ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಆಯೋಜಿಸಿದ್ದ ನೂತನ ಸಚಿವರಾದ ಎನ್.ಚಲುವರಾಯಸ್ವಾಮಿ ಮತ್ತು ಪಿ.ಎಂ.ನರೇಂದ್ರಸ್ವಾಮಿ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಾವು ಇಲ್ಲಿಯವರೆಗೂ ಜಿಲ್ಲೆಯಲ್ಲಿ ೧೦ ಸಾವಿರ ಕೋಟಿ ರು. ಹಣ ತಂದು ಅಭಿವೃದ್ಧಿ ಮಾಡಿದ್ದೇವೆ. ಜೆಡಿಎಸ್‌ನವರು ೮೫೦೦ ಕೋಟಿ ಅಂತ ಪೇಪರ್ ಅಲ್ಲಾಡಿಸೋದಲ್ಲ. ನಾವು ತಂದಿರುವ ೧೦ ಸಾವಿರ ಕೋಟಿ ಹಣಕ್ಕೆ ಲೆಕ್ಕ ಕೊಡಿ ಅಂತ ಪತ್ರ ಬರೆದಿದ್ದಾರೆ. ಇವರಿಗೆ ಏನು ಲೆಕ್ಕ ಕೋಡೋದು?, ಲೆಕ್ಕ ಕೊಡುವುದಕ್ಕೆ ನಾನು ಅವರ ಗುಲಾಮನಲ್ಲ. ನಾನು ಜನರ ಗುಲಾಮ. ಜನರಿಗೆ ನಾನು ಲೆಕ್ಕ ಕೊಡುವುದಕ್ಕೆ ಸಿದ್ಧನಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.ಅಭಿವೃದ್ಧಿ ವಿಷಯದಲ್ಲಿ ನೇರಾ ನೇರಾ ಚರ್ಚೆಗೆ ಸಿದ್ಧನಿದ್ದೇನೆ. ವಿರೋಧಿ ಸ್ನೇಹಿತರು ಎಲ್ಲಿಗೆ ಬೇಕಾದರೂ ಕರೆಯಲಿ ಬಂದು ಉತ್ತರ ಕೊಡುತ್ತೇನೆ ಎಂದು ಸವಾಲು ಹಾಕಿದ ಚಲುವರಾಯಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ ಕೂಡಲೇ ಕಾಂಗ್ರೆಸ್ ಕತೆ ಮುಗಿದೇ ಹೋಯಿತು. ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಇನ್ನು ಕತೆಯೂ ಮುಗಿಯಿತು ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡಿದ್ದೂ ಮಾಡಿದ್ದೇನೆ. ನಮ್ಮನ್ನು ಮುಗಿಸುವ ಶಕ್ತಿ ಇರೋದು, ಅಧಿಕಾರಕ್ಕೆ ತಂದು ಕೂರಿಸುವ ಶಕ್ತಿ ಇರುವುದು ಜನರ ಕೈಯ್ಯಲ್ಲಿ ಮಾತ್ರ. ಅರ್ಹತೆ ನೋಡಿ ಮಂತ್ರಿಸ್ಥಾನ ನೀಡುವವರು ನಮ್ಮ ನಾಯಕರು. ಇದರಿಂದ ನೀವೇಕೆ ವಿಚಲಿತರಾಗುತ್ತೀರಿ. ನಿಮಗೂ ಅಧಿಕಾರ ಸಿಕ್ಕಿದೆಯಲ್ಲ, ಅಭಿವೃದ್ಧಿ ಮಾಡಿ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ-ಡಿಕೆಶಿ ಮುಂದೆ ನಿಮ್ಮ ವಿರೋಧ ಪಕ್ಷದವರ ಆಟ ನಡೆಯಲ್ಲ. ನಮ್ಮ ಪಕ್ಷದವರ ಬಗ್ಗೆ ಯೋಚಿಸುವುದನ್ನು ಬಿಟ್ಟು ನಿಮ್ಮದನ್ನು ನೀವು ಸರಿ ಮಾಡಿಕೊಳ್ಳಿ. ಬಿಜೆಪಿಯವರಿಗೆ ಯತ್ನಾಳ್, ಕುಮಾರ್ ಬಂಗಾರಪ್ಪ ಅವರನ್ನು ಸಮಾಧಾನ ಮಾಡಲು ಆಗುತ್ತಾ, ಜೆಡಿಎಸ್‌ನವರಿಗೆ ಜಿ.ಟಿ.ದೇವೇಗೌಡರನ್ನು ಸಮಾಧಾನಪಡಿಸಲು ಆಗುತ್ತಾ ಎಂದು ಪ್ರಶ್ನಿಸಿದರು.
ರಾಜ್ಯದ ಯಾವುದೇ ಜಿಲ್ಲೆಯನ್ನು ಗಂಡುಭೂಮಿ ಎನ್ನದಿದ್ದರೂ ಮಂಡ್ಯವನ್ನು ಗಂಡು ಭೂಮಿ ಅಂತಾರೆ. ಬೇರೆ ಜಿಲ್ಲೆಗಳ ನೆಲದಲ್ಲಿಲ್ಲದ ವೈಶಿಷ್ಟ್ಯತೆ ಈ ಜಿಲ್ಲೆಯಲ್ಲಿದೆ. ರಾಜ್ಯ, ರಾಷ್ಟ್ರಮಟ್ಟದ ನಾಯಕರು ಈ ಜಿಲ್ಲೆಯಿಂದ ಉದಯಿಸಿದ್ದಾರೆ. ಮಂಡ್ಯ ಎಂದರೆ ಇಂಡಿಯಾ ಎನ್ನುವಷ್ಟರ ಮಟ್ಟಿಗೆ ಖ್ಯಾತಿ ಗಳಿಸಿದೆ. ಜಿಲ್ಲೆಯಲ್ಲಿ ಅನೇಕ ಹಿರಿಯ ನಾಯಕರು ಆಡಳಿತ ಮಾಡಿದ್ದಾರೆ. ನಮ್ಮನ್ನೂ ಈ ಸ್ಥಾನಕ್ಕೆ ಕೂರಿಸಿದ್ದೀರಿ ಎಂದರೆ ಅದು ನಿಮ್ಮ ಭಿಕ್ಷೆ. ನೀವು ಕೊಟ್ಟ ಭಿಕ್ಷೆಯಿಂದ ನಮಗೆ ಈ ಅವಕಾಶ ಸಿಕ್ಕಿದೆ. ಮತ್ತೊಮ್ಮೆ ಮಂತ್ರಿ ಆಗೋದು ಅಷ್ಟು ಸುಲಭವಲ್ಲ. ಜನರ ಪ್ರೀತಿ ಪ್ರೀತಿ ಇದ್ದರೆ ಮಾತ್ರ ಅದು ಸಾಧ್ಯ ಎಂದು ಹೇಳಿದರು.