ಹಿರೀಕಾಟಿ ಗೇಟ್‌ ಆಕ್ಸಿಡೆಂಟ್‌ ಸ್ಪಾಟ್‌?

KannadaprabhaNewsNetwork | Published : Oct 28, 2023 1:16 AM

ಸಾರಾಂಶ

ಹೆದ್ದಾರಿಯಲ್ಲಿ ಗುಂಡಿ ಬಿದ್ದು ಮಳೆಯಿಂದಾಗಿ ನೀರು ನಿಂತ ಕಾರಣ ತಾಲೂಕಿನ ಹೀರಿಕಾಟಿ ಗೇಟ್(ಮೈಸೂರು-ಊಟಿ ಹೆದ್ದಾರಿ) ಆಕ್ಸಿಡೆಂಟ್ ಸ್ಪಾಟ್ ಆಗಿ ಹೊರ ಹೊಮ್ಮುತ್ತಿದೆ. ಹಿರೀಕಾಟಿ ಎಂದಾಕ್ಷಣ ಗಣಿಗಾರಿಕೆಗೆ ಹೆಸರಾದ ಗ್ರಾಮ. ಇಲ್ಲಿ ಟಿಪ್ಪರ್ ಓಡಾಟ ಮಾಮೂಲಿಯಾಗಿದೆ. ಹಿರೀಕಾಟಿ ಗೇಟ್ ಬಳಿ ಕ್ರಷರ್ ಗಳಿವೆ.
ಹೆದ್ದಾರಿಯಲ್ಲಿ ತಗ್ಗು,ಗುಂಡಿಗಳ ನಿರ್ಮಾಣ । ಓವರ್ ಲೋಡ್ ಟಿಪ್ಪರ್ ಸಂಚಾರದ ಕಡಿವಾಣಕ್ಕಾಗಿ ಸಾರ್ವಜನಿಕರ ಆಗ್ರಹ ರಂಗೂಪುರ ಶಿವಕುಮಾರ್‌ ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ ಹೆದ್ದಾರಿಯಲ್ಲಿ ಗುಂಡಿ ಬಿದ್ದು ಮಳೆಯಿಂದಾಗಿ ನೀರು ನಿಂತ ಕಾರಣ ತಾಲೂಕಿನ ಹೀರಿಕಾಟಿ ಗೇಟ್(ಮೈಸೂರು-ಊಟಿ ಹೆದ್ದಾರಿ) ಆಕ್ಸಿಡೆಂಟ್ ಸ್ಪಾಟ್ ಆಗಿ ಹೊರ ಹೊಮ್ಮುತ್ತಿದೆ. ಹಿರೀಕಾಟಿ ಎಂದಾಕ್ಷಣ ಗಣಿಗಾರಿಕೆಗೆ ಹೆಸರಾದ ಗ್ರಾಮ. ಇಲ್ಲಿ ಟಿಪ್ಪರ್ ಓಡಾಟ ಮಾಮೂಲಿಯಾಗಿದೆ. ಹಿರೀಕಾಟಿ ಗೇಟ್ ಬಳಿ ಕ್ರಷರ್ ಗಳಿವೆ. ಕ್ವಾರಿಗಳೂ ಇರುವ ಕಾರಣ ನೂರಾರು ಟಿಪ್ಪರ್ ಗಳ ಓಡಾಟ ಇದ್ದೇ ಇರುತ್ತದೆ. ಹಿರೀಕಾಟಿ ಗೇಟ್ ಬಳಿ ಕಬಿನಿ ನೀರು ಸಂಪರ್ಕದ ಪೈಪ್ ಲೈನ್ ಇದ್ದು, ಆ ಪೈಪ್ ಒಡೆದು ನೀರು ಸೋರಿಕೆಯಾಗುತ್ತಿದೆ. ಹಿರೀಕಾಟಿ ಗೇಟ್‌ನ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ಎಲ್ಲೆಂದರಲ್ಲಿ ನಿಂತ ನೀರಿಗೆ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಹಿರೀಕಾಟಿ ಗೇಟು ಮೈಸೂರು-ಊಟಿ ಹೆದ್ದಾರಿಯ ಹಳ್ಳದಲ್ಲಿದೆ. ಮೈಸೂರು ಕಡೆಯಿಂದ ಹಾಗೂ ಗುಂಡ್ಲುಪೇಟೆಯಿಂದ ವಾಹನಗಳು ವೇಗವಾಗಿ ಬರುವ ಕಾರಣ ಹಿರೀಕಾಟಿ ಗೇಟ್ ಗುಂಡಿ ಹಾಗು ಬ್ಯಾರಿಕ್ಯಾಡ್ ಗೆ ಗುದ್ದಿ ಹಲವು ಅಪಘಾತಗಳು ಸಂಭವಿಸಿವೆ. ಅಕ್ಸಿಡೆಂಡ್ ಸ್ಪಾಟ್ ಆಗಿರುವ ಹಿರೀಕಾಟಿ ಗೇಟ್ ನಲ್ಲಿ ಅನೇಕ ಸಾವು,ನೋವುಗಳು ಸಂಭವಿಸಿವೆ. ಪೊಲೀಸರು ಓವರ್ ಲೋಡ್ ಟಿಪ್ಪರ್ ಗಳ ಸಂಚಾರಕ್ಕೆ ಕಡಿವಾಣ ಹಾಕದೇ ಹಲವು ಅಪಘಾತ ಹಾಗೂ ಸಾವು ನೋವಿಗೆ ಕಾರಣರಾಗಿದ್ದಾರೆ. ಸ್ಥಳೀಯ ಪೊಲೀಸರು, ಕ್ವಾರಿ ಲೀಸ್ ದಾರರು ಹಾಗೂ ಕ್ರಷರ್ ಮಾಲೀಕರ ಮುಲಾಜಿಗೆ ಒಳಗಾಗಿರುವುದರಿಂದ ಓವರ್ ಲೋಡ್ ಟಿಪ್ಪರ್ ಗಳ ಸಂಚಾರ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹಿರೀಕಾಟಿ ಗ್ರಾಮದ ಯುವಕರು ದೂರಿದ್ದಾರೆ. ಬಸ್‌ ಶೆಲ್ಟರ್‌ ಶಿಥಿಲ? ಕ್ರಷರ್‌ ವೇಸ್ಟ್‌ ನೀರು ಹಾಗು ಕಬಿನಿ ನೀರಿನ ಪೈಪ್‌ ಒಡೆದು ನೀರು ನಿಂತ ಕಾರಣ ಹಿರೀಕಾಟಿ ಗೇಟ್‌ನ ಬಸ್‌ ಶೆಲ್ಟರ್‌ ಶಿಥಿಲವಾಗುತ್ತಿದೆ. ಇದು ಯಾವುದೇ ಸಮಯದಲ್ಲೂ ಬೀಳಬಹುದು ಎಂದು ಗ್ರಾಮಸ್ಥರು ದೂರಿದ್ದಾರೆ. ಕಡಿವಾಣ ಹಾಕಲಿ ಹಿರೀಕಾಟಿ ಗ್ರಾಮದಿಂದ ಬರುವ ಟಿಪ್ಪರ್ ಗಳು ಓವರ್ ಲೋಡ್ ಹಾಕದಂತೆ ಕ್ರಮ ವಹಿಸುವ ಮೂಲಕ ಬೇಗೂರು ಪೊಲೀಸರು ಕಾಳಜಿ ವಹಿಸಲಿ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಕೋಟ್..... ಹಿರೀಕಾಟಿ ಗೇಟ್ ಗೆ ಬರುವ ನೀರು ನಿಲ್ಲಿಸಬೇಕು.ಓವರ್ ಲೋಡ್ ತುಂಬಿದ ಟಿಪ್ಪರ್ ಸಂಚಾರಕ್ಕೆ ಕಡಿವಾಣ ಹಾಕಿದರೆ ಹೆದ್ದಾರಿಯಲ್ಲಿ ಗುಂಡಿ ಬೀಳುವುದು ತಪ್ಪಲಿದೆ.ಶಾಸಕರು,ಜಿಲ್ಲಾಧಿಕಾರಿಗಳು ಆಕ್ಸಿಡೆಂಟ್ ಸ್ಪಾಟ್ ಆಗುವುದನ್ನು ತಪ್ಪಿಸಿ ಅಮಾಯಕರ ಪ್ರಾಣ ಉಳಿಸಲಿ. -ಶ್ರೀಧರ್,ಹಿರೀಕಾಟಿ ಗ್ರಾಮಸ್ಥ - ೨೭ಜಿಪಿಟಿ೨ ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗೇಟ್‌ ಬಳಿಯ ಬಸ್‌ ಶೆಲ್ಟರ್‌ ಹಿಂಭಾಗ ನೀರು ನಿಂತ ದೃಶ್ಯ. -- ೨೭ಜಿಪಿಟಿ೩ ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗೇಟ್‌ ಬಳಿ ರಸ್ತೆ ಅಗೆದಿದ್ದರಿಂದ ನೀರು ನಿಂತಿರುವುದು. ---- ೨೭ಜಿಪಿಟಿ೪ ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ರಸ್ತೆಯಲ್ಲಿ ಟಿಪ್ಪರ್‌ ತೆರಳುವಾಗ ವಿದ್ಯಾರ್ಥಿಗಳು ಧೂಳಿನ ನಡುವೆ ತೆರಳುವ ದೃಶ್ಯ.

Share this article