ಮುಸ್ಲಿಮರ ಸಂಖ್ಯೆ ಎಂದಿಗೂ ಹಿಂದುಗಿಂತ ಹೆಚ್ಚಲ್ಲ : ಒವೈಸಿ

KannadaprabhaNewsNetwork |  
Published : Feb 08, 2026, 02:00 AM ISTUpdated : Feb 08, 2026, 04:41 AM IST
Asaduddin Owaisi,

ಸಾರಾಂಶ

‘ಭಾರತದಲ್ಲಿ ಮುಸಲ್ಮಾನರು ಎಂದಿಗೂ ಹಿಂದೂಗಳ ಜನಸಂಖ್ಯೆ ಮೀರಿಸುವುದಿಲ್ಲ’ ಎಂದು ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. ಹಣದುಬ್ಬರ ಹೆಚ್ಚುತ್ತದೆ.  ಎಷ್ಟು ವೆಚ್ಚ ಮಾಡಬೇಕಾಗಿ ಬರುತ್ತದೆ ಎಂಬುದರ ಬಗ್ಗೆ  ಚಿಂತಿಸಲ್ಲ. ಬದಲಾಗಿ ಮುಸ್ಲಿಮರ ಸಂಖ್ಯೆ ಹೆಚ್ಚುತ್ತದೆ ಎಂದು ದೂರುತ್ತಾರೆ. 

ಹೈದರಾಬಾದ್‌: ‘ಭಾರತದಲ್ಲಿ ಮುಸಲ್ಮಾನರು ಎಂದಿಗೂ ಹಿಂದೂಗಳ ಜನಸಂಖ್ಯೆ ಮೀರಿಸುವುದಿಲ್ಲ’ ಎಂದು ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ.

ಭಾರತದಲ್ಲಿ ಯುವಕರ ಜನಸಂಖ್ಯೆ ಹೆಚ್ಚಿದೆ

ಇಲ್ಲಿ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಒವೈಸಿ, ‘ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಯುವಕರ ಜನಸಂಖ್ಯೆ ಹೆಚ್ಚಿದೆ ಎಂದಿದ್ದಾರೆ. 

ಉದ್ಯೋಗ ಸೃಷ್ಟಿಗೆ ಮೋದಿ ಏನು ಮಾಡಿದ್ದಾರೆ.

ಹಾಗಿದ್ದರೆ ಅವರ ಉದ್ಯೋಗ ಸೃಷ್ಟಿಗೆ ಮೋದಿ ಏನು ಮಾಡಿದ್ದಾರೆ. ಅವರಿಗೆ ಯಾವ ಉದ್ಯೋಗ ಕೌಶಲ್ಯ ಕಲಿಸಿದ್ದಾರೆ. ಇನ್ನು 20 ವರ್ಷಗಳಲ್ಲಿ ಇವರಿಗೆಲ್ಲಾ ವಯಸ್ಸಾಗುತ್ತದೆ. ಆಗ ಹಣದುಬ್ಬರ ಹೆಚ್ಚುತ್ತದೆ. ಅವರೆಲ್ಲಾ ಎಷ್ಟು ವೆಚ್ಚ ಮಾಡಬೇಕಾಗಿ ಬರುತ್ತದೆ ಎಂಬುದರ ಬಗ್ಗೆ ಯಾರೂ ಚಿಂತಿಸಲ್ಲ. ಅದರ ಬದಲಾಗಿ ಮುಸ್ಲಿಮರ ಸಂಖ್ಯೆ ಹೆಚ್ಚುತ್ತದೆ ಎಂದು ದೂರುತ್ತಾರೆ. ಆಧರೆ ಮುಸ್ಲಿಮರ ಜನಸಂಖ್ಯೆ ಸ್ಥಿರವಾಗಿರುತ್ತದೆ.

 ಎಂದಿಗೂ ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಮೀರಿಸಲ್ಲ. ಮೊದಲೆಲ್ಲಾ ಜನಸಂಖ್ಯಾ ಏರಿಕೆ ನಿಯಂತ್ರಣ ಮತ್ತು ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿಗೆ ಇದೀಗ ಜನಸಂಖ್ಯೆ ಕೊರತೆಯ ಅಪಾಯದ ಅರವಾಗಿದೆ. ಕೇವಲ ವಯಸ್ಕರ ಸಂಖ್ಯೆ ದೇಶಕ್ಕೆ ಹೇಗೆ ಅಪಾಯಕಾರಿ ಆಗಬಲ್ಲದು ಎಂದು ಅವರಿಗೂ ಗೊತ್ತಾಗಿದೆ’ ಎಂದಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ
ಬಿಜೆಪಿಯ ರಿತು ಮುಂಬೈಗೆ ಮೊದಲ ಬಿಜೆಪಿ ಮೇಯರ್‌