ಸಿದ್ದರಾಮಯ್ಯನವರೇ ನೀವು ಕ್ಲೀನ್ ಸಿಎಂ ಅಲ್ಲ, ಕರೆಪ್ಟ್ ಸಿಎಂ-ರೀಡೂ ಪಿತಾಮಹ ಯಾರು?: ಸಿ.ಟಿ.ರವಿ

KannadaprabhaNewsNetwork |  
Published : Aug 08, 2024, 01:46 AM ISTUpdated : Aug 08, 2024, 04:31 AM IST
ಮಾಜಿ ಸಚಿವ ಸಿ.ಟಿ.ರವಿ | Kannada Prabha

ಸಾರಾಂಶ

ನೀವು ಭ್ರಷ್ಟಾಚಾರದ ಫಲಾನುಭವಿಯೂ ಹೌದು. ಪೋಷಕರು ಹೌದು. ರೀಡೂ ಪಿತಾಮಹ ಯಾರು?, ರೀಡೂ ಹೆಸರಿನಲ್ಲಿ 884 ಎಕರೆ ಡಿ-ನೋಟಿಫೈಕೇಷನ್ ಮಾಡಲಾಯಿತು. ಅದು ಅಕ್ರಮವಲ್ಲವೇ?, ಕೆಂಪಣ್ಣ ಆಯೋಗದ ವರದಿಯಲ್ಲಿ ಅರ್ಕಾವತಿ ಬಡಾವಣೆಯಲ್ಲಿ ಹಗರಣ ಆಗಿರುವುದು ತಪ್ಪು ಎಂಬುದು ಸಾಬೀತಾಗಿದೆ.

 ಮಂಡ್ಯ :  ಸಿದ್ದರಾಮಯ್ಯನವರೇ ನೀವು ಕ್ಲೀನ್ ಸಿಎಂ ಅಲ್ಲ, ಕರೆಪ್ಟ್ ಸಿಎಂ. ನಿಮಗೆ ಸತ್ಯ ಎದುರಿಸುವ ಧೈರ್ಯವಿಲ್ಲದೆ ಪಲಾಯನವಾದ ಮಾಡಿದ್ದೀರಿ. ಫಲಾನುಭವಿಯಾಗಿರುವುದರಿಂದಲೇ ಪಲಾಯನ ಮಾಡುತ್ತಿದ್ದೀರಿ ಎಂದು ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದರು.

ನೀವು ಭ್ರಷ್ಟಾಚಾರದ ಫಲಾನುಭವಿಯೂ ಹೌದು. ಪೋಷಕರು ಹೌದು. ರೀಡೂ ಪಿತಾಮಹ ಯಾರು?, ರೀಡೂ ಹೆಸರಿನಲ್ಲಿ884 ಎಕರೆ ಡಿ-ನೋಟಿಫೈಕೇಷನ್ ಮಾಡಲಾಯಿತು. ಅದು ಅಕ್ರಮವಲ್ಲವೇ?, ಕೆಂಪಣ್ಣ ಆಯೋಗದ ವರದಿಯಲ್ಲಿ ಅರ್ಕಾವತಿ ಬಡಾವಣೆಯಲ್ಲಿ ಹಗರಣ ಆಗಿರುವುದು ತಪ್ಪು ಎಂಬುದು ಸಾಬೀತಾಗಿದೆ. ಅದನ್ನು ಒಪ್ಪಿಕೊಳ್ಳದೆ ನಾನು ಕ್ಲೀನ್ ಸಿಎಂ ಎಂದರೆ ಹೇಗೆ ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು.

ಮೈಸೂರು ಮುಡಾ ವಿಚಾರದಲ್ಲಿ ನೀವು ಅಮಾಯಕ ಅಲ್ಲ. ಕೆಸರೆ ಸರ್ವೇ ನಂಬರ್ 464 ರ ಜಾಗಕ್ಕೆ ರಾಜ್ಯ ಸರ್ಕಾರ 1997 ರಲ್ಲಿ ಅಧಿಸೂಚನೆ ಹೊರಡಿಸಿತ್ತು. 98 ರಲ್ಲಿ ಡಿನೋಟಿಫಿಕೇಷನ್ ಹೇಗಾಯ್ತು? ಒಮ್ಮೆ ನೋಟಿಫಿಕೇಷನ್ ಆಗಿರುವ ಜಾಗವನ್ನು ಮತ್ತೆ ಡಿನೋಟಿಫೈ ಮಾಡಲಾಗುವುದಿಲ್ಲ. ಹಾಗಾದರೆ ಡಿನೋಟಿಫಿಕೇಷನ್ ಮಾಡಿದ ಪ್ರಭಾವಿ ಯಾರು?, ನನ್ನ ಪ್ರಕಾರ ನೀವೇ ಆ ಪ್ರಭಾವಿ ವ್ಯಕ್ತಿ. ಆಗ ನೀವು ಉಪಮುಖ್ಯಮಂತ್ರಿಯಾಗಿದ್ದರ ಜೊತೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿದ್ದಿರಿ. ನೀವು ಪ್ಲ್ಯಾನ್ ಮಾಡಿಯೇ ಅಭಿವೃದ್ಧಿ ಆಗಿರುವ ಜಾಗವನ್ನು ಡಿನೋಟಿಫಿಕೇಷನ್ ಮಾಡಿಸಿದ್ದೀರಿ ಎಂದು ನೇರವಾಗಿ ಆರೋಪಿಸಿದರು.

ಸೀಡಿ ಶಿವು, ವೀಡಿಯೋ ಚಾಳಿ ಬಿಟ್ಟಿಲ್ಲ: ಎಚ್‌ಡಿಕೆ

ಸೀಡಿ, ವೀಡಿಯೋ ಮಾಡುವುದರಲ್ಲಿ ಡಿ.ಕೆ.ಶಿವಕುಮಾರ್ ಎಕ್ಸ್‌ಪರ್ಟ್. ಅದಕ್ಕೇ ಅವರನ್ನು ಸೀಡಿ ಶಿವು ಅಂತ ಕರೆಯೋದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ವೀಡಿಯೋ ಮಾಡುವ ಚಾಳಿಯನ್ನು ಇನ್ನೂ ಅವರು ಬಿಟ್ಟಿಲ್ಲ. ನಾನು, ಯಡಿಯೂರಪ್ಪ ಮತ್ತೆ ಬೇರೆಯವರು ಮಾತನಾಡಿರುವ ಹಳೇ ವೀಡಿಯೋಗಳನ್ನು ಬಿಟ್ಟಿದ್ದೀರಲ್ಲ. ಹಾಗೆಯೇ ಹಿಂದೆ ಸಿದ್ದರಾಮಯ್ಯ ಅವರು ನಮ್ಮ ಪಕ್ಷದಲ್ಲೇ ಇದ್ದರು. ಆಗ ಕಾಂಗ್ರೆಸ್ ಬಗ್ಗೆ, ಸೋನಿಯಾ ಇತರರ ಬಗ್ಗೆ ಏನು ಮಾತನಾಡಿದ್ದಾರೆ ಎಂಬುದನ್ನು ಹಿಂತಿರುಗಿ ನೋಡಿ ಎಂದು ಶಿವಕುಮಾರ್‌ಗೆ ಟಾಂಗ್ ಕೊಟ್ಟರು.

PREV

Recommended Stories

ಎಲ್ಲರ ಎದ್ದುನಿಲ್ಲಿಸಿ ಬಿವೈವಿಗೆ ಬಿ.ಎಲ್‌.ಸಂತೋಷ್‌ ಚಪ್ಪಾಳೆ
ಕಮಲ-ದಳದಿಂದ ‘ಕೈ’ ಯೋಜನೆ ರದ್ದು ಅಸಾಧ್ಯ: ಡಿಕೆ