;Resize=(412,232))
( ಯುವಜನತೆ ನಮ್ಮ ಶಕ್ತಿಯೂ ಹೌದು. ದುರ್ಬಲತೆಯು ಹೌದು. ಅವರು ಉತ್ಸಾಹಿಗಳು, ಆದರ್ಶವಾದಿಗಳು ಮತ್ತು ಭಾವನಾತ್ಮಕ ಜೀವಿಗಳು. ಆದರೆ ಅದೇ ಕೆಲವೊಮ್ಮೆ ಭಿನ್ನ ಉದ್ದೇಶ ಹೊಂದಿರುವವರ ದಾಳಕ್ಕೆ ಗುರಿಯಾಗುವಂತೆ ಮಾಡುತ್ತದೆ. ಪ್ರತಿ ವಿದ್ಯಾರ್ಥಿಗಳಿಗೂ ಶಾಂತಿಯುತ ಪ್ರತಿಭಟಿಸುವ ಹಕ್ಕಿದೆ. ಅದೇ ರೀತಿ ನಿರ್ಣಾಯಕವಾಗಿ ಪ್ರತಿಕ್ರಿಯಿಸುವ ಜವಾಬ್ದಾರಿಯೂ ಸರ್ಕಾರಕ್ಕಿದೆ.)
ನಾಳೆಯ ಆರ್ಥಿಕತೆಗೆ ಶಿಕ್ಷಣದಲ್ಲಿ ನಿನ್ನೆಯ ಕೌಶಲ್ಯಗಳ ಕಲಿಕೆ
ಶೈಕ್ಷಣಿಕ ಸುಧಾರಣೆ ವಿಳಂಬ ಮಾಡಿದಷ್ಟು ಅಭಿವೃದ್ಧಿ ಕುಂಠಿತ
ಇಂದು ಬಹಳ ಬೇಸರವಾಗುತ್ತಿದೆ. ಕೇಂದ್ರ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರ ಸ್ನೇಹಿತ ಎಂಬ ಕಾರಣಕ್ಕೆ ಅಲ್ಲ. ನನಗೆ ಅವರ ಅವರ ಪರಿಚಯವೂ ಇಲ್ಲ. ನನ್ನ ಪ್ರಕಾರ ಧರ್ಮೇಂದ್ರ ಪ್ರಧಾನ್ ಅವರು ಇದಕ್ಕೂ ಮುಂಚೆಯೇ ರಾಜೀನಾಮೆ ನೀಡುವ ನಿರ್ಧಾರವನ್ನು ಮಾಡಬೇಕಿತ್ತು. ಕೆಲವೊಮ್ಮೆ ನಾಯಕತ್ವ ಎಂದರೆ ದೀರ್ಘಕಾಲಿನ ಗುರಿ ಸಾಧನೆಗಾಗಿ ಕಾರ್ಯತಂತ್ರದ ದೃಷ್ಟಿಯಿಂದ ಒಂದು ಹೆಜ್ಜೆ ಹಿಂದೆ ಸರಿಸಬೇಕಾಗುತ್ತದೆ. ಇದರ ಅರ್ಥ ಅವರು ತಪ್ಪಿತಸ್ಥರು ಎನ್ನುವುದಲ್ಲ. ಬದಲಿಗೆ ವ್ಯಕ್ತಿಗಿಂತ ಸಂಸ್ಥೆಯೇ ದೊಡ್ಡದು ಎನ್ನುವ ಕಾರಣಕ್ಕಾಗಿ.
ದುರಂತವೆಂದರೆ ಪ್ರಧಾನ್ ರಾಜೀನಾಮೆ ವಿಳಂಬ ನೈಜ ಸಮಸ್ಯೆಯನ್ನು ಮತ್ತಷ್ಟು ದೊಡ್ಡದಾಗಿ ಬೆಳೆಯಲು ದಾರಿ ಮಾಡಿಕೊಟ್ಟಿತು. ಹೋರಾಟದ ಜೊತೆಗೆ ಅಶಿಸ್ತಿನ ಅಂಶಗಳು, ಅವಕಾಶವಾದಿಗಳು, ಈ ಸಮಸ್ಯೆಗೆ ಸಂಬಂಧವಿಲ್ಲದವರೂ ತಮ್ಮ ವೈಯಕ್ತಿಕ ಲಾಭಕ್ಕಾಗಿ ಹೋರಾಟಕ್ಕಿಳಿಯಲು ನಾಂದಿಯಾಯಿತು. ಪರಿಣಾಮ ಪ್ರಶ್ನೆ ಪತ್ರಿಕೆ ಸೋರಿಕೆ ಅಕ್ರಮಗಳ ಹೊಣೆ ಹೊತ್ತುಕೊಳ್ಳಬೇಕೆಂದು ಆರಂಭವಾದ ಹೋರಾಟ ಆ ಬಳಿಕ ಕ್ರಮೇಣ ಸಂಘರ್ಷ, ಗದ್ದಲ, ಹಿಂಸಾಚಾರದಲ್ಲಿ ಮುಳುಗಿತು.
ಹಾದಿ ತಪ್ಪಿದ ಹೋರಾಟ:
ವಿದ್ಯಾರ್ಥಿಗಳು ಹೋರಾಟ ಆರಂಭಿಸಿದ್ದು ಉತ್ತರ ಪಡೆಯುವುದಕ್ಕಾಗಿ. ಆದರೆ ಅದು ಕ್ರಮೇಣ ನ್ಯಾಯಕ್ಕಾಗಿ ಶ್ರಮಿಸಿದವರಿಗಿಂತ, ಅಶಾಂತಿ ಸೃಷ್ಟಿಸುವುದರ ಬಗ್ಗೆ ಆಸಕ್ತಿ ಹೊಂದಿದವರಿಂದಾಗಿ ಹೋರಾಟವೇ ಹಾದಿ ತಪ್ಪಿ ಅಪಾಯಕ್ಕೆ ಬಂದು ಬಿಟ್ಟಿತು. ಒಂದು ವೇಳೆ ಹಾಗಾಗಿದ್ದರೆ ಆ ಹೋರಾಟ, ಗದ್ದಲದ ನಡುವೆ ನೈಜ ವಿಷಯವೇ ಕಣ್ಮರೆಯಾಗಿ ಬಿಡುತ್ತಿತ್ತು.
ಪ್ರಜಾಪ್ರಭುತ್ವದಲ್ಲಿ ರಾಜಕೀಯ ಸ್ಪರ್ಧೆಗಳು ಸಹಜ. ಸರ್ಕಾರ, ವಿರೋಧ ಪಕ್ಷಗಳು ಪರಸ್ಪರ ಹೋರಾಡುತ್ತವೇ ಇರುತ್ತವೆ. ರಾಜಕೀಯ ನನ್ನ ಚಿಂತೆಯೂ ಅಲ್ಲ. ಆದರೆ ನನ್ನ ನೈಜ ಕಳಕಳಿ ಇರುವುದು ಇವೆಲ್ಲವೂ ದೇಶದ ಅಭಿವೃದ್ಧಿ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದರ ಮೇಲೆ.
ಭಾರತ ಸ್ಥಿರ ಪ್ರಜಾಪ್ರಭುತ್ವ ಮತ್ತು ವಿಶ್ವಾಸಾರ್ಹ ಸಂಸ್ಥೆಗಳನ್ನು ಹೊಂದಿದೆ. ಇದೇ ನಮ್ಮ ದೇಶದ ಅತಿದೊಡ್ಡ ಶಕ್ತಿ. ಆ ಸ್ಥಿರತೆ ಹೂಡಿಕೆದಾರರು, ಉದ್ಯಮ, ಸರ್ಕಾರಗಳಿಗೆ ಜಗತ್ತಿನಾದ್ಯಂತ ವಿಶ್ವಾಸ ಮೂಡಿಸಿದೆ. ಭಾರತವನ್ನುಅನೇಕ ರಾಷ್ಟ್ರಗಳು ಮೆಚ್ಚುವುದಕ್ಕೆ, ಮತ್ತೆ ಕೆಲವರು ಅಸೂಯೆ ಪಡುವುದಕ್ಕೆ ಇದು ಕೂಡ ಕಾರಣ.
ಪ್ರತಿಯೊಬ್ಬರು ಭಾರತದ ಯಶಸ್ಸನ್ನೇ ಬಯಸುತ್ತಾರೆ ಎಂದು ನಂಬುವುದು ದಡ್ಡತನ. ಪ್ರತಿ ರಾಷ್ಟ್ರವು ತನ್ನದೇ ಹಿತಾಸಕ್ತಿಯ ಹಿಂದೆ ಓಡುತ್ತದೆ. ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತವು ಜಾಗತಿಕ ರಾಜಕೀಯ ಮತ್ತು ಆರ್ಥಿಕ ಸಮೀಕರಣಗಳನ್ನು ಬದಲಾಯಿಸುತ್ತಿದೆ. ಹೀಗಾಗಿ ಕೆಲ ದೇಶಗಳು ಭಾರತವು ಜಾಗತಿಕವಾಗಿ ತಮಗೆ ಸ್ಪರ್ಧೆಯೊಡ್ಡುವುದಕ್ಕಿಂತ ಆಂತರಿಕ ಅಸ್ಥಿರತೆಯಿಂದಲೇ ಕೂಡಿರಲಿ ಎಂದು ಬಯಸುತ್ತವೆ.
ಭಾರತವು ತನಗೆ ಸರಿಸಮನಾಗಿ, ಆರ್ಥಿಕ ಬಲಾಢ್ಯ ದೇಶವಾಗಿ ಹೊರ ಹೊಮ್ಮುವುದರಲ್ಲಿ ಚೀನಾಕ್ಕೆ ಯಾವುದೇ ಆಸಕ್ತಿಯಿಲ್ಲ. ಈಗಾಗಲೇ ಜಾಗತಿಕ ಪ್ರಾಬಲ್ಯ ಸಾಧಿಸಿರುವ ದೇಶಗಳು ತನಗೆ ಮತ್ತೊಬ್ಬ ಸ್ಪರ್ಧಿ ಎದುರಾಗುತ್ತಾರೆ ಎಂದರೆ ಸಹಿಸಲ್ಲ. ನಮ್ಮ ನೆರೆಯ ರಾಷ್ಟ್ರಗಳು ಕೂಡ ಭಾರತದ ಆಂತರಿಕ ದುರ್ಬಲತೆಯನ್ನು ಬಳಸಿಕೊಳ್ಳಲು ಸದಾ ಸಿದ್ಧವಾಗಿಯೇ ಇವೆ.
ಇಂತಹದ್ದೇ ಕಾರಣಗಳಿಂದ ದೇಶದಲ್ಲಿನ ದೀರ್ಘಕಾಲಿಕ ಅಶಾಂತಿ ರಾಜಕೀಯವನ್ನು ಮೀರಿದ ಪರಿಣಾಮಗಳನ್ನು ಬೀರುತ್ತವೆ. ನಾವು, ವಿರೋಧಿ ಮನಸ್ಥಿತಿ ಹೊಂದಿರುವ ನೆರೆಹೊರೆಯವರು ಮತ್ತು ತೀವ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಭಾರತದಂತಹ ವಿಶಾಲ, ವೈವಿಧ್ಯಮಯ ಮತ್ತು ಮಹತ್ವಾಂಕ್ಷೆ ಹೊಂದಿರುವ ದೇಶವನ್ನು ಆಳುವುದು ಎಂದಿಗೂ ಸುಲಭವಲ್ಲ.
ಯುವಜನತೆ ಶಕ್ತಿ, ದುರ್ಬಲತೆಯೂ ಹೌದು
ಯುವಜನತೆ ನಮ್ಮ ಅತ್ಯಂತ ದೊಡ್ಡ ಶಕ್ತಿಯೂ ಹೌದು. ದುರ್ಬಲತೆಯು ಹೌದು. ಅವರು ಉತ್ಸಾಹಿಗಳು, ಆದರ್ಶವಾದಿಗಳು ಮತ್ತು ಅತ್ಯಂತ ಭಾವನಾತ್ಮಕ ಜೀವಿಗಳು. ಅವರಿಗೆ ತಪ್ಪಿತಸ್ಥರು ಎಂದು ಅನಿಸಿದರೆ ಅವರು ಕೇಳುವುದಕ್ಕೆ ಸಿದ್ಧರಾಗಿರುತ್ತಾರೆ. ಆದರೆ ಅದೇ ಆದರ್ಶವಾದ ಅವರನ್ನು ಸಂಪೂರ್ಣವಾಗಿ ವಿಭಿನ್ನ ಉದ್ದೇಶಗಳನ್ನು ಪ್ರತಿಪಾದಿಸುವವರ ದಾಳಕ್ಕೆ ಗುರಿಯಾಗುವಂತೆ ಮಾಡುತ್ತದೆ. ಭಾವನಾತ್ಮಕ ಘೋಷಣೆಗಳು, ಆಯ್ದ ಆಕ್ರೋಶಗಳು, ಪ್ರದರ್ಶನಾತ್ಮಕ ಸಹಾನುಭೂತಿಗಳು ವಿದ್ಯಾರ್ಥಿಗಳಿಗೆ ಅಥವಾ ದೇಶಕ್ಕೆ ಸೇವೆ ಸಲ್ಲಿಸದವರ ವಿರುದ್ಧ ನಿಜವಾದ ಹತಾಶೆಯನ್ನು ತೋರಿಸುವುದಕ್ಕೆ ಪ್ರಬಲ ಸಾಧನಗಳಾಗಬಹುದು.
ಪ್ರತಿ ವಿದ್ಯಾರ್ಥಿಗಳಿಗೂ ಶಾಂತಿಯುತವಾಗಿ ಪ್ರತಿಭಟಿಸುವ, ಹೊಣೆಗಾರಿಕೆ ಹೊತ್ತುಕೊಳ್ಳುವುದಕ್ಕೆ ಆಗ್ರಹಿಸುವ ಹಕ್ಕಿದೆ. ಅದೇ ರೀತಿ ವಿದ್ಯಾರ್ಥಿಗಳ ಕೋಪ ಉಲ್ಬಣಗೊಳ್ಳುವ ಮೊದಲು ತ್ವರಿತವಾಗಿ ಎಚ್ಚೆತ್ತು ಪಾರದರ್ಶಕ, ನಿರ್ಣಾಯಕವಾಗಿ ಪ್ರತಿಕ್ರಿಯಿಸುವ ಜವಾಬ್ದಾರಿ ಸರ್ಕಾರಕ್ಕಿದೆ.
ಪ್ರತಿ ಬಿಕ್ಕಟ್ಟು ಒಂದು ಅವಕಾಶ ಸೃಷ್ಟಿಗೆ ಕಾರಣವಾಗಬಹುದು. ಹಾಗಂತ ಮುಂದಿನ ಪೀಳಿಗೆಯ ಭವಿಷ್ಯ ನಿರ್ಧರಿಸುವ ಸುಧಾರಣೆಗಳನ್ನು ತರುವುದನ್ನು ಮತ್ತಷ್ಟು ಮುಂದೂಡಲು ಸಾಧ್ಯವಿಲ್ಲ ಎನ್ನುವ ಪಾಠ ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಕಲಿಯಬೇಕಿದೆ. ಎಲ್ಲಾ ಸುಧಾರಣೆಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆ ಮೇಲೆ ಕೇಂದ್ರೀಕರಿಸಿರುವ ಅವಕಾಶ ಸರ್ಕಾರಕ್ಕಿದೆ.
ಕೃತಕ ಬುದ್ಧಿಮತ್ತೆ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನಗಳು ಕೆಲಸದ ಜಗತ್ತನ್ನು ಪರಿವರ್ತಿಸುತ್ತಿದೆ. ಆದರೂ ನಮ್ಮ ಪಠ್ಯಕ್ರಮ ಮತ್ತು ಶಿಕ್ಷಣದ ಬಹುಪಾಲು ವಿಚಾರಗಳು ವಿದ್ಯಾರ್ಥಿಗಳನ್ನು ವೇಗವಾಗಿ ಕಣ್ಮರೆಯಾಗುತ್ತಿರುವ ಜಗತ್ತಿಗೆ ಸಿದ್ಧಪಡಿಸುತ್ತಿದೆ. ನಾಳೆಯ ಆರ್ಥಿಕತೆಗಾಗಿ ನಾವಿನ್ನು ನಿನ್ನೆಯ ಕೌಶಲ್ಯಗಳನ್ನು ಕಲಿಸುತ್ತಿದ್ದೇವೆ. ಇದು ಕೇವಲ ಶೈಕ್ಷಣಿಕ ವಿಚಾರವಲ್ಲ. ಆರ್ಥಿಕ, ರಾಜಕೀಯ ಅನಿವಾರ್ಯತೆಯೂ ಹೌದು.
ಇಂದು ನಾವು ನಮ್ಮ ಪಠ್ಯಕ್ರಮ, ಶಿಕ್ಷಣ, ಶಿಕ್ಷಕರ ತರಬೇತಿ, ಮೌಲ್ಯಮಾಪನ ವಿಧಾನಗಳನ್ನು ಸುಧಾರಿಸಲು ಪ್ರಾರಂಭಿಸಿದರೆ ಅದರ ನಿಜವಾದ ಫಲಿತಾಂಶಗಳನ್ನು ಬಹುಶಃ 10-15 ವರ್ಷಗಳ ಬಳಿಕವೇ ಗೋಚರಿಸುವುದು. ಹಾಗಾಗಿ ಈ ಸುಧಾರಣೆಗಳಿಗೆ ಹೆಚ್ಚು ಕಾಯಲು ಸಾಧ್ಯವಿಲ್ಲ. ವಿಳಂಬ ಮಾಡಿದಷ್ಟು ಮತ್ತಷ್ಟು ಹಿಂದೆ ಬೀಳುತ್ತೇವೆ.
ಶಿಕ್ಷಣ ಕ್ಷೇತ್ರದ ಸುಧಾರಣೆಯಷ್ಟೇ ಮತ್ತೊಂದು ನಿರ್ಣಾಯಕ ಸುಧಾರಣೆಯೂ ಆಗಬೇಕಿದೆ. ನಾವು ಶಿಕ್ಷಣ ಸಂಸ್ಥೆಗಳಲ್ಲಿ ನಂಬಿಕೆಯನ್ನು ಪುನರ್‌ನಿರ್ಮಿಸುವಲ್ಲಿ ಗಂಭೀರ ಯೋಚನೆ ಮಾಡಬೇಕಿದೆ. ಅರ್ಹತೆಯು ಮಾತುಕತೆಯ ಮಾನದಂಡಕ್ಕೆ ಒಳಪಡದಂತಿರಬೇಕು. ನಮ್ಮ ವಿಶ್ವವಿದ್ಯಾನಿಲಯಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಪ್ರಶ್ನಾತೀತ ಅರ್ಹತೆ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಮಗ್ರತೆಯ ವ್ಯಕ್ತಿಗಳು ಮುನ್ನಡೆಸಬೇಕು. ಜಗತ್ತು ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಮತ್ತು ಭಾರತದ ಯುವಕರನ್ನು ಎಐ ಆಧಾರಿತ ಸವಾಲುಗಳು ಮತ್ತು ಅವಕಾಶಗಳಿಗೆ ಸಿದ್ಧಪಡಿಸಬಲ್ಲ ನಾಯಕರಿರಬೇಕು.
ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ನಾಯಕತ್ವದ ಗುಣಮಟ್ಟವು ಅವರು ಉತ್ಪಾದಿಸುವ ಪದವೀಧರರ ಗುಣಮಟ್ಟವನ್ನು ನಿರ್ಧರಿಸುತ್ತದೆ. ಆ ಪದವೀಧರರ ಗುಣಮಟ್ಟವು ಭಾರತವು 21ನೇ ಶತಮಾನವನ್ನು ಮುನ್ನಡೆಸುತ್ತದೆಯೋ ಅಥವಾ ಅದರಲ್ಲಿ ಭಾಗವಹಿಸುತ್ತದೆಯೋ ಎಂಬುದನ್ನು ನಿರ್ಧರಿಸುತ್ತದೆ.
ಭಾರತದ ಜನಸಂಖ್ಯಾ ಲಾಭಾಂಶವು ಬಹುಶಃ ನಮ್ಮ ಕಾರ್ಯತಂತ್ರದ ಅತಿದೊಡ್ಡ ಪ್ರಯೋಜನ. ಆದರೆ ಅದು ಸ್ವಯಂಚಾಲಿತವಾಗಿಲ್ಲ. ಭವಿಷ್ಯದಲ್ಲಿ ಬೇಡಿಕೆಯಿರುವ ಕೌಶಲ್ಯಗಳೊಂದಿಗೆ ನಮ್ಮ ಯುವಜನರನ್ನು ಸಜ್ಜುಗೊಳಿಸುವಲ್ಲಿ ವಿಫಲವಾದರೆ ಅದು ದುರಂತ.
ವಿಕಸಿತ ಭಾರತದ ಕನಸು ನನಸಾಗಬೇಕಾದರೆ, ಭಾರತವು ಶಿಕ್ಷಣ ನೀಡುವ ವಿಧಾನ ಪರಿವರ್ತಿಸುವುದಕ್ಕಿಂತ ಮುಖ್ಯವಾದ ಸುಧಾರಣೆ ಇನ್ನೊಂದಿಲ್ಲ. ಆರ್ಥಿಕ ಬೆಳವಣಿಗೆ, ಮೂಲಸೌಕರ್ಯ, ಉತ್ಪಾದನೆ ಎಲ್ಲವೂ ಮುಖ್ಯ. ಆದರೆ ನಾವು ಅಂತಿಮವಾಗಿ ನಮ್ಮ ಮಾನವ ಬಂಡವಾಳದ ಗುಣಮಟ್ಟದಿಂದ ನಡೆಸಲ್ಪಡುತ್ತೇವೆ. ಇಂದು ಆ ಗುಣಮಟ್ಟವನ್ನು ನಾವು ತರಗತಿ ಕೋಣೆಗಳಲ್ಲಿ ಮಾಡುವ ಆಯ್ಕೆಯಿಂದ ನಿರ್ಧರಿಸಲಾಗುತ್ತದೆ.
ನ್ಯಾಯ ಪಡೆಯಲು ವಿದ್ಯಾರ್ಥಿಗಳು ಅರ್ಹರು. ಹಾಗೆಯೇ ಭಾರತವೂ ಕೂಡ ಸುಧಾರಣೆಗೆ ಅರ್ಹ. ಏಕೆಂದರೆ ರಾಷ್ಟ್ರವು ದುರ್ಬಲ, ಅಸ್ಥಿರ ಅಥವಾ ವಿಭಜನೆಯಾದರೆ ಅಂತಿಮವಾಗಿ ಯಾರ ಭವಿಷ್ಯ ಸುರಕ್ಷಿತಗೊಳಿಸಲಾಗುತ್ತಿದೆ? ನಾವು ಶಿಕ್ಷಣದ ಮೂಲಕ ಆ ಭವಿಷ್ಯ ಸಿದ್ಧಪಡಿಸಲು ವಿಫಲವಾದರೆ ಎಷ್ಟೇ ಆರ್ಥಿಕ ಮಹತ್ವಾಕಾಂಕ್ಷೆಗಳು ಇದ್ದರೂ ಸಾಕಾಗುವುದಿಲ್ಲ.