ಆರ್ಥರೈಟಿಸ್‌ ನೋವು ನಿರ್ವಹಣೆಗೆ ಪೇನ್‌ಕಿಲ್ಲರ್ ಮೀರಿದ ಉಪಾಯ ಇದೆಯೇ?

Published : Oct 20, 2026, 12:53 PM IST
arthritis pain

ಸಾರಾಂಶ

ಆಧುನಿಕ ಆರ್ಥರೈಟಿಸ್‌ ನಿರ್ವಹಣೆಯಲ್ಲಿ ತೆಗೆದುಕೊಳ್ಲುವ ಔಷದೋಪಚಾರಗಳು ನಮ್ಮ ದೀರ್ಘ ಕಾಲದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಇದರ ಜೊತೆಗೆ ನೈಜವಾಗಿ ಆರ್ಥರೈಟಿಸ್‌ನಿಂದ ಗುಣಮುಖವಾಗಲು ಅಗತ್ಯವಾಗಿರುವ ಕರುಳಿನ ರಕ್ಷಣಾ ಗೋಡೆಯನ್ನು ಹಾನಿಗೊಳಿಸುವುದಲ್ಲದೇ, ಕೀಲುಗಳಲ್ಲಿನ ಫ್ಲುಯಿಡ್‌ ಒಣಗುವಂತೆ ಮಾಡುತ್ತದೆ.

ಆಧುನಿಕ ಆರ್ಥರೈಟಿಸ್‌ ನಿರ್ವಹಣೆಯಲ್ಲಿ ತೆಗೆದುಕೊಳ್ಲುವ ಔಷದೋಪಚಾರಗಳು ನಮ್ಮ ದೀರ್ಘ ಕಾಲದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಇದರ ಜೊತೆಗೆ ನೈಜವಾಗಿ ಆರ್ಥರೈಟಿಸ್‌ನಿಂದ ಗುಣಮುಖವಾಗಲು ಅಗತ್ಯವಾಗಿರುವ ಕರುಳಿನ ರಕ್ಷಣಾ ಗೋಡೆಯನ್ನು ಹಾನಿಗೊಳಿಸುವುದಲ್ಲದೇ, ಕೀಲುಗಳಲ್ಲಿನ ಫ್ಲುಯಿಡ್‌ ಒಣಗುವಂತೆ ಮಾಡುತ್ತದೆ.

ಹೀಗಾಗಿ ಆರ್ಥರೈಟಿಸ್‌ ಚಿಕಿತ್ಸೆಯಲ್ಲಿ ನೋವು ನಿರ್ವಹಣೆ ಮಾತ್ರವಲ್ಲದೇ ಈ ಸಮಸ್ಯೆಗೆ ವೈಜ್ಞಾನಿಕವಾಗಿ , ಹಾಗೂ , ದೇಹದ ಸಂಪೂರ್ಣ ಆರೋಗ್ಯ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆ ನೀಡಬೇಕಾಗುತ್ತದೆ. ಆಯುರ್ವೇದಲ್ಲಿ ಈ ಮಾರ್ಗವಿದೆ, ಆದರೆ ಚಿಕಿತ್ಸೆಯನ್ನು ಆರಂಭಿಕ ಹಂತದಲ್ಲೇ ಪ್ರಾರಂಭಿಸುವುದು ಅಗತ್ಯವಾಗಿರುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಜಗತ್ತಿನಾದ್ಯಂತ ಆರ್ಥರೈಟಿಸ್‌ ಸಮಸ್ಯೆ ಹೆಚ್ಚಾಗುತ್ತಿದ್ದು ಮಸ್ಕ್ಯುಲೊಸ್ಕೆಲಿಟನ್‌ ಸಮಸ್ಯೆ ಸರಿಸುಮಾರು ವಿಶ್ವದಲ್ಲಿ 1.71 ಬಿಲಿಯನ್‌ ಜನರಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ ಅಂಗವೈಕಲ್ಯತೆಗೆ ರುಮಟಾಯ್ಡ್‌ ಆರ್ಥರೈಟಿಸ್‌ ಮತ್ತು ಆಸ್ಟಿಯೋ ಆರ್ಥರೈಟಿಸ್‌ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗಿದೆ. ಆಯುರ್ವೇದವು ಆರ್ಥರೈಟಿಸ್‌ ಸಮಸ್ಯೆಯನ್ನು ಅಂಗಾಂಶ (ಮೂಳೆ, ಮೃದ್ವಸ್ಥಿ, ಸ್ನಾಯು) ಕ್ಷೀಣಿಸುವಿಕೆಯಿಂದ ಜೊತೆಗೆ ಚಯಾಪಚಯ ದೋಷ ಮತ್ತು ನರವೈಜ್ಞಾನಿಕ ಅಸಮತೋಲನದ ವಿಚಾರವನ್ನೂ ಪರಿಗಣಿಸುತ್ತದೆ. ಕೀಲುಗಳು ಸ್ವಯಂಪ್ರೇರಿತವಾಗಿ ವಿಫಲವಾಗುವುದಿಲ್ಲ, ಅವು ನಮ್ಮ ಆಂತರಿಕ ಪರಿಸರದಿಂದ ಹಾಳುಮಾಡಲ್ಪಡುತ್ತವೆ ಎಂದು ಅದು ಗುರುತಿಸುತ್ತದೆ.

ನಿಮ್ಮ ಮನೆಯೇ ಚಿಕಿತ್ಸಾಲಯ– ಹೇಗೆ?

ನೋವಿನ ಮಾತ್ರೆಗಳಿಲ್ಲದೇ ಆರ್ಥರೈಟಿಸ್‌ ಸಮಸ್ಯೆಯನ್ನು ಯಶಸ್ವಿಯಾಗಿ ನಿರ್ವಹಿಸಲು , ಮೊದಲು ನಿಮ್ಮ ಕರುಳಿನ ಆರೋಗ್ಯದ ಕಡೆ ಗಮನ ಹರಿಸಬೇಕು. ಜೀರ್ಣಾಗ್ನಿ ಹೆಚ್ಚಿಸಿ, ಆಮಾವನ್ನು ಜೀರ್ಣಗೊಳಿಸಬೇಕು, ವಾತದ ಅನಿಯಮಿತ ಚಲನೆಯನ್ನು ನಿಯಂತ್ರಿಸಬೇಕು. ನಿಮ್ಮ ಮನೆಯೇ ಚಿಕಿತ್ಸಾಲಯ ನೆನಪಿರಲಿ.

ಶಲ್ಲಕಿ ಅಥವಾ ಫ್ರಾಂಕಿನಸೆನ್ಸ್‌ ರೆಸಿನ್‌ (Frankincense resin) : ಸಿಂಥೇಟಿಕ್‌ ನೋವು ನಿವಾರಕ ಮಾತ್ರೆಗಳ ಬದಲು ಆಯುರ್ವೇದ ಶಲ್ಲಕಿ ಬಳಕೆ ಸಲಹೆಯನ್ನು ನೀಡುತ್ತದೆ. ನಿತ್ಯ ಸಮ ಪ್ರಮಾಣದಲ್ಲಿ ಶಲ್ಲಕಿ ರಸವನ್ನು ಸೇವಿಸಿದ್ದಲ್ಲಿ ಕೀಲುಗಳ ಮೃದುತ್ವ ಮತ್ತು ಕಾರ್ಟಿಲೇಜ್‌ ಸಾಂದ್ರತೆಯನ್ನು ನಿರ್ವಹಿಸಲು ನೆರವಾಗುತ್ತದೆ.

• ಅರಿಶಿಣ, ಕಾಳು ಮೆಣಸು ಮತ್ತು ತುಪ್ಪ :

ಸಂಧಿಗತ ವಾತ , ಉರಿಯೂತದ ಸಂದರ್ಭದಲ್ಲಿ ಕೀಲುಗಳಲ್ಲಿ ಲ್ಯುಬ್ರಿಕೇಶನ್‌ ಮಟ್ಟ ಹೆಚ್ಚಿಸಲು ಪ್ರಯತ್ನಿಸಬೇಕಾಗುತ್ತದೆ. ಅರ್ಧ ಚಮಚ ಅರಿಶಿಣ ಪುಡಿ, ಕಾಳು ಮೆಣಸಿನ ಪುಡಿ ಮತ್ತು 2 ಚಮಚ ಎ2 ಹಸುವಿನ ತುಪ್ಪ ಮಿಶ್ರಣ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಹಸುವಿನ ತುಪ್ಪದಲ್ಲಿನ ಆರೋಗ್ಯಕರ ಕೊಬ್ಬಿನಾಂಶ ಒಣಗುತ್ತಿರುವ ಸ್ಲೇಶಕ ಕಫವನ್ನು ಲ್ಯುಬ್ರಿಕೇಟ್‌ ಮಾಡುತ್ತದೆ. ಕಪ್ಪು ಮೆಣಸಿನಲ್ಲಿರುವ ಪೈಪರಿನ್ ಕರ್ಕ್ಯುಮಿನ್‌ನ ಹೀರಿಕೊಳ್ಳುವಿಕೆಯನ್ನು 2,000% ರಷ್ಟು ಹೆಚ್ಚಿಸುತ್ತದೆ ಮತ್ತು ಅದೇ ಸಮಯದಲ್ಲಿ TNF-ಆಲ್ಫಾದಂತಹ ಉರಿಯೂತವನ್ನು ಉಂಟುಮಾಡುವ ಸೈಟೊಕೈನ್‌ಗಳನ್ನು ನೇರವಾಗಿ ತಗ್ಗಿಸುತ್ತದೆ.

• ಗುಗ್ಗುಳು ಫಾರ್ಮುಲ: ಯೋಗರಾಜ ಗುಗ್ಗುಳು ಅಥವಾ ಸಿಂಹನಾದ ಗುಗ್ಗುಳು ದೇಹವನ್ನು ಸ್ವಚ್ಛ ಮಾಡುವ ತಜ್ಞರಂತೆ ವರ್ತಿಸುತ್ತವೆ. ವಾತವನ್ನು ಶಾಂತಗೊಳಿಸುವುದರ ಜೊತೆಗೆ, ದೇಹದ ಕೀಲುಗಳಲ್ಲಿ ಮತ್ತು ರಕ್ತನಾಳಗಳಲ್ಲಿ ಜಮೆಯಾಗಿರುವ ಆಮವನ್ನು (ಟಾಕ್ಸಿನ್ಸ್) ಕೆರೆದು ಹೊರಹಾಕುವ (ಲೇಖನ) ಜೈವಿಕ ಸ್ಕ್ರೇಪರ್ ಆಗಿ ಕೆಲಸ ಮಾಡುತ್ತವೆ.

• ಮಹಾನಾರಾಯಣ ತೈಲ : ಸ್ನಾನಕ್ಕೂ ಮೊದಲು ಕೀಲುಗಳಿಗೆ ಬೆಚ್ಚಗಿನ ಮಹಾನಾರಾಯಣ ತೈಲದಿಂದ ಮಸಾಜ್‌ ಮಾಡಿ. ಹಾಗೇ ಎಳ್ಳೆಣ್ಣೆ ಮಸಾಜ್‌ ಕುಡ ಸಹಕಾರಿ. ಚರ್ಮದ ಆಳಕ್ಕೆ ಇಳಿದು ಕೀಲುಗಳಿಗೆ ಆರಾಮ ನೀಡುವ ವಿಶೇಷ ಶಕ್ತಿ ಎಳ್ಳೆಣ್ಣೆಗೆ ಇದೆ. ಮಹಾನಾರಾಯಣ ತೈಲಕ್ಕೆ ಒಂದೆರಡು ಹನಿ ಸಂಧಿಲಿನ್‌ ಡ್ರಾಪ್‌ ಬಳಕೆ ಕೀಲುಗಳಿಗೆ ಮತ್ತಷ್ಟು ಆರಾಮ ನೀಡುತ್ತದೆ.

ಆರ್ಥರೈಟಿಸ್‌ ಮರಣದ ವರೆಗೆ ಅನುಭವಿಸಬೇಕಾದ ಆರೋಗ್ಯ ಸಮಸ್ಯೆಯಲ್ಲ. ಹಾಗೇ ನೋವು ನಿವಾರಕ ಸೇವಿಸಿ ಸಮಾಧಾನಪಟ್ಟುಕೊಳ್ಳುವ ಸಮಸ್ಯೆಯೂ ಅಲ್ಲ. ಇದೊಂದು ನಿಮ್ಮ ದೇಹ ನಿಮಗೆ ನೀಡುತ್ತಿರುವ ತುರ್ತು ಸಂದೇಶ. ನಿಮ್ಮ ದೇಹದಲ್ಲಿನ ಜೀರ್ಣ ಕ್ರೀಯೆ ವ್ಯವಸ್ಥೆ ಹಾಗೂ ಲ್ಯುಬ್ರಿಕೇಶನ್‌ನ ರಚನೆ ಅಸಮತೋಲನಗೊಂಡಿದೆ ಎಂಬ ಎಚ್ಚರಿಕೆಯ ಘಂಟೆ. ಹೀಗಾಗಿ ತಕ್ಷಣದ ಆರಾಮಕ್ಕೂ ಮೀರಿದ ಚಿಕಿತ್ಸೆಗೆ ಒಳಗಾಗಬೇಕು. ನಿಮ್ಮ ದೇಹವು ವಾತದ ಮರುಭೂಮಿಯಂತಹ ಒಣಗುವಿಕೆಯೊಂದಿಗೆ ಹೋರಾಡುತ್ತಿದೆಯೇ ಅಥವಾ 'ಆಮ'ದ ವಿಷಕಾರಿ ಪ್ರವಾಹಕ್ಕೆ ಸಿಲುಕಿದೆಯೇ ಎಂಬುದನ್ನು ಪತ್ತೆಹಚ್ಚಿ, ಕರುಳಿನ ಆರೋಗ್ಯ ವೃದ್ಧಿಸುವ ಆಯುರ್ವೇದದ ಉಪಾಯಗಳನ್ನು ಅಳವಡಿಸಿಕೊಂಡರೆ ನಿಮ್ಮ ಮೊದಲಿನ ಚಲನೆಯನ್ನು ಮರು ಪಡೆಯಬಹುದು.

- ಡಾ. ಮುರಳೀಧರ್‍ ಆರ್‍ ಬಲ್ಲಾಳ್‌ ಜನರಲ್‌ ಮ್ಯಾನೇಜರ್‍ ಎಸ್‌ಡಿಎಮ್‌ ಆಯುರ್ವೇದ ಫಾರ್ಮಸಿ, ಉಡುಪಿ

PREV
Read more Articles on

Recommended Stories

ಹಬ್ಬದ ಶಾಪಿಂಗ್‌ ಇಎಂಐ ಕಡೆ ಇರಲಿ ಗಮನ, ಜೇಬು ಜೋಪಾನ
ಸತ್ಪ್ರಜೆಗಳಿಂದ ಸಮೃದ್ಧ ದೇಶ ನಿರ್ಮಾಣ