ಕನ್ನಡಪ್ರಭವಾರ್ತೆ ಬೆಂಗಳೂರು
ಈ ಅನಿಶ್ಚಿತತೆಯನ್ನು ಎದುರಿಸಲು ವೃತ್ತಿಪರರಿಗೆ ಸಹಾಯ ಮಾಡಲು, ಲಿಂಕ್ಡ್ ಇನ್ ತನ್ನ ''''ಜಾಬ್ಸ್ ಆನ್ ದಿ ರೈಸ್ 2026'''' ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಎಐ ಎಂಜಿನಿಯರ್ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಉದ್ಯೋಗವಾಗಿ ಹೊರಹೊಮ್ಮಿದೆ. ಇದು ತಂತ್ರಜ್ಞಾನ, ಉತ್ಪನ್ನ ಹೊಸತನ ಮತ್ತು ಜಾಗತಿಕ ಡಿಜಿಟಲ್ ಸೇವೆಗಳಲ್ಲಿ ನಗರದ ನಾಯಕತ್ವ ಮುಂದುವರಿದಿರುವುದನ್ನು ತೋರಿಸುತ್ತದೆ. ತಂತ್ರಜ್ಞಾನದ ಹೊರತಾಗಿ, ಈ ಪಟ್ಟಿಯಲ್ಲಿ ಈ ಕೆಳಗಿನ ಉದ್ಯೋಗಗಳು ಸ್ಥಾನ ಪಡೆದಿವೆ: ಪ್ರೊಫೆಸರ್ (ಸ್ಥಾನ #3), ವೈಸ್ ಪ್ರೆಸಿಡೆಂಟ್ ಆಫ್ ಗ್ಲೋಬಲ್ ಸೇಲ್ಸ್ (ಸ್ಥಾನ #4), ಡೈರೆಕ್ಟರ್ ಆಫ್ ಪ್ರಾಡಕ್ಟ್ ಎಂಜಿನಿಯರಿಂಗ್ (ಸ್ಥಾನ #5), ಜನರಲ್ ಮ್ಯಾನೇಜರ್, ಬಿಸಿನೆಸ್ ಡೆವಲಪ್‌ಮೆಂಟ್ (ಸ್ಥಾನ #6).
ಈ ಕುರಿತು ಮಾತನಾಡಿರುವ ಲಿಂಕ್ಡ್ ಇನ್ ನ ವೃತ್ತಿಪರ ಸಲಹೆಗಾರ್ತಿ ಮತ್ತು ಲಿಂಕ್ಡ್‌ಇನ್ ಇಂಡಿಯಾ ನ್ಯೂಸ್ ನ ಹಿರಿಯ ವ್ಯವಸ್ಥಾಪಕ ಸಂಪಾದಕರಾದ ನಿರಜಿತಾ ಬ್ಯಾನರ್ಜಿ ಅವರು, ‘ಬದಲಾವಣೆಗೆ ಹೊಂದಿಕೊಳ್ಳಬಲ್ಲ ವೃತ್ತಿಪರರಿಗೆ ಬೆಂಗಳೂರಿನ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಥಿರವಾದ ಬೇಡಿಕೆ ಕಂಡುಬರುತ್ತಿದೆ. ವಿವಿಧ ಕಾರ್ಯಕ್ಷೇತ್ರಗಳಲ್ಲಿ ಉದ್ಯೋಗದ ಸ್ವರೂಪಗಳು ಬದಲಾಗುತ್ತಿರುವುದರಿಂದ, ಉದ್ಯೋಗದಾತರು ಉದ್ಯೋಗಿಗಳಲ್ಲಿರುವ ಹೊಂದಾಣಿಕೆಯ ಗುಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ತಮ್ಮ ಮೂಲಭೂತ ಕೌಶಲ್ಯಗಳೊಂದಿಗೆ ಎಐ ಜ್ಞಾನವನ್ನು ಹೊಂದಿರುವ, ನಿರ್ದಿಷ್ಟ ಯೋಜನೆಗಳ ಮೂಲಕ ಉತ್ತಮ ಫಲಿತಾಂಶಗಳನ್ನು ನೀಡಬಲ್ಲ ಮತ್ತು ವಿವಿಧ ಜವಾಬ್ದಾರಿಗಳನ್ನು ಸ್ವೀಕರಿಸಲು ಸಿದ್ಧರಿರುವ ವೃತ್ತಿಪರರು ಉತ್ತಮ ಭವಿಷ್ಯವನ್ನು ಕಂಡುಕೊಳ್ಳುತ್ತಿದ್ದಾರೆ. ಏಕೆಂದರೆ ನೇಮಕಾತಿಯು ತಂತ್ರಜ್ಞಾನದ ಆಚೆಗೆ ವಿನ್ಯಾಸ ಮತ್ತು ಸಲಹಾ ವಿಭಾಗಗಳಿಗೂ ವಿಸ್ತರಿಸುತ್ತಿದೆ’ ಎಂದು ಹೇಳಿದರು.ಲಿಂಕ್ಡ್ ಇನ್ ಸಂಶೋಧನೆ ಪ್ರಕಾರ ಭಾರತದ 94% ವೃತ್ತಿಪರರು ತಮ್ಮ ಉದ್ಯೋಗದ ಹುಡುಕಾಟದಲ್ಲಿ ಆರಾಮದಾಯಕವಾಗಿ ಎಐ ಬಳಸಬಲ್ಲರು ಎಂದು ತಿಳಿಸಿದೆ. ಆದರೆ ನೇಮಕಾತಿಯಲ್ಲಿ ಎಐ ಬಳಸಿದಾಗ ತಾವು ಹೇಗೆ ವಿಭಿನ್ನವಾಗಿ ಗುರುತಿಸಿಕೊಳ್ಳಬೇಕು ಎಂಬುದು ಸುಮಾರು ಅರ್ಧದಷ್ಟು (48%) ಮಂದಿಗೆ ತಿಳಿದಿಲ್ಲ ಎಂದು ವರದಿ ಬಹಿರಂಗ ಪಡಿಸಿದೆ. ಅವರಲ್ಲಿ 54%ರಷ್ಟು ಮಂದಿ ನೇಮಕಾತಿದಾರರ ಗಮನ ಸೆಳೆಯುವಲ್ಲಿ ಎಐ ಒಂದು ತಡೆಯಾಗಬಹುದು ಎಂದು ಹೇಳುತ್ತಾರೆ. ಈ ಆತಂಕಗಳ ಹೊರತಾಗಿಯೂ, 65%ರಷ್ಟು ಜನರು ಎಐ ಅಭ್ಯರ್ಥಿ ಹಾಗೂ ನೇಮಕಾತಿದಾರರ ನಡುವಿನ ಸಂವಹನದ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನೇಮಕಾತಿದಾರರ ಜೊತೆಗಿನ ಸಂವಹನವನ್ನು ಸುಧಾರಿಸುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಟಾಪ್ 10 ಉದ್ಯೋಗಗಳು
1. ಎಐ ಎಂಜಿನಿಯರ್2. ಡೈರೆಕ್ಟರ್ ಆಫ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
3. ಪ್ರೊಫೆಸರ್4. ವೈಸ್ ಪ್ರೆಸಿಡೆಂಟ್ ಆಫ್ ಗ್ಲೋಬಲ್ ಸೇಲ್ಸ್
5. ಡೈರೆಕ್ಟರ್ ಆಫ್ ಪ್ರಾಡಕ್ಟ್ ಎಂಜಿನಿಯರಿಂಗ್6. ಜನರಲ್ ಮ್ಯಾನೇಜರ್ ಬಿಸಿನೆಸ್ ಡೆವಲಪ್‌ಮೆಂಟ್
7. ವೇರ್‌ಹೌಸ್ ಟೀಮ್ ಲೀಡ್8. ಇನ್ಫರ್ಮೇಷನ್ ಟೆಕ್ನಾಲಜಿ ಆಡಿಟರ್
9. ಲೀಗಲ್ ಅನಾಲಿಸ್ಟ್10. ಫೌಂಡರ್