ಹೈಕೋರ್ಟ್ ಆದೇಶದಂತೆ ಬುಧವಾರ ಬೆಳಗ್ಗೆ ಜಂಟಿ ಸರ್ವೇಗೆ ಚಾಲನೆ ನೀಡಲಾಯಿತು. ಗುರುವಾರ ಸಂಜೆ ತನಕವೂ ಕಂದಾಯ ಮತ್ತು ಅರಣ್ಯ ಇಲಾಖೆಯವರು ಬಿಗಿ ಪೋಲಿಸ್ ಬಂದೋಬಸ್ತ್ ನಡುವೆ ಸರ್ವೇ ಕಾರ್ಯವನ್ನು ಮುಂದುವರಿಸಿದರು.
ಕೋಲಾರ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಹೊಸಹುಡ್ಯ ಗ್ರಾಮದ ಅರಣ್ಯ ಇಲಾಖೆಯ ಜಾಗವನ್ನು ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದಂತೆ ೨ ದಿನಗಳಿಂದ ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೇ ಕಾರ್ಯ ನಡೆಸಿ ಗುರುವಾರ ಸಂಜೆ ಮುಕ್ತಾಯಗೊಳಿಸಿದರು.ಒತ್ತುವರಿ ಆಗಿದೆ - ಆಗಿಲ್ಲ?
ಅರಣ್ಯ ಇಲಾಖೆಯವರು ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಹೇಳುತ್ತಿದ್ದರೆ, ಕಂದಾಯ ಇಲಾಖೆಯವರು ಒತ್ತುವರಿ ಅನಿಸುತ್ತಿಲ್ಲ ಎಂದು ಹೇಳುವ ಮೂಲಕ ಮತ್ತೆ ಸಮಸ್ಯೆ ಕಗ್ಗಂಟಾಗಿದೆ.ಹೈಕೋರ್ಟ್ ಆದೇಶದಂತೆ ಬುಧವಾರ ಬೆಳಗ್ಗೆ ಜಂಟಿ ಸರ್ವೇಗೆ ಚಾಲನೆ ನೀಡಲಾಯಿತು. ಗುರುವಾರ ಸಂಜೆ ತನಕವೂ ಕಂದಾಯ ಮತ್ತು ಅರಣ್ಯ ಇಲಾಖೆಯವರು ಬಿಗಿ ಪೋಲಿಸ್ ಬಂದೋಬಸ್ತ್ ನಡುವೆ ಸರ್ವೇ ಕಾರ್ಯವನ್ನು ಮುಂದುವರಿಸಿದರು. ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಗುರುವಾರವೂ ಸರ್ವೇ ಕಾರ್ಯಕ್ಕೆ ಸಹಕರಿಸಿ ತಮ್ಮ ತೋಟದಲ್ಲಿ ಮೊಕ್ಕಾಂ ಹೂಡಿದ್ದರು.
ಸರ್ವೇ ನಂ.೧ ಮತ್ತು ೨ ಒತ್ತುವರಿ
ಅರಣ್ಯ ಇಲಾಖೆಯವರ ಪ್ರಕಾರ ಗುಂಟರ್ಸ್ ಚೈನ್ ಬ್ರಿಟಿಷ್ ಸರ್ಕಾರದ ಕಾಲದಿಂದ ಬಳಕೆ ಆಗುತ್ತಿದೆ. ಇದರ ಮೂಲಕ ಅಳತೆ ಮಾಡಿದರೆ ಸರಿಯಾಗಿ ಇರುತ್ತದೆ ಎಂದು ಅಧೀನ ಕಾರ್ಯದರ್ಶಿ ಅವರೇ ಹೇಳಿದ್ದಾರೆ. ಹಾಗಾಗಿ ಗುಂಟರ್ಸ್ ಚೈನ್ ಮೂಲಕ ಅಳತೆ ಮಾಡಿದರೆ ಇದು ಸರಿ ಇದೆ. ಹೊಸಹುಡ್ಯ ಗ್ರಾಮ ಸರ್ವೇ ನಂ.೧ ಹಾಗೂ ೨ರಲ್ಲಿ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಕೋಲಾರದ ಡಿ.ಸಿ.ಎಫ್ ಸರೀನ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಅರಣ್ಯ ಭೂಮಿ ಬಿಟ್ಟು ಹೋಗಿರುವ ವಿಚಾರವೇ ಬೇರೆ. ಅರಣ್ಯ ಸೆಟ್ಲಮೆಂಟ್ ಮ್ಯಾಪ್ ನಮ್ಮ ಬಳಿ ಇದೆ. ಯಾವಗ ಬೇಕಾದರೂ ನಾವು ಮ್ಯಾಪನ್ನು ಸಿದ್ಧಪಡಿಸಬಹುದು. ಒತ್ತುವರಿ ಆಗಿರುವುದು ನಿಜ. ಡಿಡಿಎಲ್‌ಆರ್ ಕೊಡುವ ರಿಪೋರ್ಟ್ ನೋಡಿ ತೀರ್ಮಾನ ಮಾಡಲಾಗುವುದು. ಸರ್ವೇ ನಂ.೧ ಹಾಗೂ ೨ರಲ್ಲಿ ನಮ್ಮ ಅರಣ್ಯ ಭೂಮಿಯ ಜಾಗ ಸೇರಿದ್ದರೆ ಮಾತ್ರ ಸಹಿ ಹಾಕುತ್ತೇನೆ. ಇಲ್ಲವಾದರೆ ನಾನು ಡಿಡಿಎಲ್‌ಆರ್ ವರದಿಗೆ ಸಹಿ ಹಾಕುವುದಿಲ್ಲ. ಮತ್ತೆ ಸರ್ವೇ ಆಗಲಿ. ಜ.೩೦ರ ಒಳಗಾಗಿ ಸರ್ವೇ ವರದಿ ಸಲ್ಲಿಸಿ ಎಂದು ಹೈಕೋರ್ಟ್ ಸೂಚನೆ ನೀಡಿದೆ ಎಂದು ಗಳಿಗೆ ಮಾಹಿತಿ ನೀಡಿದರು.
ಸರ್ವೇ ಸ್ಕೆಚ್ ವರದಿ ಬರಬೇಕು
ಸರ್ವೇ ನಂ.೧ ಮತ್ತು ೨ರಲ್ಲಿ ಫಿರ್ಯಾದುದಾರರಿಗೆ ನೋಟಿಸ್ ನೀಡಿ ಕಳೆದ ೨ ದಿನಗಳಿಂದ ಜಂಟಿ ಸರ್ವೇ ನಡೆಸಲಾಗಿದೆ. ರೋವರ್ ಜೊತೆ ಚೈನ್ ಬಳಸಿ ಏಕಕಾಲದಲ್ಲಿ ಸರ್ವೇ ಮಾಡಲಾಗಿದೆ. ಅರಣ್ಯ ಇಲಾಖೆ ಗಡಿ ಗುರ್ತಿಸುವ ಕೆಲಸ ಜಂಟಿಯಾಗಿ ಮಾಡಿ, ೪ ತಂಡಗಳಿಂದ ಸರ್ವೇ ಮಾಡಿ ಸರ್ವೇ ನಂಬರ್‌ನ ಜಮೀನನ್ನು ಸೆರೆ ಹಿಡಿಯಲಾಯಿತು.30ರೊಳಗೆ ಹೈಕೋರ್ಟ್‌ಗೆ ವರದಿ
ಅರಣ್ಯ ಇಲಾಖೆಯ ಗುಂಟರ್ಸ್ ಚೈನ್ ಮಾಪನ ೧೦೦ ಲಿಂಕ್ ೬೬ ಅಡಿ. ಕಂದಾಯ ಇಲಾಖೆಯ ಚೈನ್‌ನಲ್ಲಿ ೫೦ ಲಿಂಕ್ ೩೦ ಅಡಿಯಾಗಿದೆ. ಸರ್ವೇ ನಂ.೧ರಲ್ಲಿ ೩೧೫ ಎಕೆರೆ ಹಾಗೂ ಸರ್ವೇ ನಂ.೦೨ ರಲ್ಲಿ ೧೧೩ ಎಕೆರೆ ಗುರ್ತಿಸಲು ನೋಟಿಫಿಕೇಷನ್ ಇದ್ದು, ಡಿಡಿಎಲ್‌ಆರ್‌ನಲ್ಲಿ ತಾಂತ್ರಿಕ ವರದಿ ನೀಡಬೇಕಿದೆ. ಫಿರ್ಯಾದುದಾರರಾದ ರಮೇಶ್‌ಕುಮಾರ್ ರವರು ಸಹ ಕೆಲವು ಮಾಹಿತಿಯನ್ನು ಕೇಳಿದ್ದಾರೆ. ಅವರ ಮಾಹಿತಿಯನ್ನು ಪಡೆಯಬೇಕಾಗಿದೆ. ಸರ್ವೇ ಸ್ಕೆಚ್ ವರದಿ ಬಂದ ನಂತರ ಜ.೩೦ರ ಒಳಗಾಗಿ ಹೈಕೋರ್ಟ್‌ಗೆ ಜಿಲ್ಲಾಡಳಿತ ವರದಿ ಸಲ್ಲಿಸಲಿದೆ.ಒತ್ತುವರಿ ಕಂಡುಬಂದಿಲ್ಲ: ಡೀಸಿ
೧೯೩೪ರಲ್ಲಿ ಸರ್ಕಾರಿ ನೋಟಿಫಿಕೇಷನ್ ಹಾಗೂ ೧೦೩೪ರ ಗೆಜೆಟೆಡ್ ಬಿಟ್ಟು ಅರಣ್ಯ ಇಲಾಖೆಯವರು ಯಾವುದೇ ದಾಖಲೆಯನ್ನು ಕಂದಾಯ ಇಲಾಖೆಗೆ ಕೊಟ್ಟಿಲ್ಲ. ಆದ ಕಾರಣ ಒತ್ತುವರಿ ವಿಷಯ ಮೇಲ್ನೋಟಕ್ಕೆ ನಮಗೆ ಏನೂ ಕಂಡುಬಂದಿಲ್ಲ ಎಂದು ಅನಿಸುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.ಕೋಟ್೨೦೧೦ ಮತ್ತು ೨೦೧೩ರಲ್ಲಿ ಸರ್ವೇ ಆದ ಸಂದರ್ಭದಲ್ಲಿ ನಾವು ಗುಂಟರ್ಸ್ ಚೈನ್ ಮೂಲಕವೇ ಸರ್ವೇ ಮಾಡಬೇಕೆಂಬ ವಾದವನ್ನು ಆಗಲೇ ಮಾಡಲಾಗಿತ್ತು. ಇದನ್ನು ಭೂದಾಖಲೆಗಳ ಇಲಾಖೆಗೂ ನಮ್ಮ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಗುಂಟರ್ಸ್ ಚೈನ್ ಸರ್ವೇ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತ ದೇಶದ ಎಲ್ಲಾ ಕಡೆಯೂ ಅರಣ್ಯ ಇಲಾಖೆಯವರು ಇದನ್ನೇ ಬಳಸಲಾಗುತ್ತಿದೆ. ಹೊಸಹುಡ್ಯ ಸರ್ವೇ ನಂ.೦೧ ಮತ್ತು ೦೨ ಅರಣ್ಯ ಒಳಗಡೆಯೇ ಇದೆ.ಸರೀನ, ಡಿಸಿಎಫ್
ಕೋಟ್ ೨೦೧೩ರಲ್ಲಿ ರೋವರ್ ಚೈನ್ ಬಳಸಿ ಸರ್ವೇ ನಡೆಸಿರಲಿಲ್ಲ. ಈ ಬಾರಿ ರೋವರ್ ಚೈನ್ ಬಳಸಿ ಸರ್ವೇ ನಡೆಸಲಾಗಿದೆ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ನಿಯಮಾನುಸಾರವಾಗಿಯೇ ಸರ್ವೇ ನಡೆಸಲಾಗಿದೆ. ನಾನು ಅರಣ್ಯ ಸೆಟ್ಲ್‌ಮೆಂಟ್‌ನಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿನ ಸಮಸ್ಯೆಯನ್ನು ಬಗೆಹರಿಸುವುದೇ ಇದರ ಉದ್ದೇಶ. ಸದ್ಯಕ್ಕೆ ಒತ್ತುವರಿ ಆಗಿದೆ ಅನಿಸುತ್ತಿಲ್ಲ.-ಎಂ.ಆರ್.ರವಿ, ಜಿಲ್ಲಾಧಿಕಾರಿ.