ವಿಬಿ ಜಿ ರಾಮ್‌ಜಿ ಸ್ಕೀಂ ಜಾರಿಗೆ ಮೊದಲ ತಿಂಗಳೇ ಭಾರಿ ಹಿನ್ನಡೆ

Published : Aug 06, 2026, 07:01 AM IST
VB G RAM G

ಸಾರಾಂಶ

ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪ ಬದಲಿಸಿ ಅನುಷ್ಠಾನಗೊಳಿಸಲಾಗಿರುವ ವಿಬಿ ಜಿ ರಾಮ್‌ ಜಿ ಯೋಜನೆ ರಾಜ್ಯದಲ್ಲಿ ಜಾರಿಯಾದ ಮೊದಲ ತಿಂಗಳಲ್ಲೇ ಕಳೆದ ವರ್ಷಕ್ಕಿಂತ ಶೇ.78.77ರಷ್ಟು ಕಡಿಮೆ ಮಾನವ ದಿನಗಳ ಸೃಜನೆಯಾಗಿದೆ. ಆ ಮೂಲಕ ಯೋಜನೆಗೆ ಭಾರೀ ಹಿನ್ನಡೆಯುಂಟಾಗಿದೆ.

 ಬೆಂಗಳೂರು :  ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪ ಬದಲಿಸಿ ಅನುಷ್ಠಾನಗೊಳಿಸಲಾಗಿರುವ ವಿಬಿ ಜಿ ರಾಮ್‌ ಜಿ ಯೋಜನೆ ರಾಜ್ಯದಲ್ಲಿ ಜಾರಿಯಾದ ಮೊದಲ ತಿಂಗಳಲ್ಲೇ ಕಳೆದ ವರ್ಷಕ್ಕಿಂತ ಶೇ.78.77ರಷ್ಟು ಕಡಿಮೆ ಮಾನವ ದಿನಗಳ ಸೃಜನೆಯಾಗಿದೆ. ಆ ಮೂಲಕ ಯೋಜನೆಗೆ ಭಾರೀ ಹಿನ್ನಡೆಯುಂಟಾಗಿದೆ.

ಗ್ರಾಮೀಣ ಭಾಗದ ವಲಸೆ ತಡೆ, ಕೂಲಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ

ಗ್ರಾಮೀಣ ಭಾಗದ ವಲಸೆ ತಡೆ, ಕೂಲಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡಲು ಜಾರಿಗೊಳಿಸಲಾಗಿದ್ದ ಮ-ನರೇಗಾ ಯೋಜನೆ ಬದಲಾಯಿಸಿ ಕೇಂದ್ರ ಸರ್ಕಾರ ವಿಬಿ ಜಿ ರಾಮ್‌ ಜಿ ಕಾಯ್ದೆ ಅನುಷ್ಠಾನಗೊಳಿಸಿದೆ. ಜು.1ರಿಂದ ವಿಬಿ ಜಿ ರಾಮ್‌ ಜಿ ಕಾಯ್ದೆ ದೇಶದೆಲ್ಲೆಡೆ ಜಾರಿಯಾಗಿದೆ. ನೂತನ ಕಾಯ್ದೆಯಂತೆ ಮ-ನರೇಗಾ ಯೋಜನೆಗಿಂತ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ, ವಿಬಿ ಜಿ ರಾಮ್‌ ಜಿ ಜಾರಿಯಾದ ಮೊದಲ ತಿಂಗಳಲ್ಲಿಯೇ ಮಾನವ ದಿನಗಳ ಸೃಜನೆಯಲ್ಲಿ ಭಾರೀ ಕಡಿತವಾಗಿದೆ. ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಈ ವರ್ಷ ಕೆಲಸ ಸೃಷ್ಟಿ ಪ್ರಮಾಣ ಕಡಿಮೆಯಾಗಿದೆ.

ಕೇಂದ್ರ ಸರ್ಕಾರ ಗುರುತಿಸಿರುವಂತೆ ರಾಜ್ಯದ 5,958 ಗ್ರಾಮಗಳ 4,991 ಗ್ರಾಪಂಗಳಲ್ಲಿ ಒಟ್ಟು 11,555 ಕೆಲಸಗಳ ಅನುಷ್ಠಾನ ಮಾಡಲಾಗುತ್ತಿದೆ. ಅದರ ಮೂಲಕ ಜು.1 ರಿಂದ 31ರವರೆಗೆ 13.06 ಲಕ್ಷ ಮಾನವ ದಿನಗಳು ಸೃಷ್ಟಿಯಾಗಿವೆ. ಅದೇ 2025ರ ಜುಲೈ ತಿಂಗಳಲ್ಲಿ ಮ-ನರೇಗಾ ಯೋಜನೆ ಅಡಿ ಜುಲೈ ತಿಂಗಳಲ್ಲಿ 61.49 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿತ್ತು. ಒಟ್ಟಾರೆ ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಈ ವರ್ಷದ ಜುಲೈನಲ್ಲಿ ಶೇ. 78.77ರಷ್ಟು ಕಡಿಮೆ ಮಾನವ ದಿನಗಳು ಸೃಜನೆಯಾಗಿದೆ.

- 2025ರ ಜುಲೈ ತಿಂಗಳಲ್ಲಿ ನರೇಗಾ ಯೋಜನೆ ಅಡಿ 61.49 ಲಕ್ಷ ಮಾನವ ದಿನ ಸೃಷ್ಟಿ

- ಆದರೆ ಜಿರಾಮ್‌ಜಿ ಮೂಲಕ ಜು.1 ರಿಂದ 31ರವರೆಗೆ 13.06 ಲಕ್ಷ ಮಾನವ ದಿನ ಸೃಷ್ಟಿ

- ಕಳೆದ ವರ್ಷಕ್ಕೆ ಹೋಲಿಸಿದರೆ ಈ ಜುಲೈನಲ್ಲಿ ಶೇ.79 ಕಡಿಮೆ ಮಾನವ ದಿನಗಳು ಸೃಷ್ಟಿ

- ಜಿ ರಾಮ್‌ ಜಿ ಯೋಜನೆ ಬೇಡ ಎಂದು ಹೇಳಿದ್ದ ವಿಪಕ್ಷ ಸರ್ಕಾರ ಇರುವ ರಾಜ್ಯಗಳು

- ಆದರೆ ಹೊಸ ಯೋಜನೆಯಿಂದ ಹೆಚ್ಚು ಅನುಕೂಲ ಎಂದಿದ್ದ ಕೇಂದ್ರದ ಎನ್‌ಡಿಎ ಸರ್ಕಾರ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬಡಿದೆದ್ದ ಬಂಡಾಯ ಬಹುತೇಕ ಥಂಡಾಯ
ರಾಜ್ಯದ 20%, ಬೆಂಗ್ಳೂರಿನ 48% ಮತದಾರರ ಹೆಸರು ಡಿಲೀಟ್‌!