ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜೆನ್‌ಝೀಗಳು ನಡೆಸಿದ ಹೋರಾಟದ ಬೆನ್ನಲ್ಲೇ ಕೇಂದ್ರ ಸರ್ಕಾರ ಜೆನ್‌ಝೀಗಳನ್ನು ಓಲೈಸುವ ಸಲುವಾಗಿ ಪ್ರತಿ ದಿನ ಒಬ್ಬ ಸಚಿವರನ್ನು ವಿವಿಗಳಿಗೆ ಕಳುಹಿಸಲು ನಿರ್ಧರಿಸಿತ್ತು. ಇದೀಗ ಬಿಜೆಪಿ ಕೂಡ ಜೆನ್‌ಝೀಗಳ ಜತೆ ಸಂವಾದಕ್ಕಾಗಿ ಹೊಸ ತಂಡ ರಚಿಸಿದೆ

ನವದೆಹಲಿ: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜೆನ್‌ಝೀಗಳು ನಡೆಸಿದ ಹೋರಾಟದ ಬೆನ್ನಲ್ಲೇ ಕೇಂದ್ರ ಸರ್ಕಾರ ಜೆನ್‌ಝೀಗಳನ್ನು ಓಲೈಸುವ ಸಲುವಾಗಿ ಪ್ರತಿ ದಿನ ಒಬ್ಬ ಸಚಿವರನ್ನು ವಿವಿಗಳಿಗೆ ಕಳುಹಿಸಲು ನಿರ್ಧರಿಸಿತ್ತು. ಇದೀಗ ಬಿಜೆಪಿ ಕೂಡ ಜೆನ್‌ಝೀಗಳ ಜತೆ ಸಂವಾದಕ್ಕಾಗಿ ಹೊಸ ತಂಡ ರಚಿಸಿದೆ ಎಂದು ಮೂಲಗಳು ತಿಳಿಸಿವೆ.

ಯುವಕರೊಂದಿಗೆ ಅಧಿಕೃತವಾಗಿ ಸಂವಾದ

ಈ ತಂಡವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌ ಮುನ್ನಡೆಸಲಿದ್ದಾರೆ. ತಂಡದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸ್ಮೃತಿ ಇರಾನಿ, ವಿನೋದ್‌ ತಾವ್ಡೆ, ಗುಜರಾತ್ ಸಚಿವ ಹರ್ಷ ಸಾಂಘ್ವಿ, ಛತ್ತೀಸ್‌ಗಢ ಮಂತ್ರಿ ಒ.ಪಿ. ಚೌಧರಿ ಸೇರಿದಂತೆ ಪ್ರಮುಖರು ಇರಲಿದ್ದಾರೆ. ಸೆಪ್ಟೆಂಬರ್‌ನಿಂದ ಯುವಕರೊಂದಿಗೆ ಅಧಿಕೃತವಾಗಿ ಸಂವಾದ ಆರಂಭಿಸಲಿದೆ.

ಯುವಕರ ಜತೆ ಹೆಚ್ಚು ನಂಟು

ಯುವಕರ ಜತೆ ಹೆಚ್ಚು ನಂಟು ಬೆಳೆಸಿಕೊಳ್ಳಲು, ನಿರಂತರ ಸಂವಾದ, ಅವರ ಸಲಹೆ, ಅಭಿಪ್ರಾಯಗಳನ್ನು ಅಡಿಯಲು ಬಿಜೆಪಿ ಇದನ್ನು ಪ್ರಾರಂಭಿಸಲು ಮುಂದಾಗಿದೆ.