;Resize=(412,232))
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದ 13 ಮಂದಿ ಶಾಸಕರ ಪೈಕಿ 8ಕ್ಕೂ ಹೆಚ್ಚು ಮಂದಿಗೆ ಹೈಕಮಾಂಡ್ ಸಚಿವ ಸ್ಥಾನ ನೀಡಿದೆ. ಆದರೂ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಗೈರಾಗಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ಮೂಲಗಳ ಪ್ರಕಾರ, ಕುರುಬ ಸಮುದಾಯದಿಂದ ತಾವು ಸೂಚಿಸಿದ ಬಸವರಾಜ ಶಿವಣ್ಣನವರ್ ಅವರ ಬದಲಿಗೆ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ನೀಡಿದ್ದರಿಂದಲೇ ಅವರು ಲೋಕಭವನದ ಕಾರ್ಯಕ್ರಮದಿಂದ ದೂರ ಉಳಿದರು ಎನ್ನಲಾಗಿದೆ. ಪಟ್ಟಿ ಪ್ರಕಟವಾದ ಬೆನ್ನಲ್ಲೇ ತಮ್ಮ ಆಪ್ತರ ಬಳಿ, ‘ನಾನು ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋಗುವುದಿಲ್ಲ’ ಎಂದು ಸಿದ್ದರಾಮಯ್ಯ ತಿಳಿಸಿದ್ದರು.
ಸಂಪುಟದಲ್ಲಿ ಅವರ ಶಿಫಾರಸುಗಳಿಗೆ ಹೈಕಮಾಂಡ್ ಗೌರವ ನೀಡಿದೆ. ಆದರೆ, ಕುರುಬ ಸಮುದಾಯದ ಶಾಸಕರ ಪೈಕಿ ಅವರು ಸೂಚಿಸಿದ ಶಾಸಕರ ಬದಲಿಗೆ ಬೇರೊಬ್ಬರನ್ನು ಸಚಿವರನ್ನಾಗಿ ಪ್ರಕಟಿಸಿದ್ದು ಸಿದ್ದರಾಮಯ್ಯ ಅವರಿಗೆ ಅಸಮಾಧಾನ ಉಂಟು ಮಾಡಿದೆ ಎನ್ನಲಾಗಿದೆ. ಹೀಗಾಗಿಯೇ ಸಿದ್ದರಾಮಯ್ಯ ಗೈರಾಗುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
- ಸಿದ್ದು ಸೂಚಿಸಿದ್ದ 13 ಶಾಸಕರ ಪೈಕಿ 8 ಜನರಿಗೆ ಮಣೆ
- ಆದರೆ ಕುರುಬ ಸಮಾಜಕ್ಕೆ ಸಚಿವ ಸ್ಥಾನ ನೀಡಿಕೆ ವಿಚಾರ
- ಆಪ್ತ ಬಸವರಾಜ ಶಿವಣ್ಣವರ ಹೆಸರು ಸೂಚಿಸಿದ್ದ ಸಿದ್ದು
- ಆದರೆ ಶಿವಣ್ಣನವರ ಬದಲು ಗಾಯತ್ರಿ ಹೆಸರಿದ್ದ ಹಿನ್ನೆಲೆ
- ಪ್ರಮಾಣ ವಚನ ಕಾರ್ಯಕ್ರಮದಿಂದ ಸಿದ್ದು ದೂರ