ಕನ್ನಡಪ್ರಭ ವಾರ್ತೆ:
ಈ ನೂತನ ಕೊಡುಗೆಯಿಂದಾಗಿ ಏರ್‌ಟೆಲ್ ಪೋಸ್ಟ್‌ಪೇಯ್ಡ್ ಬಳಕೆದಾರರು ತಮ್ಮ ಐಫೋನ್ ಹಾಗೂ ಇತರ ಆ್ಯಪಲ್ ಡಿವೈಸ್‌ಗಳಲ್ಲಿ ಫೋಟೋ, ಪ್ರಮುಖ ಫೈಲ್‌ಗಳು, ಪಾಸ್‌ವರ್ಡ್‌ಗಳು ಮತ್ತು ಸಂಪರ್ಕ ಸಂಖ್ಯೆಗಳನ್ನು ಸುರಕ್ಷಿತವಾಗಿ ಕ್ಲೌಡ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ಸಾಧನಗಳು ಕಳೆದುಹೋದರೂ ಅಥವಾ ಹೊಸ ಡಿವೈಸ್‌ಗೆ ಬದಲಾದಾಗಲೂ ಸುಲಭವಾಗಿ ಡೇಟಾ ಮರಳಿ ಪಡೆಯಬಹುದಾಗಿದೆ. ಇದರೊಂದಿಗೆ, ಆ್ಯಪಲ್ ಟಿವಿಯ ಜಾಗತಿಕ ಪ್ರಶಸ್ತಿ ವಿಜೇತ ಒರಿಜಿನಲ್ ಸರಣಿಗಳು, ಚಲನಚಿತ್ರಗಳು ಹಾಗೂ ಕಿರಿಕಿರಿಯ ಜಾಹೀರಾತುಗಳಿಲ್ಲದೆ ಆ್ಯಪಲ್ ಆರ್ಕೇಡ್‌ನ ನೂರಾರು ಅತ್ಯಾಕರ್ಷಕ ಗೇಮ್‌ಗಳನ್ನು ಅನಿಯಮಿತವಾಗಿ ಆನಂದಿಸಬಹುದಾಗಿದೆ.
ಮೂವರು ಸದಸ್ಯರ ಕುಟುಂಬಕ್ಕೆ ಸೂಕ್ತವಾದ ₹999ರ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಾನ್‌ನಲ್ಲಿ ಈಗಾಗಲೇ ಫಾಸ್ಟ್‌ಲೇನ್ ತಂತ್ರಜ್ಞಾನದ ಅನಿಯಮಿತ ಡೇಟಾ, ಸ್ಪ್ಯಾಮ್ ಕರೆಗಳಿಂದ ರಕ್ಷಣೆ ಮತ್ತು ಒಟಿಟಿ ಮನರಂಜನೆ ಲಭ್ಯವಿತ್ತು. ಇದೀಗ ಆ್ಯಪಲ್‌ನ ಮೂರು ಪ್ರಮುಖ ಪ್ರೀಮಿಯಂ ಸೇವೆಗಳು ಸೇರ್ಪಡೆಯಾಗುವುದರೊಂದಿಗೆ ಇಡೀ ಕುಟುಂಬಕ್ಕೆ ಸಂಪರ್ಕ, ಭದ್ರತೆ, ಕ್ಲೌಡ್ ಸ್ಟೋರೇಜ್, ಗೇಮಿಂಗ್ ಮತ್ತು ಮನರಂಜನೆ ಒಂದೇ ಬಿಲ್‌ನಲ್ಲಿ ದೊರೆಯಲಿದೆ.ಗ್ರಾಹಕರು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಅಥವಾ ಸಮೀಪದ ಏರ್‌ಟೆಲ್ ಮಳಿಗೆಗಳಿಗೆ ಭೇಟಿ ನೀಡಿ ತಮ್ಮ ಹಾಲಿ ಪ್ಲಾನ್‌ಗಳನ್ನು ಈ ಹೊಸ ಯೋಜನೆಗಳಿಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.
ಭಾರತ ಹಾಗೂ ಆಫ್ರಿಕಾದ 15ಕ್ಕೂ ಹೆಚ್ಚು ದೇಶಗಳಲ್ಲಿ 65 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿರುವ ಭಾರ್ತಿ ಏರ್‌ಟೆಲ್, ಜಾಗತಿಕ ಮಟ್ಟದಲ್ಲಿ ಎರಡನೇ ಅತಿದೊಡ್ಡ ಮೊಬೈಲ್ ನೆಟ್‌ವರ್ಕ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.