ಟ್ರಾಫಿಕ್‌ ಪೊಲೀಸ್‌ ಪೇದೆ ಮೇಲೆ ಹಲ್ಲೆ ಮಾಡಿದ ಜೆಡಿಎಸ್‌ ಮುಖಂಡನ ಬಂಧಿಸಿ ಬಿಡುಗಡೆ

KannadaprabhaNewsNetwork |  
Published : Aug 18, 2026, 02:00 AM IST
Manjanna

ಸಾರಾಂಶ

ಕರ್ತವ್ಯನಿರತ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ಸಂಬಂಧ ಜೆಡಿಎಸ್‌ ಮುಖಂಡನನ್ನು ಹುಳಿಮಾವು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಗೊಟ್ಟಿಗೆರೆ ನಿವಾಸಿ ಮಂಜುನಾಥ ಸಿ ಅಲಿಯಾಸ್‌ ಗೊಟ್ಟಿಗೆರೆ ಮಂಜಣ್ಣ ( 65) ಬಂಧಿತ ಆರೋಪಿ.

 ಬೆಂಗಳೂರು: ಕರ್ತವ್ಯನಿರತ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ಸಂಬಂಧ ಜೆಡಿಎಸ್‌ ಮುಖಂಡನನ್ನು ಹುಳಿಮಾವು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಗೊಟ್ಟಿಗೆರೆ ನಿವಾಸಿ ಮಂಜುನಾಥ ಸಿ ಅಲಿಯಾಸ್‌ ಗೊಟ್ಟಿಗೆರೆ ಮಂಜಣ್ಣ ( 65) ಬಂಧಿತ ಆರೋಪಿ. ಹಲ್ಲೆಗೊಳಗಾದ ಪೊಲೀಸ್‌ ಕಾನ್‌ಸ್ಟೇಬಲ್‌ ಅರುಣ್‌ ಮಂಜಪ್ಪ ಬಡಗೌಡ್ರ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೊಟ್ಟಿಗೆರೆ ಜಂಕ್ಷನ್‌ನಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಈ ಘಟನೆ ನಡೆದಿತ್ತು.

ಪ್ರಕರಣದ ವಿವರ:

ಭಾನುವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಹುಳಿಮಾವು ಪೊಲೀಸ್‌ ಠಾಣಾ ವ್ಯಾಪ್ತಿಯ ಗೊಟ್ಟಿಗೆರೆ ಜಂಕ್ಷನ್‌ನ ಬಿ.ಜಿ ರಸ್ತೆಯಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ ಅರುಣ್‌ ಮಂಜಪ್ಪ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಸಿಗ್ನಲ್‌ ಬಳಿ ಬಂದ ಗೊಟ್ಟಿಗೆರೆ ಮಂಜನಾಥ ಎಂಬುವವರ ಬೆಂಜ್‌ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ಆರೋಪಿಯು ನನ್ನ ಕಾರನ್ನೇ ಅಡ್ಡ ಹಾಕುತ್ತೀಯಾ? ಎಷ್ಟು ಧೈರ್ಯ ನಿಂಗೆ, ನಾನು ಯಾರು ಅಂತಾ ಗೊತ್ತಿಲ್ವಾ ನಿಂಗೆ ಎಂದು ಕೊರಳ ಪಟ್ಟಿಯನ್ನು ಹಿಡಿದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ತಲೆಯಿಂದ ಮುಖಕ್ಕೆ ಗುದ್ದಿ ಹಾಗೂ ಕೈಯಿಂದ ಮುಖಕ್ಕೆ ಹಲ್ಲೆ ನಡೆಸಿದ್ದ.

ಈ ವೇಳೆ ಸಾರ್ವಜನಿಕರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಗೊಟ್ಟಿಗೆರೆ ಮಂಜಣ್ಣ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಕಾಲಿನಿಂದ ಒದೆಯಲು ಯತ್ನಿಸಿ ನಂತರ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ ಹುಳಿಮಾವು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಸೋಮವಾರ ಬೆಳಗ್ಗಿನ ಜಾವ ಮೀನಾಕ್ಷಿ ಮಾಲ್‌ ಬಳಿ ಆರೋಪಿ ಗೊಟ್ಟಿಗೆರೆ ಮಂಜಣ್ಣನನ್ನು ಬಂಧಿಸಿದ್ದಾರೆ.

ಜಾಮೀನು ಮಂಜೂರು:

ಬಂಧಿತ ಆರೋಪಿ ಗೊಟ್ಟಿಗೆರೆ ಮಂಜಣ್ಣನನ್ನು ಸೋಮವಾರ ಕೋರ್ಟ್‌ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.

ಕರ್ತವ್ಯನಿರತ ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ ನಡೆಸಿರುವುದು ಬಾಡಿ ವೋರ್ನ್‌ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಲ್ಲೆ ನಡೆಸಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

-ಎಂ.ನಾರಾಯಣ, ಎಲೆಕ್ಟ್ರಾನಿಕ್‌ ಸಿಟಿ ವಿಭಾಗದ ಡಿಸಿಪಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ವಂದೇಗೆ ತಡೆ ಅಕ್ಷಮ್ಯ ಪಾಪ: ಸೋನಿಯಾ ವಿರುದ್ಧ ಶಾ ಕಿಡಿ
ಹನೂರಲ್ಲಿ ನಡೆದಿದ್ದು ತಮಿಳರ ಹತ್ಯಾಕಾಂಡ: ತ.ನಾಡು ಸಿಎಂ