ಜ್ಞಾನೇಶ್ ವಿರುದ್ಧ ಮುಂಬೈನಲ್ಲಿ ಠಾಕ್ರೆಗಳ ಕಹಳೆ

Published : Oct 05, 2026, 10:21 AM IST
uddhav raj thackeray

ಸಾರಾಂಶ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ (ಎಸ್‌ಐಆರ್‌) ಭಾರೀ ಅಕ್ರಮಗಳು ನಡೆದಿದೆ ಎಂದು ಆರೋಪಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಒತ್ತಾಯಿಸಿ ಮುಂಬೈನಲ್ಲಿ ಉದ್ದವ್‌ ಠಾಕ್ರೆ ಬಣದ ಶಿವಸೇನೆ ಹಾಗೂ ರಾಜ್‌ ಠಾಕ್ರೆ ನೇತೃತ್ವದ ಎಂಎನ್‌ಎಸ್‌ನಿಂದ ಭಾನುವಾರ ಬೃಹತ್‌ ರ್‍ಯಾಲಿ ನಡೆಯಿತು.

ಮುಂಬೈ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ (ಎಸ್‌ಐಆರ್‌) ಭಾರೀ ಅಕ್ರಮಗಳು ನಡೆದಿದೆ ಎಂದು ಆರೋಪಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಒತ್ತಾಯಿಸಿ ಮುಂಬೈನಲ್ಲಿ ಉದ್ದವ್‌ ಠಾಕ್ರೆ ಬಣದ ಶಿವಸೇನೆ ಹಾಗೂ ರಾಜ್‌ ಠಾಕ್ರೆ ನೇತೃತ್ವದ ಎಂಎನ್‌ಎಸ್‌ನಿಂದ ಭಾನುವಾರ ಬೃಹತ್‌ ರ್‍ಯಾಲಿ ನಡೆಯಿತು.

ಆಡಳಿತಾರೂಢ ಬಿಜೆಪಿ ಪಾಲಿನ ಆಯುಧವಾಗಿ ಕೆಲಸ ಮಾಡುತ್ತಿದ್ದಾರೆ

ಈ ವೇಳೆ ಮಾತನಾಡಿದ ಉದ್ದವ್‌ ಠಾಕ್ರೆ, ಜ್ಞಾನೇಶ್‌ ಕುಮಾರ್‌ ಅವರು ಆಡಳಿತಾರೂಢ ಬಿಜೆಪಿ ಪಾಲಿನ ಆಯುಧವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ. ದೇಶದಲ್ಲಿ ಭವಿಷ್ಯದಲ್ಲಿ ಚುನಾವಣೆಗಳನ್ನು ಬ್ಯಾಲೆಟ್‌ ಮೂಲಕ ನಡೆಸಬೇಕು ಮತ್ತು ಮಹಾರಾಷ್ಟ್ರದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯನ್ನು ರದ್ದು ಮಾಡಬೇಕು ಎಂದು ರಾಜ್‌ ಠಾಕ್ರೆ ಆಗ್ರಹಿಸಿದರು.

‘ಎಸ್‌ಐಆರ್‌ ಅಕ್ರಮ ಬಾಂಗ್ಲಾನಿವಾಸಿಗಳನ್ನು ತೆಗೆದು ಹಾಕುವುದೇ ಆಗಿದ್ದರೆ ಎಷ್ಟು ಮಂದಿ ಬಾಂಗ್ಲಾನಿವಾಸಿಗಳು ದೇಶದಲ್ಲಿ ಪತ್ತೆಯಾಗಿದ್ದಾರೆ ಎಂಬ ಬಗ್ಗೆ ಕೇಂದ್ರದ ಬಳಿ ಮಾಹಿತಿ ಇದೆಯೇ?’ ಎಂದು ಪ್ರಶ್ನಿಸಿದ ಠಾಕ್ರೆ, ‘ಮಹಾರಾಷ್ಟ್ರದಲ್ಲಿ ಚುನಾವಣಾ ಆಯೋಗವು 2 ಕೋಟಿ ಮತದಾರರ ಹೆಸರು ಡಿಲೀಟ್‌ ಮಾಡಿದೆ. ಪಶ್ಟಿಮ ಬಂಗಾಳದಲ್ಲಿ 30 ಲಕ್ಷ ಹಾಗೂ ತಮಿಳುನಾಡಿನಲ್ಲಿ 70 ಲಕ್ಷ ಮತದಾರರ ಹೆಸರು ಡಿಲೀಟ್‌ ಮಾಡಿದೆ?’ ಎಂದು ಆರೋಪಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ವೋಟ್‌ ಚೋರಿ ಪ್ರತಿಭಟನೆ ಬಗ್ಗೆ ಸಿಜೆಪಿ-ಕಾಂಗ್ರೆಸ್‌ ಕ್ರೆಡಿಟ್‌ ವಾರ್‌
ಪುದುಚೇರಿಗೆ ಸೈಕ್ಲಿಂಗ್‌ ಪ್ರವಾಸ ಹೊರಟ ಸುರೇಶ್‌ ಕುಮಾರ್‌