ಖರ್ಚು ಕಡಿಮೆಯಾಗಿ ಹಣ ಉಳಿಸಲು ಇಲ್ಲಿದೆ ಎಕ್ಸ್‌ರ್ಟ್ಸ್ ಹೇಳಿದ 30 ದಿನಗಳ ನಿಯಮ

Published : Jan 20, 2026, 10:19 AM IST
money management tips

ಸಾರಾಂಶ

ಬದುಕಲ್ಲಿ ಅನವಶ್ಯಕ ಖರ್ಚುಗಳು ಜಾಸ್ತಿ ಇರುತ್ತವೆ. ಎಷ್ಟೋ ಸಲ ಯಾವುದೋ ಒಂದು ವಸ್ತು ಒಂದು ಖರೀದಿ ಮಾಡಿದ ನಂತರ ಅದು ಅನವಶ್ಯ ಅನ್ನಿಸುತ್ತದೆ. ಹೀಗೆ ಖರ್ಚು ಕಡಿಮೆ ಮಾಡಲು ಪರಿಣತರು ಒಂದು ನಿಯಮ ತಂದಿದ್ದಾರೆ. ಅದೇ 30 ದಿನಗಳ ನಿಯಮ.

ಬದುಕಲ್ಲಿ ಅನವಶ್ಯಕ ಖರ್ಚುಗಳು ಜಾಸ್ತಿ ಇರುತ್ತವೆ. ಎಷ್ಟೋ ಸಲ ಯಾವುದೋ ಒಂದು ವಸ್ತು ಒಂದು ಖರೀದಿ ಮಾಡಿದ ನಂತರ ಅದು ಅನವಶ್ಯ ಅನ್ನಿಸುತ್ತದೆ. ಹೀಗೆ ಖರ್ಚು ಕಡಿಮೆ ಮಾಡಲು ಪರಿಣತರು ಒಂದು ನಿಯಮ ತಂದಿದ್ದಾರೆ. ಅದೇ 30 ದಿನಗಳ ನಿಯಮ.

30 ದಿನಗಳ ನಿಯಮ ಎಂದರೇನು?

ಅಗತ್ಯವಿಲ್ಲದ ವಸ್ತುವೊಂದನ್ನು ಖರೀದಿಸಬೇಕು ಅಂತಾದಾಗ ಅದನ್ನು ತಕ್ಷಣ ಖರೀದಿಸಬೇಡಿ. ಬದಲಾಗಿ ಆ ವಸ್ತುವಿನ ಹೆಸರು, ಬೆಲೆ ಮತ್ತು ನೀವು ನೋಡಿದ ದಿನಾಂಕವನ್ನು ಬರೆದಿಟ್ಟುಕೊಳ್ಳಿ. ನಂತರ 30 ದಿನಗಳ ಕಾಲ ಕಾಯಿರಿ. ಒಂದು ತಿಂಗಳ ನಂತರವೂ ಅದೇ ವಸ್ತು ಬೇಕೆಂಬ ಆಸೆ ಇದ್ದರೆ ಮತ್ತು ಅದು ನಿಮ್ಮ ಬಜೆಟ್‌ಗೆ ಹೊಂದಿಕೆಯಾಗುವುದಾದರೆ ಖರೀದಿ ಮಾಡಿ.

ಈ ನಿಯಮ ಪರಿಣಾಮಕಾರಿ ಹೇಗೆ?

ಖರೀದಿಯ ಆಸೆ ಮತ್ತು ಖರ್ಚಿನ ನಡುವೆ ಅಂತರ ಹೆಚ್ಚಾದಂತೆ ಖರೀದಿಯ ತೀವ್ರತೆ ಇಳಿಯುತ್ತ ಬರುತ್ತದೆ. ಈ ಅವಧಿಯಲ್ಲಿ ಬುದ್ಧಿಯು ಭಾವನಾತ್ಮಕ ನಿರ್ಧಾರಗಳನ್ನು ವಿಶ್ಲೇಷಿಸಿ ವಾಸ್ತವವನ್ನು ಮನದಟ್ಟು ಮಾಡಿಸುತ್ತದೆ. ಇದು ಜೇಬಿನ ತೂಕವನ್ನು ಕಾಪಿಡುವಲ್ಲಿ ಗಮನಾರ್ಹ ಕೆಲಸ ಮಾಡುತ್ತದೆ.

30 ದಿನಗಳ ನಿಯಮವನ್ನು ಹೇಗೆ ಅನುಸರಿಸಬೇಕು?

ಯೋಜನೆಯಿಲ್ಲದೆ ಏನಾದರೂ ಖರೀದಿಸುವ ಸಂದರ್ಭದಲ್ಲಿ ಈ ಸೂತ್ರದ ಉಪಯೋಗ ಪಡೆಯಬಹುದು. ಆ ಮೂಲಕ ಅನವಶ್ಯಕ ಹಣದ ಪೋಲನ್ನು ತಡೆಯಬಹುದು. ನೀವು ಖರೀದಿಸಬೇಕು ಅಂದುಕೊಂಡ ವಸ್ತುವಿನ ವಿವರಗಳನ್ನು (ಹೆಸರು, ಬೆಲೆ, ಅಂಗಡಿ ಅಥವಾ ವೆಬ್‌ಸೈಟ್ ಲಿಂಕ್) ಬರೆದಿಟ್ಟುಕೊಳ್ಳಿ. ನಂತರ ಅದನ್ನು ಸೈಡಿಗಿಡಿ.

30 ದಿನಗಳ ಬಳಿಕ ಆ ನೋಟ್‌ ಅನ್ನು ಮತ್ತೆ ತೆಗೆಯಿರಿ. ಆ ಉತ್ಪನ್ನವನ್ನು ನೋಡಿ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ:

1. ಇದು ನನ್ನ ಬಜೆಟ್‌ಗೆ ಹೊಂದಿಕೆಯಾಗುತ್ತದಾ?

ಉತ್ಪನ್ನದ ಬೆಲೆಯನ್ನು ಮಾತ್ರ ನೋಡಬೇಡಿ, ಈ ವಸ್ತುವಿಗೆ ಮಾಡುವ ಖರ್ಚು ತಿಂಗಳ ಬಜೆಟ್ ಅಥವಾ ಸೇವಿಂಗ್ಸ್‌ಗೆ ಹೇಗೆ ಹಾನಿ ಮಾಡಬಹುದು ಅಂತ ಯೋಚಿಸಿ.

2. ಇದೇ ವಸ್ತು ಕಡಿಮೆ ದರದಲ್ಲಿ ಸಿಗುತ್ತದೆಯೇ?

ಈ ವಸ್ತುವಿನ ಖರೀದಿ ಅವಶ್ಯಕ ಅನಿಸಿದರೆ ಇದನ್ನು ಇನ್ನಷ್ಟು ಕಡಿಮೆ ಬೆಲೆಗೆ ಖರೀದಿಸಬಹುದಾ ಅಂತ ಚೆಕ್‌ ಮಾಡಿ. ಬೇರೆ ಅಂಗಡಿಗಳಲ್ಲಿ ಅಥವಾ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅದೇ ವಸ್ತು ಕಡಿಮೆ ಬೆಲೆಗೆ ಸಿಕ್ಕರೆ ಖರ್ಚು ಕೊಂಚ ತಗ್ಗಬಹುದು.

3. ಮುಂದೆ ಯಾವುದೇ ಆಫರ್ ಅಥವಾ ಸೇಲ್ ಇದೆಯೇ?

ಹಬ್ಬಗಳು, ವಾರಾಂತ್ಯ ಅಥವಾ ವಿಶೇಷ ಸೇಲ್‌ಗಳಲ್ಲಿ ಉತ್ತಮ ರಿಯಾಯಿತಿಗಳು ಲಭ್ಯವಾಗುತ್ತವೆ. ಇನ್ನಷ್ಟು ದಿನ ಕಾಯುವುದರಿಂದ ಹಣ ಸ್ವಲ್ಪವಾದರೂ ಉಳಿಸಬಹುದು.

4. ಕಡಿಮೆ ದರದ ಪರ್ಯಾಯ ಇದೆಯೇ?

ಬ್ರ್ಯಾಂಡ್‌ ಕ್ರೇಜ್‌ ಹೊರತಾಗಿ ಬೇರೆ ಆಯ್ಕೆಗಳನ್ನು ಪರಿಶೀಲಿಸಿ. ಹಲವಾರು ಬಾರಿ ಕಡಿಮೆ ಬೆಲೆಯ ವಸ್ತುಗಳು ಬ್ರಾಂಡೆಡ್‌ನಷ್ಟೇ ಗುಣಮಟ್ಟ ಹೊಂದಿರುತ್ತವೆ.

5. ಈ ವಸ್ತುವಿಗಾಗಿ ನಾನು ಎಷ್ಟು ಸಮಯ ಕೆಲಸ ಮಾಡಬೇಕು?

ವಸ್ತುವಿನ ಬೆಲೆ 1,500 ರು. ಅಂತಾದರೆ ಬೆಲೆಯ ವಸ್ತು ಖರೀದಿಗೆ ಹೆಚ್ಚುವರಿಯಾಗಿ ನೀವು ಎಷ್ಟು ಗಂಟೆ ದುಡಿಯಬೇಕಾಗುತ್ತದೆ ಅಂತ ಲೆಕ್ಕ ಹಾಕಿ. ನೀವು ಅಷ್ಟು ಹೊತ್ತು ದುಡಿದಷ್ಟು ಮೌಲ್ಯ ಆ ವಸ್ತುವಿಗೆ ಇದೆಯೇ, ಚೆಕ್‌ ಮಾಡಿ.

ಈ ಲೆಕ್ಕಾಚಾರದಿಂದ 30 ದಿನಗಳ ಬಳಿಕ ಖರೀದಿ ಮಾಡಿದರೂ ಅದಕ್ಕೆ ಮೌಲ್ಯ ಇರುತ್ತದೆ. ಇಲ್ಲವಾದರೆ ಹಣ ಉಳಿಯುತ್ತದೆ.

PREV
Read more Articles on

Recommended Stories

ಎಲ್ಲಾ ಅಸಭ್ಯ ಹೇಳಿಕೆ ಕ್ರಿಮಿನಲ್ ಅಪರಾಧವಲ್ಲ: ಚಂದ್ರಚೂಡ್‌
ಸೃಜನಶೀಲ ಲೇಖಕರ ಅನುವಾದ ಓದುಗರಿಗೆ ಹತ್ತಿರ : ಶಾನಭಾಗ