7 ಮಂದಿಗೆ ಮೊದಲ ಬಾರಿ ಸಚಿವ ಸ್ಥಾನ

Published : Aug 04, 2026, 09:24 AM IST
karnataka cabinet expansion 19 new ministers oath taking

ಸಾರಾಂಶ

ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಅಳೆದು ತೂಗಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಹಲವು ಬಾರಿ ಶಾಸಕರಾದರೂ ಈವರೆಗೆ ಸಚಿವರಾಗುವ ಅವಕಾಶ ಸಿಗದ ಆರು ಮಂದಿಗೆ ಮತ್ತು ಇದೇ ಮೊದಲ ಬಾರಿ ಶಾಸಕರಾಗಿರುವ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ.

ಬೆಂಗಳೂರು :  ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಅಳೆದು ತೂಗಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಹಲವು ಬಾರಿ ಶಾಸಕರಾದರೂ ಈವರೆಗೆ ಸಚಿವರಾಗುವ ಅವಕಾಶ ಸಿಗದ ಆರು ಮಂದಿಗೆ ಮತ್ತು ಇದೇ ಮೊದಲ ಬಾರಿ ಶಾಸಕರಾಗಿರುವ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ.

ಎರಡು ತಿಂಗಳ ನಂತರ ಸಚಿವ ಸಂಪುಟ ವಿಸ್ತರಣೆ

ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎರಡು ತಿಂಗಳ ನಂತರ ಸಚಿವ ಸಂಪುಟ ವಿಸ್ತರಣೆಯಾಗಿದೆ. ಈ ಹಿಂದೆ ಜೂ.3ರಂದು ಡಿ.ಕೆ.ಶಿವಕುಮಾರ್‌ ಅವರೊಂದಿಗೆ 13 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಉಳಿದಂತೆ ಖಾಲಿಯಿದ್ದ 20 ಸ್ಥಾನಗಳಲ್ಲಿ 19 ಸ್ಥಾನಗಳಿಗೆ ಸಚಿವರನ್ನು ಕಾಂಗ್ರೆಸ್‌ ಹೈಕಮಾಂಡ್‌ ಆಯ್ಕೆ ಮಾಡಿದ್ದು, ಸೋಮವಾರ ಎಲ್ಲ 19 ಮಂದಿ ಲೋಕಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಆ 19 ಮಂದಿಯಲ್ಲಿ ಏಳು ಮಂದಿ ಇದೇ ಮೊದಲ ಬಾರಿಗೆ ಸಚಿವ ಸ್ಥಾನ ಪಡೆದಿದ್ದಾರೆ.

ಟಿ.ರಘುಮೂರ್ತಿ, ಡಾ.ಅಜಯ್‌ ಸಿಂಗ್‌, ಕೆ.ಎಂ.ಶಿವಲಿಂಗೇಗೌಡ, ಎಚ್‌.ಸಿ.ಬಾಲಕೃಷ್ಣ, ವಿಜಯಾನಂದ ಕಾಶಪ್ಪನವರ್‌, ರಿಜ್ವಾನ್‌ ಅರ್ಷದ್‌ ಅವರು ಈಗಾಗಲೇ ಎರಡಕ್ಕಿಂತ ಹೆಚ್ಚು ಬಾರಿ ಶಾಸಕರಾದವರು. ಅವರಿಗೆ ಈವರೆಗೆ ಸಚಿವ ಸ್ಥಾನ ಒಲಿದಿರಲಿಲ್ಲ. ಇದೀಗ ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ಅವರಿಗೆ ಅವಕಾಶ ದೊರೆತಿದೆ. ಹಾಗೆಯೇ, ಇದೇ ಮೊದಲ ಬಾರಿ ಶಾಸಕರಾಗಿರುವ ಕೆ.ಎಸ್‌.ಬಸವಂತಪ್ಪ ಅವರಿಗೂ ಹೈಕಮಾಂಡ್‌ ಮಣೆ ಹಾಕಿದ್ದು, ಸೋಮವಾರ ಉಳಿದವರ ಜತೆ ಪ್ರಮಾಣ ವಚನ ಸ್ವೀಕರಿಸಿದರು.

ಯಾರ್‍ಯಾರು?

- ರಘುಮೂರ್ತಿ, ಡಾ.ಅಜಯ್‌ ಸಿಂಗ್‌, ಕೆ.ಎಂ.ಶಿವಲಿಂಗೇಗೌಡ, ಎಚ್‌.ಸಿ.ಬಾಲಕೃಷ್ಣ, ವಿಜಯಾನಂದ ಕಾಶಪ್ಪನವರ್‌, ರಿಜ್ವಾನ್‌ ಅರ್ಷದ್‌ಗೆ ಮೊದಲ ಬಾರಿ ಸಚಿವ ಸ್ಥಾನ

- ಇದೇ ಮೊದಲ ಬಾರಿ ಶಾಸಕರಾಗಿರುವ ಕೆ.ಎಸ್‌.ಬಸವಂತಪ್ಪ ಅವರಿಗೂ ಹೈಕಮಾಂಡ್‌ನಿಂದ ಮಂತ್ರಿಗಿರಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಷ್ಟ್ರಾಧ್ಯಕ್ಷರ ಸ್ವಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿಗೆ ಸೋಲು!
ಜಿ.ಎಸ್‌.ಪಾಟೀಲ್‌ ಸ್ಪೀಕರ್‌, ಸಲೀಂ ಅಹ್ಮದ್‌ ಸಭಾಪತಿ - ಪೊನ್ನಣ್ಣ ಉಪಸ್ಪೀಕರ್‌, ಉಮಾಶ್ರೀ ಉಪಸಭಾಪತಿ