;Resize=(412,232))
‘ಕನ್ನಡಪ್ರಭ’ ದಿನಪತ್ರಿಕೆಯ ಕಳೆದ 101 ದಿನಗಳಿಂದಲೂ ‘ಉಳುವ ಯೋಗಿಯ ನೋಡಲ್ಲಿ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ ಲೇಖನಮಾಲೆಯು ಕೇವಲ ಬರಹಗಳ ಸರಣಿ ಅಲ್ಲ , ಅದು ನಾಡಿನ ಮಣ್ಣಿಗೆ ಹಾಗೂ ಅನ್ನದಾತರಿಗೆ ಹಸಿರು ಬೆಳೆಗಳಿಗೆ ಸಲ್ಲಿಸುವ ಗೌರವಾನ್ವಿತ ನಮನವಾಗಿದೆ.
ರೈತನ ಬೆವರು ದಿನದ ಬೆಳಕು, ಪತ್ರಿಕೆಯ ಸತ್ಯ ಮಾತು ರಾತ್ರಿಯ ದೀಪದ ಬೆಳಕು ಇದ್ದಂತೆ .ಅಂತಹ ಮಹತ್ಸಾಧನೆ ಕಾಯಕವನ್ನು ನಿಷ್ಠೆಯಿಂದ ಅನ್ನದಾತನರ ಬದುಕಿನ ಪರವಾಗಿ ಮೂಡಿಸಲ್ಪಟ್ಟಿದ್ದು ‘ಕನ್ನಡಪ್ರಭ’ ಸಾರ್ಥಕತೆ ಶ್ಲಾಘನೀಯ ಸೇವೆಯೆಂದು ಹೇಳಬಹುದು.
‘ಕನ್ನಡಪ್ರಭ’ ದಲ್ಲಿ ಬೆಳಿಗ್ಗೆ ಚಹಾ, ಕಾಫಿಯ ಜೊತೆಗೆ ಸವಿಯ ರೈತರ ಬೆಳೆ ಬೆಳೆದ ನೆನಪು ನೂರೊಂದು ದಿನಗಳ ಕಾಲ ನಿರಂತರವಾಗಿ ಬರೆದ ಅಂಶಿ ಪ್ರಸನ್ನಕುಮಾರ್ ಕುಮಾರ್ ಶ್ರದ್ಧೆ, ಶ್ರಮಪೂರ್ಣ ಲೇಖನಗಳು ಹೊಲದ ತಂಗಾಳಿಯಲ್ಲಿ ಬೆವರು ಚೆಲ್ಲುವ ರೈತನಿಗೆ ಧ್ವನಿ ನೀಡಿದಂತಾಗಿದೆ. ಅವರ ಕೃಷಿ, ಹೈನುಗಾರಿಕೆ ,ದನಕರುಗಳು, ಮರ, ಗಿಡ, ದವಸ, ಧಾನ್ಯ, ತರಕಾರಿ, ಹೂವಿನ ಬೆಳೆ, ಶ್ರಮ, ನಂಬಿಕೆ, ತಾಳ್ಮೆ ಇವುಗಳ ಎಲ್ಲ ಲಯಗಳನ್ನು ಈ ಲೇಖನದಲ್ಲಿ ಓದುತ್ತಾ ಮನಸ್ಸು ಹೊಲದ ದಡದಲ್ಲಿ ನಿಂತಂತೆ ಭಾಸವಾಗುತ್ತದೆ.ಇದು ಕೇವಲ ಒಂದು ಅಂಕಣ ಅಲ್ಲ, ಇದು ನಾಡಿನ ನೆಲದ ಋಣ ತೀರಿಸುವ ಬರಹಬದ್ಧ ಯಜ್ಞ. ಇದು ರೈತನ ಬದುಕಿಗೆ ನೀಡಿದ ಮಾನವೀಯ ಶ್ಲಾಘನೆ. ಇದು ಬೆವರಿಗೆ ತರುವ ಪ್ರತಿಧ್ವನಿ. ನಮ್ಮ ಸಾಮಾಜಿಕ ಬದುಕು ಈಗ ಶಹರೀ ಚಟುವಟಿಕೆಗಳಲ್ಲಿ ಒತ್ತುವರಿಯಾಗಿರುವಾಗ ಇಂಥಹ ಲೇಖನಗಳು ಮಣ್ಣಿನ ಘಮತತೆಯ ಪ್ರಾಮುಖ್ಯತೆಯನ್ನು ಪುನರಾವರ್ತನೆಯ ಮೆಲುಕು ಮಾಡುತ್ತದೆ.ಇದೊಂದು ಹೊಸ ಚಿಂತನೆಗೆ ದಾರಿ ತೋರಿಸುವಂತೆ,
ನಮ್ಮ ಹೃದಯದ ಮೇಲ್ಮಟ್ಟದಲ್ಲಿ ಮೂಡಿದ ಪ್ರೀತಿ, ಗೌರವ, ಸಂತೋಷ ,ಇವೆಲ್ಲವನ್ನೂ ಈ ಲೇಖನಗಳ ಪ್ರತಿಯೊಂದು ಸಾಲು ಬಿಂಬಿಸುತ್ತವೆ.
ರೈತನ ಬೆವರು ಭೂಮಿಯಲ್ಲಿ ಬೀಜವಾಗುವುದು, ಪತ್ರಿಕೆಯ ಬರಹ ಸಮಾಜದಲ್ಲಿ ಬುದ್ಧಿಯಾಗಬೇಕು. ಇದು ಒಂದು ತಾಣದಲ್ಲಿ ಬೆಳೆ ಮೊಳೆಯುತ್ತೆ, ಮತ್ತೊಂದು ತಾಣದಲ್ಲಿ ಚಿಂತನೆ ರೈತ ಹೊಲವಿದೆ. ಪತ್ರಿಕೆಯ ಓಲವಾಗಲಿ.
ಇದೇ ಪ್ರಕಾರ ಇನ್ನೂ ನೂರಾರು ದಿನಗಳ ಸಾಂಸ್ಕೃತಿಕ ಶಕ್ತಿ ನೀಡುವ ಬರಹಗಳು ನಮ್ಮನ್ನು ತಲುಪಲಿ ಎಂಬ ಹಾರೈಕೆ ಮಾಡುತ್ತಾ , ಒಬ್ಬ ಓದುಗನಾಗಿ ನಾನು ಈ ಲೇಖನಮಾಲೆಗೆ ಕೈಜೋಡಿಸುತ್ತೇನೆ ಕೃತಜ್ಞತೆಯಿಂದ, ಶ್ರದ್ಧೆಯಿಂದ ಹೃದಯಾಂತರಾಳದಿಂದಲೂ ನಮೋಸ್ತುತೇ.