ಇಂದು ಬಂಗಾಳ ಹಂತ-1, ತಮಿಳುನಾಡು ಚುನಾವಣೆ

Published : Apr 23, 2026, 08:43 AM IST
west bengal election 2026 red alert seats criminal candidates adr report wealth growth india politics

ಸಾರಾಂಶ

ದೇಶದಲ್ಲೇ ಅತಿ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ಚುನಾವಣೆಯ ಹಂತ-1 ಗುರುವಾರ ನಡೆಯಲಿದೆ. ಅಂತೆಯೇ ತಮಿಳುನಾಡು ಚುನಾವಣೆ ಕೂಡ ಏಕಹಂತದಲ್ಲಿ ಇದೇ ದಿನ ಜರುಗಲಿದೆ.ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 234 ಸ್ಥಾನಗಳಿಗೆ 5.73 ಕೋಟಿಗೂ ಹೆಚ್ಚು ಮತದಾರರು 4,023 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಮಾಡಲಿದ್ದಾರೆ.

ಕೋಲ್ಕತಾ/ಚೆನ್ನೈ : ದೇಶದಲ್ಲೇ ಅತಿ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ಚುನಾವಣೆಯ ಹಂತ-1 ಗುರುವಾರ ನಡೆಯಲಿದೆ. ಅಂತೆಯೇ ತಮಿಳುನಾಡು ಚುನಾವಣೆ ಕೂಡ ಏಕಹಂತದಲ್ಲಿ ಇದೇ ದಿನ ಜರುಗಲಿದೆ.

234 ಸ್ಥಾನಗಳಿಗೆ 5.73 ಕೋಟಿಗೂ ಹೆಚ್ಚು ಮತದಾರರು

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 234 ಸ್ಥಾನಗಳಿಗೆ 5.73 ಕೋಟಿಗೂ ಹೆಚ್ಚು ಮತದಾರರು 4,023 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಮಾಡಲಿದ್ದಾರೆ. ಡಿಎಂಕೆ-ಕಾಂಗ್ರೆಸ್‌ ಕೂಟ, ಅಣ್ಣಾಡಿಎಂಕೆ-ಬಿಜೆಪಿ ಕೂಟ ಹಾಗೂ ವಿಜಯ್‌ ಅವರ ಟಿವಿಕೆ ನಡುವೆ ತ್ರಿಕೋನ ಕದನ ಏರ್ಪಟ್ಟಿದೆ.

ಇನ್ನು ಪ.ಬಂಗಾಳದ 294 ಸ್ಥಾನಗಳ ಪೈಕಿ 152 ಸ್ಥಾನಗಳಿಗೆ ಗುರುವಾರ ಮತದಾನ ನಡೆಯಲಿದೆ. ಟಿಎಂಸಿ-ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಆದರೆ ಇದೇ ವೇಳೆ ಕಾಂಗ್ರೆಸ್-ಎಡರಂಗ ಏನು ಕಮಾಲ್ ಮಾಡುತ್ತವೆ ಎಂಬುದು ಕುತೂಹಲ ಕೆರಳಿಸಿದೆ, 1.75 ಕೋಟಿ ಮಹಿಳೆಯರು ಸೇರಿದಂತೆ 3.60 ಕೋಟಿಗೂ ಹೆಚ್ಚು ಮತದಾರರು ತಮ್ಮ ಮತದಾನಕ್ಕೆ ಅರ್ಹರಾಗಿದ್ದಾರೆ.

ಬಂಗಾಳದ 2ನೇ ಹಂತದ ಚುನಾವಣೆ ಏ.29ಕ್ಕೆ ನಡೆಯಲಿದೆ.

ತಮಿಳುನಾಡು, ಬಂಗಾಳ ಸೇರಿ ಚುನಾವಣೆ ನಡೆದಿರುವ 4 ರಾಜ್ಯ ಹಾಗೂ 1 ಕೇಂದ್ರಾಡಳಿತ ಪ್ರದೇಶಗಳ ಮತ ಎಣಿಕೆ ಮೇ 4ಕ್ಕೆ ನಡೆಯಲಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಕಾಂಗ್ರೆಸ್‌ಗೆ ಮುಸ್ಲಿಂ ನಾಯಕರ ತಲಾಖ್‌ ಎಚ್ಚರಿಕೆ-ಪಕ್ಷಕ್ಕೆ ವಿದಾಯ, ಚುನಾವಣೆಯಲ್ಲಿ ತಕ್ಕ ಪಾಠ
‘ಮೋದಿ ಉಗ್ರ’ ಹೇಳಿಕೆ: ಖರ್ಗೆ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು