ಮೊನ್ನೆ ಸಿಕ್ಸರ್‌ ನಿನ್ನೆ ಬೌನ್ಸರ್‌!

Published : Jun 05, 2026, 09:15 AM IST
DK Shivakumar

ಸಾರಾಂಶ

ಬುಧವಾರ ಪ್ರಮಾಣವಚನ ಸ್ವೀಕರಿಸಿದ ಬಳಿಕ ನಡೆಸಿದ ಮೊದಲ ಸಂಪುಟ ಸಭೆಯಲ್ಲಿ 3 ಯುವಕೇಂದ್ರಿತ ಯೋಜನೆ ಸೇರಿ ಒಟ್ಟು 6 ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಎರಡನೇ ದಿನವಾದ ಗುರುವಾರ ಉನ್ನತ ಅಧಿಕಾರಿಗಳ ಸಭೆ ನಡೆಸಿ ಬೌನ್ಸರ್‌ ಬಾರಿಸಿದ್ದಾರೆ.

 ಬುಧವಾರ ಪ್ರಮಾಣವಚನ ಸ್ವೀಕರಿಸಿದ ಬಳಿಕ ನಡೆಸಿದ ಮೊದಲ ಸಂಪುಟ ಸಭೆಯಲ್ಲಿ 3 ಯುವಕೇಂದ್ರಿತ ಯೋಜನೆ ಸೇರಿ ಒಟ್ಟು 6 ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಎರಡನೇ ದಿನವಾದ ಗುರುವಾರ ಉನ್ನತ ಅಧಿಕಾರಿಗಳ ಸಭೆ ನಡೆಸಿ ಬೌನ್ಸರ್‌ ಬಾರಿಸಿದ್ದಾರೆ.

1. ರೌಡಿಗಳ ನಿಗ್ರಹಕ್ಕೆ ಪ್ರತಿ ತಾಲೂಕಿನಲ್ಲೂ ಪಡೆ

ಪ್ರತಿ ತಾಲೂಕಿನಲ್ಲೂ ರೌಡಿಗಳ ನಿಗ್ರಹಕ್ಕೆ ಪ್ರತ್ಯೇಕ ಪಡೆ ರಚಿಸುವಂತೆ ಪೊಲೀಸರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೂಚಿಸಿದ್ದಾರೆ. ರೌಡಿಗಳು ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಪೊಲೀಸರು ನೋಡಿಕೊಳ್ಳಬೇಕು. ಹಳೇ ರೌಡಿಗಳು ಹಾಗೂ ಹೊಸದಾಗಿ ಹುಟ್ಟುಕೊಳ್ಳುವ ರೌಡಿಗಳ ಮೇಲೆ ನಿಗಾ ಇಡಬೇಕು ಎಂದು ತಾಕೀತು ಮಾಡಿದ್ದಾರೆ.

3. ಅಧಿಕಾರಿಗಳೇ, ಪ್ರಭಾವಕ್ಕೆ ಮಣಿದರೆ ಹುಷಾರ್‌

ನಮ್ಮ ಸರ್ಕಾರ ಜಾತಿ, ಧರ್ಮ, ಪ್ರಭಾವಕ್ಕೆ ಮಣಿಯುವುದಿಲ್ಲ. ಅಧಿಕಾರಿಗಳು ಕೂಡ ಇದಕ್ಕೆ ಮಣಿಯಬಾರದು. ಪಾರದರ್ಶಕ, ಮುಕ್ತ ಹಾಗೂ ಭ್ರಷ್ಟಾಚಾರರಹಿತ ಆಡಳಿತ ನೀಡಬೇಕು. 15 ದಿನಗಳಲ್ಲಿ ಎಲ್ಲಾ ಇಲಾಖೆಗಳಲ್ಲಿನ ಕಾರ್ಯಯೋಜನೆ ಸಿದ್ಧಪಡಿಸಬೇಕು ಪ್ರತಿ ಖರ್ಚು-ವೆಚ್ಚಗಳಿಗೂ ಪಕ್ಕಾ ಲೆಕ್ಕವಿರಬೇಕು ಎಂದು ಅಧಿಕಾರಿಗಳಿಗೆ ಸಿಎಂ ಡಿಕೆಶಿ ಕಟ್ಟುನಿಟ್ಟಿನ ತಾಕೀತು

2. ‘ಗ್ಯಾರಂಟಿ’ ಅನರ್ಹ ಫಲಾನುಭವಿಗಳ ಪತ್ತೆ

ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡುತ್ತಿಲ್ಲ. ಆದರೆ 200 ಯುನಿಟ್ ವಿದ್ಯುತ್ ಉಚಿತ ಎಂದು ಪಡೆದು, ಕೆಲವೆಡೆ ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಒಬ್ಬರ ಹೆಸರಲ್ಲೇ ಐದಾರು ಮೀಟರ್‌ಗಳಿವೆ. ಅವರು ನಮ್ಮ ರಾಜ್ಯದವರು ಇದ್ದಾರೋ, ಬೇರೆ ರಾಜ್ಯದವರೋ ಎಂಬ ಮಾಹಿತಿ ಸರ್ಕಾರಕ್ಕೆ ಇರಬೇಕಲ್ಲವೇ? ಮಾಹಿತಿ ಸಂಗ್ರಹಿಸುತ್ತೇವೆ ಎಂದು ಡಿಕೆಶಿ ಹೇಳಿಕೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸತತ 3ನೇ ದಿನವೂ ದಿಲ್ಲೀಲಿ ಡಿಕೆಶಿ ರಾಜ್ಯಾಭಿವೃದ್ಧಿ ಮಂತ್ರ
ಟಿಎಂಸಿಯಿಂದ ಮಮತಾ ಔಟ್‌?