‌ಐಆರ್‌ಗೆ ಸಂಬಂಧಿಸಿದ ಫಾರ್ಮ್‌ 7 ಅರ್ಜಿಗಳನ್ನು ಸಲ್ಲಿಸಿದವರ ವಿರುದ್ಧ ಪರಿಶೀಲನೆ ನಡೆಸದೇ ಎಫ್‌ಐಆರ್‌ ದಾಖಲಿಸುವುದನ್ನು ಬಿಜೆಪಿ ಬಲವಾಗಿ ವಿರೋಧಿಸಿದೆ. ‘ನಿಯಮಾನುಸಾರ ಫಾರ್ಮ್ 7 ಸಲ್ಲಿಸಿದ ಬಿಜೆಪಿ ಕಾರ್ಯಕರ್ತರ ಮೇಲಿನ ಎಫ್‌ಐಆರ್ ರದ್ದು ಮಾಡದಿದ್ದರೆ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕುತ್ತೇವೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಸಿದ್ದಾರೆ.

ಬೆಂಗಳೂರು : ಎಸ್‌ಐಆರ್‌ಗೆ ಸಂಬಂಧಿಸಿದ ಫಾರ್ಮ್‌ 7 ಅರ್ಜಿಗಳನ್ನು ಸಲ್ಲಿಸಿದವರ ವಿರುದ್ಧ ಪರಿಶೀಲನೆ ನಡೆಸದೇ ಎಫ್‌ಐಆರ್‌ ದಾಖಲಿಸುವುದನ್ನು ಬಿಜೆಪಿ ಬಲವಾಗಿ ವಿರೋಧಿಸಿದೆ. ‘ನಿಯಮಾನುಸಾರ ಫಾರ್ಮ್ 7 ಸಲ್ಲಿಸಿದ ಬಿಜೆಪಿ ಕಾರ್ಯಕರ್ತರ ಮೇಲಿನ ಎಫ್‌ಐಆರ್ ರದ್ದು ಮಾಡದಿದ್ದರೆ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕುತ್ತೇವೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಸಿದ್ದಾರೆ.

ಈ ಸಂಬಂಧ ರಾಜ್ಯ ಬಿಜೆಪಿ ನಾಯಕರ ನಿಯೋಗವು ಶನಿವಾರ ಡಿಜಿಪಿ ಡಾ.ಎಂ.ಎ.ಸಲೀಂ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು. ‘ಚುನಾವಣಾ ಆಯೋಗದ ನಿಯಮಾನುಸಾರ ಫಾರ್ಮ್ 7 ಸಲ್ಲಿಸಿದ ಬಿಜೆಪಿ ಕಾರ್ಯಕರ್ತರ ಮೇಲೆ ರಾಜ್ಯ ಸರ್ಕಾರ ಪೊಲೀಸ್ ಇಲಾಖೆ ಮೂಲಕ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ. ಈ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ಒತ್ತಡ ಹೇರಿ ಎಫ್‌ಐಆರ್‌ ದಾಖಲು:

ರಾಜ್ಯ ಸರ್ಕಾರ ಪೊಲೀಸ್‌ ಇಲಾಖೆಯನ್ನು ರಾಜಕೀಯ ಬಳಸಿಕೊಂಡು ಬಿಎನ್‌ಎಸ್ ಕಾಯ್ದೆಯಡಿ ಬಿಜೆಪಿ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಿದೆ. ನಾವು ಸುಮ್ಮನೆ ಕೂರುವುದಿಲ್ಲ. ನಮ್ಮ ಕಾರ್ಯಕರ್ತರ ರಕ್ಷಣೆಗೆ ಯಾವುದೇ ಹಂತಕ್ಕೂ ಹೋಗಲು ಸಿದ್ಧ. ಅನ್ಯಾಯವಾಗಿ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಇಲ್ಲವಾದರೆ ಪೊಲೀಸ್ ಠಾಣೆಗಳ ಮುಂದೆ ಮುತ್ತಿಗೆ ಹಾಗೂ ಪ್ರತಿಭಟನೆ ಸೇರಿದಂತೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಸಿಎಂ ಗೂಂಡಾಗಿರಿ, ದಾದಾಗಿರಿ:

‘ಅಧಿಕಾರದಲ್ಲಿರುವ ಕಾರಣಕ್ಕೆ ಪೊಲೀಸ್ ವ್ಯವಸ್ಥೆಯನ್ನು ಮನಬಂದಂತೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗೂಂಡಾಗಿರಿ, ದಾದಾಗಿರಿ ಮಾಡಲು ಹೊರಟಿದ್ದಾರೆ. ತಾವು ಕೊತ್ವಾಲ್ ಶಿಷ್ಯ ಎಂಬುದನ್ನು ಮತ್ತೆ ನೆನಪು ಮಾಡಿಕೊಳ್ಳಲು ಹೊರಟಂತಿದೆ. ಆದರೆ, ಅಧಿಕಾರ ಯಾರಪ್ಪನ ಮನೆಯ ಆಸ್ತಿಯಲ್ಲ. ಅಧಿಕಾರದ ದುರುಪಯೋಗ ನಿಲ್ಲಿಸಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

SIR ಅಕ್ರಮದ ತನಿಖೆಗೆ ಎಸ್ಐಟಿ ಇಲ್ಲ: ಸಿಎಂ ಡಿಕೆಶಿ

ಮೈಸೂರು: ಎಸ್‌ಐಆರ್‌ ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಸದ್ಯಕ್ಕೆ ಎಸ್ಐಟಿ ತನಿಖೆ ನಡೆಸುವುದಿಲ್ಲ, ಆಯೋಗವೇ ತನಿಖೆ ಮಾಡುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು. ಅಲ್ಲದೆ, ನಾನು ಚುನಾವಣಾ ಆಯುಕ್ತರ ಮುಂದೆ ಧರಣಿ ಕುಳಿತಿಲ್ಲ. ಯಾವ ಕಾನೂನನ್ನೂ ಉಲ್ಲಂಘಿಸಿಲ್ಲ. ಸಮಸ್ಯೆಯನ್ನು ಆಯೋಗದ ಗಮನಕ್ಕೆ ತಂದೆವಷ್ಟೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

50 ಲಕ್ಷ ಮತ ಡಿಲೀಟ್‌ ಯತ್ನ ಬಗ್ಗೆ ದಾಖಲೆ ಕೊಡಿ: ಬಿವೈವಿ
SIR ವೇಳೆ ಕೈಬಿಟ್ಟ ಮತದಾರರ ಹೆಸರು ಸೇರ್ಪಡೆಗೆ ಅಭಿಯಾನ