ನೈಸ್ ಟೋಲ್‌ಗೆ ರಾಜ್ಯ ಸರ್ಕಾರ ಕಡಿವಾಣ ಹಾಕಲು ಬರಲ್ಲ: ಸತೀಶ್ ಜಾರಕಿಹೊಳಿ

KannadaprabhaNewsNetwork |  
Published : Aug 23, 2026, 02:00 AM ISTUpdated : Aug 23, 2026, 05:02 AM IST
Satish jarkiholi

ಸಾರಾಂಶ

ನೈಸ್‌ ಸಂಗ್ರಹಿಸುತ್ತಿರುವ ಟೋಲ್‌ಗೆ ರಾಜ್ಯ ಸರ್ಕಾರ ಕಡಿವಾಣ ಹಾಕಲು ಬರುವುದಿಲ್ಲ. ನಾವು ಏನೂ ಮಾಡಲಾಗುವುದಿಲ್ಲ. ಬಾಧಿತ ವ್ಯಕ್ತಿಗಳು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

 ಬೆಂಗಳೂರು : ನೈಸ್‌ ಸಂಗ್ರಹಿಸುತ್ತಿರುವ ಟೋಲ್‌ಗೆ ರಾಜ್ಯ ಸರ್ಕಾರ ಕಡಿವಾಣ ಹಾಕಲು ಬರುವುದಿಲ್ಲ. ನಾವು ಏನೂ ಮಾಡಲಾಗುವುದಿಲ್ಲ. ಬಾಧಿತ ವ್ಯಕ್ತಿಗಳು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ನೈಸ್‌ ಸಂಸ್ಥೆಗೆ ಪಿಪಿಪಿ ಮಾದರಿಯಲ್ಲಿ ರಸ್ತೆಯನ್ನು 30 ವರ್ಷಕ್ಕೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೈಸ್‌ ಸಂಸ್ಥೆಗೆ ಪಿಪಿಪಿ ಮಾದರಿಯಲ್ಲಿ ರಸ್ತೆಯನ್ನು 30 ವರ್ಷಕ್ಕೆ ಕೊಟ್ಟಿದ್ದೇವೆ, ಈಗ 20 ವರ್ಷ ಆಗಿದೆ. ಹೀಗಾಗಿ ರಾಜ್ಯ ಸರ್ಕಾರ ಹಿಂದೆಯೂ ಹೋಗಲಾಗದೆ, ಮುಂದೆ ಬರಲೂ ಆಗದ ಸ್ಥಿತಿಯಲ್ಲಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಈ ಹಿಂದೆ ಟೋಲ್‌ ದರ ಹೆಚ್ಚಳ ಮಾಡಬಾರದು ಎಂದು ಸರ್ಕಾರ ನ್ಯಾಯಾಲಯಕ್ಕೆ ಹೋಗಿತ್ತು. ಆದರೂ ನ್ಯಾಯಾಲಯದಿಂದ ಆದೇಶ ಮಾಡಿಸಿಕೊಂಡು ಹೆಚ್ಚಳ ಮಾಡಿದ್ದಾರೆ. ಹೀಗಾಗಿ ಟೋಲ್‌ ವಿಚಾರದಲ್ಲಿ ನಮ್ಮ ನಿಯಂತ್ರಣವಿಲ್ಲ. ಕೋರ್ಟ್‌, ಕಂಪೆನಿ ಹಾಗೂ ಬಾಧಿತ ಹೋರಾಟಗಾರರಿಗೆ ಬಿಟ್ಟದ್ದು. ನಾವು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರೂ ನಮ್ಮ ಪರವಾಗಿ ಆದೇಶ ಆಗಿಲ್ಲ ಎಂದು ಸಚಿವರು ಹೇಳಿದ್ದಾರೆ.

ಪ್ರಚೋದನೆ ನೀಡುವುದು ಸರಿಯಲ್ಲ:

ಪ್ರಿಯಾಂಕ್ ಖರ್ಗೆಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಎಫ್‌ಐಆರ್‌ ಹಾಕಿದರೂ ಟೋಲ್‌ ಕಟ್ಟಬೇಡಿ ಎಂದು ಜವಾಬ್ದಾರಿಯುತ ಕೇಂದ್ರ ಸಚಿವ ಸ್ಥಾನದಲ್ಲಿರುವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಸಾರ್ವಜನಿಕರಿಗೆ ಪ್ರಚೋದನೆ ನೀಡಿ ಮಾತನಾಡಿದರೆ ಏನು ಮಾಡಲು ಆಗುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ನ್ಯಾಯಾಲಯ ಇದೆ, ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ನ್ಯಾಯ ಒದಗಿಸುವ ಬದಲು ಜನರಿಗೆ ಕಾನೂನು ಬಾಹಿರವಾಗಿ ಪ್ರಚೋದನೆ ನೀಡುವುದು ಸರಿಯಲ್ಲ. ಕೇಂದ್ರ ಸಚಿವರು ಈ ರೀತಿ ಮಾತನಾಡಬಾರದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಜೆನ್‌ಝೀ ಓಲೈಕೆಗೆ ಬಿಜೆಪಿಯಿಂದ ಈಗ ಹೊಸ ತಂಡ ರಚನೆ
ಎಸ್‌ಐಆರ್‌ : ಮಂಡ್ಯದ 1.50 ಲಕ್ಷ ಮತದಾರರಿಗೆ ನೋಟಿಸ್‌