ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ ಮಾತನಾಡಿ, ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ಎಡಿಜಿಪಿ ಚಂದ್ರಶೇಖರ್ ಅವಹೇಳನಕಾರಿ ಪದ ಬಳಕೆ ಮಾಡಿರುವುದನ್ನು ನೋಡಿದರೆ ಎಡಿಜಿಪಿ ಚಂದ್ರಶೇಖರ್ ಬ್ಲ್ಯಾಕ್ ಮೇಲರ್ ಮತ್ತು ಕ್ರಿಮಿನಲ್ ಆಗಿರಬಹುದು ಎನಿಸುತ್ತದೆ. ಚಂದ್ರಶೇಖರ್‌ಗೆ ರಾಜಕಾರಣ ಮಾಡಲು ಇಷ್ಟ ಆದರೆ ಖಾಕಿ ಕಳಚಿ ರಾಜಕಾರಣಕ್ಕೆ ಬರಲಿ ಎಂದರು.
ಹಿಮಾಚಲಪ್ರದೇಶ ಕೇಡರ್ಮಾನನಷ್ಟ ಮೊಕದ್ದಮೆ, ಅಧಿಕಾರ ದುರುಪಯೋಗ, ಹಕ್ಕುಚ್ಯುತಿ ಈ ರೀತಿಯ ಕಾನೂನು ಹೋರಾಟಗಳು ಇವೆ. ಕುಮಾರಣ್ಣನಿಗೆ ಬೈಯಲು ಬೈಯ್ಯಲು ಸರ್ಕಾರ ಸಂಬಳಕೊಟ್ಟು ಇಟ್ಟುಕೊಂಡಿದೆಯಾ ಎಂದು ಪ್ರಶ್ನಿಸಿದ ಅವರು, ಚಂದ್ರಶೇಖರ್ ಮೂಲತಃ ಹಿಮಾಚಲ ಪ್ರದೇಶ ಐಪಿಎಸ್ ಕೇಡರ್ ಗೆ ಸೇರಿದವರಾಗಿದ್ದರೂ, ರಾಜಕೀಯ ಪ್ರಭಾವ ಬೀರಿ ಕರ್ನಾಟಕ ರಾಜ್ಯಕ್ಕೆ ವರ್ಗಾವಣೆಗೊಂಡು, ತದನಂತರ ಕರ್ನಾಟಕ ಐ.ಪಿ.ಎಸ್. ಕೇಡರ್‌ನಲ್ಲಿ ವಿಲೀನಗೊಂಡಿದ್ದಾರೆ ಎಂದು ಆರೋಪಿಸಿದರು.
ಎಡಿಜಿಪಿ ಸರ್ಕಾರದ ಕೈಗೊಂಬೆ
ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಮಾತನಾಡಿ, ಕೇಂದ್ರದ ಮಂತ್ರಿ ಆದಂತಹ ಹೆಚ್.ಡಿ. ಕುಮಾರ ಸ್ವಾಮಿ ಅವರನ್ನು ರಾಜಕೀಯ ದುರುದ್ದೇಶ ದಿಂದ ಬೈಯುವುದು ತಪ್ಪು , ಎಡಿಜಿಪಿ ಚಂದ್ರ ಶೇಖರ್ ಅವರು ರಾಜ್ಯ ಸಹಕಾರ ಕೈಗೊಂಬೆ ರೀತಿ ಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಡಿಜಿಪಿ ಚಂದ್ರ ಶೇಖರ್ ಅವರು ಕುಮಾರ ಸ್ವಾಮಿ ಎಂದರೆ ಏನು ಅಂತ ತಿಳಿದು ಕೊಂಡಿದ್ದಾರೆ. ಎರಡು ಬಾರಿ ರಾಜ್ಯದ ಮುಖ್ಯ ಮಂತ್ರಿಯಾಗಿದ್ದವರು. ಆದರೂ ಎಚ್ಡಿಕೆ ವಿರುದ್ಧ ಚಂದ್ರಶೇಖರ್ ಬಳಸಿರುವ ಪದ ಅಕ್ಷ್ಯಮ್ಯ ಎಂದರು.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ಎಡಿಜಿಪಿ ಅವರು ಭೂಕಳ್ಳರು ,ಲ್ಯಾಂಡ್ ಮಾಫೀಯಾ ಜೊತೆ ಸೇರಿಕೊಂಡು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಪೂಡವೇ ಎಡಿಜಿಪಿ ಅವರನ್ನು ಹಿಂದೆ ಇದ್ದಂತಹ ಸ್ಥಳಕ್ಕೆ ವರ್ಗಾವಣೆ ಮಾಡಬೇಕು ಹೇಳಿದರು . ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರರಿಗೆ ಮನವಿ ಪತ್ರ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕ್ ಅಧ್ಯಕ್ಷ ಮುನಿರಾಜು, ಜೆಡಿಎಸ್ ಮುಖಂಡರಾದ ಕಿಸಾನ್ ಕೃಷ್ಣಪ್ಪ, ಸತೀಶ್, ಶಾಂತ ಮೂರ್ತಿ,ನಾಗರಾಜ್, ಜಿ.ವಿ ಮಂಜುನಾಥ್, ದಿನೇಶ್, ಅಮರ್, ವೆಂಕಟೇಶ,ಲಕ್ಷ್ಮಿನರಸಪ್ಪ,ಜಗದೀಶ್, ಮಂಜುನಾಥ್, ನಂಜೇಗೌಡ,ವೇದಾವತಿ ಕಾಂತರಾಜು, ಪಾರಿಜಾತಮ್ಮ ಹಾಗೂ ಕಾರ್ಯಕರ್ತರು ಇದ್ದರು.