ಕನ್ನಡಪ್ರಭವಾರ್ತೆ
ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುವ ಮೆಟ್ರೋ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಈ ಡಿಜಿಟಲ್ ಶಾಖೆಯು ವಾಹನ ಮಾಲೀಕರಿಗೆ ತಮ್ಮ ಥರ್ಡ್ ಪಾರ್ಟಿ ಮೋಟಾರ್ ವಿಮೆಯ ಮಾನ್ಯತೆಯನ್ನು ಪರಿಶೀಲಿಸಲು ಸುಲಭ ಮಾರ್ಗ ಒದಗಿಸುತ್ತದೆ. ಕೇವಲ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಮ್ಮ ವಾಹನಕ್ಕೆ ಸಕ್ರಿಯ ವಿಮೆ ಇದೆಯೇ ಎಂಬುದನ್ನು ತಿಳಿದುಕೊಳ್ಳಬಹುದು ಮತ್ತು ಅಗತ್ಯವಿದ್ದರೆ ಕೆಲವೇ ನಿಮಿಷಗಳಲ್ಲಿ ಡಿಜಿಟಲ್ ರೂಪದಲ್ಲಿ ಹೊಸ ಪಾಲಿಸಿ ಖರೀದಿಸಬಹುದು. 1988ರ ಮೋಟಾರ್ ವಾಹನ ಕಾಯ್ದೆಯಡಿ ಥರ್ಡ್ ಪಾರ್ಟಿ ವಿಮೆ ಕಡ್ಡಾಯವಾಗಿದ್ದರೂ, ಅನೇಕ ವಾಹನಗಳು ವಿಮೆ ಇಲ್ಲದೆ ಸಂಚರಿಸುತ್ತಿದ್ದು, ಅಪಘಾತದ ವೇಳೆ ಸಂತ್ರಸ್ತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಕೊರತೆಯನ್ನು ನೀಗಿಸುವುದು ಅಭಿಯಾನದ ಪ್ರಮುಖ ಗುರಿಯಾಗಿದೆ.
ಇದೇ ವೇಳೆ ರಸ್ತೆ ಅಪಘಾತ ಸಂತ್ರಸ್ತರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎರಡು ಮಹತ್ವದ ಯೋಜನೆಗಳ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ. ಅಪಘಾತಕ್ಕೀಡಾದವರನ್ನು ನಿರ್ಣಾಯಕ ಗೋಲ್ಡನ್ ಅವರ್ ಒಳಗೆ ಆಸ್ಪತ್ರೆಗೆ ತಲುಪಿಸಿ ಜೀವ ಉಳಿಸುವ ನಾಗರಿಕರನ್ನು ಗುರುತಿಸಿ ಪುರಸ್ಕರಿಸುವ ರಹ್-ವೀರ್ ಯೋಜನೆ ಹಾಗೂ ಅರ್ಹ ಅಪಘಾತ ಸಂತ್ರಸ್ತರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ ಪಿಎಂ-ರಾಹತ್ ಯೋಜನೆಯ ಮಾಹಿತಿಯನ್ನು ಪ್ರಯಾಣಿಕರಿಗೆ ತಲುಪಿಸಲಾಗುತ್ತಿದೆ.ಈ ಕುರಿತು ಮಾತನಾಡಿದ ಬಜಾಜ್ ಜನರಲ್ ಇನ್ಶೂರೆನ್ಸ್ ಎಂಡಿ ಹಾಗೂ ಸಿಇಒ ಡಾ. ತಪನ್ ಸಿಂಘೇಲ್, ‘ಪ್ರತಿಯೊಂದು ರಸ್ತೆ ಅಪಘಾತದ ಹಿಂದೆಯೂ ಒಂದು ಕುಟುಂಬದ ನೋವಿನ ಕಥೆಯಿರುತ್ತದೆ. ಅಂತಹ ಸಂಕಷ್ಟದ ಸಮಯದಲ್ಲಿ ಯಾವುದೇ ಕುಟುಂಬ ಏಕಾಂಗಿಯಾಗದಂತೆ ಭರವಸೆ ನೀಡುವುದೇ ವಿಮೆಯ ಮೂಲ ಉದ್ದೇಶ. ಬಜಾಜ್ ಸಮೂಹ 100 ವರ್ಷ ಹಾಗೂ ಬಜಾಜ್ ಜನರಲ್ ಇನ್ಶೂರೆನ್ಸ್ 25 ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ, ತವರು ನೆಲ ಪುಣೆಗೆ ಅರ್ಥಪೂರ್ಣ ಕೊಡುಗೆ ನೀಡಲು ಈ ಉಪಕ್ರಮ ಕೈಗೊಂಡಿದ್ದೇವೆ’ ಎಂದರು.