;Resize=(412,232))
ನವದೆಹಲಿ : ಕಳೆದ ಕೆಲವು ದಿನಗಳಿಂದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಿತ್ಯ ಒಂದಿಲ್ಲೊಂದು ಚಲೋ ಹೋರಾಟ ನಡೆಸುತ್ತಿರುವ ಇಂಡಿಯಾ ಕೂಟದ ನಾಯಕರು ಶುಕ್ರವಾರ ರಾಷ್ಟ್ರಪತಿ ಭವನ ಚಲೋ ನಡೆಸುವ ಸಾಧ್ಯತೆ ಇದೆ.
ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ‘ಅ.2ರಂದೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಭೇಟಿಯ ಸಮಯಾವಕಾಶ ಬಯಸಿ ಕೋರಿಕೆ ಸಲ್ಲಿಸಲಾಗಿದೆ. ಅ.7, 8 ಹಾಗೂ 9ಕ್ಕೆ ಭೇಟಿಗೆ ಅವಕಾಶ ನೀಡಲು ಕೇಳಲಾಗಿತ್ತು. ಅ.9ರ (ಶುಕ್ರವಾರ) ವರೆಗೆ ಅವರ ಉತ್ತರಕ್ಕೆ ಕಾಯಲಿದ್ದೇವೆ. ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದರು.
ಈ ಬಗ್ಗೆ ಮೂಲಗಳು ಪ್ರತಿಕ್ರಿಯಿಸಿ, ‘ಒಂದು ವೇಳೆ ರಾಷ್ಟ್ರಪತಿಗಳಿಂದ ಉತ್ತರ ಬರದಿದ್ದರೂ ಇಂಡಿಯಾ ಕೂಟದ ನಾಯಕರು ರಾಷ್ಟ್ರಪತಿ ಭವನ ಚಲೋ ನಡೆಸುವ ಸಾಧ್ಯತೆ ಇದೆ’ ಎಂದಿವೆ.
ಕಳೆದ ಕೆಲವು ದಿನದಲ್ಲಿ ನಾಯಕರು ಚುನಾವಣಾ ಆಯೋಗ ಚಲೋ, ಜಂತರ್ ಮಂತರ್ ಚಲೋ, ರಾಜಘಾಟ್ ಚಲೋ ಅಭಿಯಾನ ನಡೆಸಿದ್ದರು.