‘ಕನ್ನಡ ಭಾಷೆಗೆ ಕಿಟೆಲ್ ಕೊಡುಗೆ ಅನನ್ಯ’

KannadaprabhaNewsNetwork | Published : Nov 5, 2023 1:16 AM

ಸಾರಾಂಶ

ಫರ್ಡಿನಾಂಡ್ ಕಿಟೆಲ್ ಅವರು ಕನ್ನಡದ ಸೌಭಾಗ್ಯ. ಕನ್ನಡ ಭಾಷೆಗೆ ಅವರ ಕೊಡುಗೆ ಅನನ್ಯ, ಕಿಟೆಲ್ ರಂತಹ ಕನ್ನಡ ಪ್ರೇಮಿಗಳ ಅವಶ್ಯಕತೆ ಇಂದು ನಾಡಿಗೆ ಅವಶ್ಯವಾಗಿದೆ ಎಂದು ವಿದ್ವಾಂಸ ಶಿವಣ್ಣ ಇಂದ್ವಾಡಿ ಅಭಿಪ್ರಾಯಪಟ್ಟರು.

ಸಂತೇಮರಹಳ್ಳಿಯಲ್ಲಿ ನಡೆದ ‘ಕನ್ನಡ ಮಾಸಾಚರಣೆ 2023’ ಕಾರ್ಯಕ್ರಮ । ವಿದ್ವಾಂಸ ಶಿವಣ್ಣ ಅಭಿಮತ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಫರ್ಡಿನಾಂಡ್ ಕಿಟೆಲ್ ಅವರು ಕನ್ನಡದ ಸೌಭಾಗ್ಯ. ಕನ್ನಡ ಭಾಷೆಗೆ ಅವರ ಕೊಡುಗೆ ಅನನ್ಯ, ಕಿಟೆಲ್ ರಂತಹ ಕನ್ನಡ ಪ್ರೇಮಿಗಳ ಅವಶ್ಯಕತೆ ಇಂದು ನಾಡಿಗೆ ಅವಶ್ಯವಾಗಿದೆ ಎಂದು ವಿದ್ವಾಂಸ ಶಿವಣ್ಣ ಇಂದ್ವಾಡಿ ಅಭಿಪ್ರಾಯಪಟ್ಟರು.

ಚಾಮರಾಜನಗರ ತಾಲೂಕಿನ ಸಂತೇಮರಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಜೆ ಎಸ್ ಬಿ ಪ್ರತಿಷ್ಠಾನ ಆಯೋಜಿಸಿದ್ದ ''''''''ಕನ್ನಡ ಮಾಸಾಚರಣೆ ೨೦೨೩'''''''' ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ಕನ್ನಡಕ್ಕೆ ಒಬ್ಬರೇ ಕಿಟೆಲ್.ಕನ್ನಡ ಮಾತ್ರವಲ್ಲ, ಇಡೀ ದ್ರಾವಿಡ ಭಾಷೆಗಳ ಕುಟುಂಬಕ್ಕೆ ಒಬ್ಬರೇ ಕಿಟೆಲ್. ಏಕೆಂದರೆ ಫರ್ಡಿನಾಂಡ್ ಕಿಟೆಲ್‌ಗೆ ಹೋಲಿಸಬಹುದಾದ ಗುಣಮಟ್ಟದ ನಿಘಂಟುಕಾರ ಬೇರೆ ಯಾವುದೇ ದ್ರಾವಿಡ ಭಾಷೆಯಲ್ಲಿ ಕಂಡುಬಂದಿಲ್ಲ. ಇದು ಕನ್ನಡದ ಸೌಭಾಗ್ಯ. ಬೇರೆ ಭಾಷೆ ಮತ್ತು ಸಂಸ್ಕೃತಿಯ ಹಿನ್ನೆಲೆಯ ವ್ಯಕ್ತಿ ದೂರದ ಜರ್ಮನಿಯಿಂದ ಆಗಮಿಸಿ, ನಮ್ಮ ಕನ್ನಡ ಭಾಷೆ, ಸಂಸ್ಕೃತಿಯನ್ನು ಕಲಿತು ನಿಘಂಟು ರಚಿಸಿರುವುದು ಕನ್ನಡ ಭಾಷೆಯ ವಿಶೇಷವೇ ಸರಿ. ಜರ್ಮನಿಯಿಂದ ಭಾರತಕ್ಕೆ ಬಂದ ಆರಂಭದಲ್ಲಿ ಕನ್ನಡ ಕಲಿಯುವುದು ಅನಿವಾರ್ಯವಾಗಿದ್ದರೂ ಸಮಯ ಕಳೆದಂತೆ ಕಿಟೆಲ್ ಅವರು ಈ ಭಾಷೆಯ ಸೌಂದರ್ಯಕ್ಕೆ ಶರಣಾದರು. ಅಲ್ಪಾವಧಿಯಲ್ಲಿಯೇ ಅವರು ಕನ್ನಡ ಭಾಷೆಯಲ್ಲಿ ಪ್ರವೀಣರಾದರು. ಹಾಗೆ ಸಾಹಿತ್ಯದಲ್ಲಿ ಅಸಾಮಾನ್ಯ ಪಾಂಡಿತ್ಯವನ್ನೂ ಸ್ಥಾಪಿಸಿದರು. ಒಂದು ರೀತಿಯಲ್ಲಿ ಹೇಳುವುದಾದರೆ ಕಿಟೆಲ್ ರಿಗೆ ಕನ್ನಡ ಭಾಷೆಯೇ ‘ನಶೆ’ ಏರಿತ್ತು.ಪ್ರಾರಂಭದಲ್ಲಿ ಸವಿಯುವಿಕೆ ನಂತರ ವ್ಯಸನ ಅಂತಿಮವಾಗಿ ದಾಸ್ಯ. ಇದು ಕಿಟೆಲ್‌ರಿಗೆ ನಿಖರವಾಗಿ ಸಂಭವಿಸಿತು. ಜರ್ಮನ್ ಧರ್ಮಪ್ರಚಾರಕ ಫರ್ಡಿನಾಂಡ್ ಕಿಟೆಲ್ ಕನ್ನಡಕ್ಕೆ ಮತಾಂತರಗೊಂಡರು. ಇಪ್ಪತ್ತೆರಡು ವರ್ಷಗಳ ಕಠಿಣ ಪರಿಶ್ರಮದಿಂದ ಕನ್ನಡ ನಿಘಂಟನ್ನುರಚಿಸಿದರು. ವಸ್ತ್ರದ ಶಿವಲಿಂಗಯ್ಯ, ಎಂ.ಸಿ ಶ್ರೀನಿವಾಸಾಚಾರ್ಯ ಮತ್ತು ಶಿವರಾಮ ಭಾರಧ್ವಾಜರಂತಹ ಸಮರ್ಥ ಸ್ಥಳೀಯ ವಿದ್ವಾಂಸರು ಅವರಿಗೆ ಸಹಾಯ ಮಾಡಿದರು. ಇದು ಅನೇಕ ವೈಜ್ಞಾನಿಕ ಮತ್ತು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ.1896 ರಲ್ಲಿ ಜರ್ಮನಿಯ ಟ್ಯೂಬಿಂಗನ್ ವಿಶ್ವವಿದ್ಯಾನಿಲಯವು ಫರ್ಡಿನಾಂಡ್ ಕಿಟೆಲ್ ಅವರಿಗೆ ಕನ್ನಡ ಭಾಷೆಯಲ್ಲಿ ಮಾಡಿದ ಕೆಲಸಕ್ಕಾಗಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಇದು ಕನ್ನಡಕ್ಕೆ ಸಂದ ಮೊದಲ ಡಾಕ್ಟರೇಟ್ ಎಂದು ಅವರು ತಿಳಿಸಿದರು.ಉಪ ಪ್ರಾಂಶುಪಾಲ ಎ. ಶಿವಣ್ಣ ಮಾತನಾಡಿ, ಕನ್ನಡವನ್ನು ಹೆಚ್ಚು ಬಳಸುವುದರಿಂದ ಅದು ಬೆಳೆಯುತ್ತದೆ ಹಾಗೂ ಉಳಿಯುತ್ತದೆ ಎಂದು ತಿಳಿಸಿದರು. ಜೆ ಎಸ್ ಬಿ ಪ್ರತಿಷ್ಠಾನದ ಎಸ್. ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಾಲೆಯ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲೆ ಶಿಕ್ಷಕರಾದ ಪ್ರಕಾಶ, ಮಂಜುನಾಥ, ಮಂಚಯ್ಯ, ಪುಟ್ಟರಾಜು, ಶಾಂತಮೂರ್ತಿ, ಸುಮನಕುಮಾರಿ, ಮಹೇಶ್ವರಿ, ಲಕ್ಷ್ಮೀ, ವನಜಾಕ್ಷಿ, ಅಸ್ಸಿಯಮ್ಮ, ಸುಮಚೌಧರಿ, ಸಿಬ್ಬಂದಿಗಳು,ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು. -------- 4ಸಿಎಚ್‌ಎನ್‌17ಚಾಮರಾಜನಗರ ತಾಲೂಕಿನ ಸಂತೇಮರಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಜೆ ಎಸ್ ಬಿ ಪ್ರತಿಷ್ಠಾನ ಆಯೋಜನೆಗೊಂಡಿದ್ದ ''''''''ಕನ್ನಡ ಮಾಸಾಚರಣೆ ೨೦೨೩'''''''' ಕಾರ್ಯಕ್ರಮ.

Share this article