ಚೆನ್ನಬಸವಣ್ಣನ ಅರಿವು ಅಗಾಧವಾದುದು

KannadaprabhaNewsNetwork | Published : Nov 23, 2023 1:45 AM

ಸಾರಾಂಶ

ಅನುಭವ ಮಂಟಪದಲ್ಲಿ ಶೂನ್ಯ ಪೀಠಾಧ್ಯಕ್ಷರಾಗಿದ್ದ ಅಲ್ಲಮಪ್ರಭುವಿನ ನಂತರ ಎರಡನೇ ಅಧ್ಯಕ್ಷರಾಗಿ ಕಿರಿಯ ವಯಸ್ಸಿನಲ್ಲಿ ಅಗಾಧ ಅನುಭವಿಯಾಗಿದ್ದವರು ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ಅಗಾಧ ಅರಿವು ಗಳಿಸಿದ್ದರು ಎಂದು ತುಮಕೂರು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜಶೇಖರಯ್ಯ ಈಚನೂರು ಅಭಿಪ್ರಾಯಪಟ್ಟರು.ತುಮಕೂರು ಜಿಲ್ಲಾ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಗ್ಲೋಬಲ್ ಪೀಸ್ ಸಭಾಂಗಣದಲ್ಲಿ ನಿರಂತರವಾಗಿ ನಡೆಯುತ್ತಿರುವ ಶಿವಕುಮಾರ ಮಹಾಸ್ವಾಮೀಜಿಯವರ 42ನೇ ಮಾಸಿಕ ಶರಣ ಚಿಂತನ ಕಾರ್ಯಕ್ರಮದಲ್ಲಿ ಚೆನ್ನಬಸವಣ್ಣನವರ ಜಯಂತಿ ಆಚರಣೆ ಪ್ರಯುಕ್ತ ಮಾತನಾಡಿದರು.

ರಾಜಶೇಖರಯ್ಯ ಅಭಿಮತ । ಮಾಸಿಕ ಶರಣ ಚಿಂತನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತುಮಕೂರು

ಅನುಭವ ಮಂಟಪದಲ್ಲಿ ಶೂನ್ಯ ಪೀಠಾಧ್ಯಕ್ಷರಾಗಿದ್ದ ಅಲ್ಲಮಪ್ರಭುವಿನ ನಂತರ ಎರಡನೇ ಅಧ್ಯಕ್ಷರಾಗಿ ಕಿರಿಯ ವಯಸ್ಸಿನಲ್ಲಿ ಅಗಾಧ ಅನುಭವಿಯಾಗಿದ್ದವರು ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ಅಗಾಧ ಅರಿವು ಗಳಿಸಿದ್ದರು ಎಂದು ತುಮಕೂರು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜಶೇಖರಯ್ಯ ಈಚನೂರು ಅಭಿಪ್ರಾಯಪಟ್ಟರು.

ತುಮಕೂರು ಜಿಲ್ಲಾ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಗ್ಲೋಬಲ್ ಪೀಸ್ ಸಭಾಂಗಣದಲ್ಲಿ ನಿರಂತರವಾಗಿ ನಡೆಯುತ್ತಿರುವ ಶಿವಕುಮಾರ ಮಹಾಸ್ವಾಮೀಜಿಯವರ 42ನೇ ಮಾಸಿಕ ಶರಣ ಚಿಂತನ ಕಾರ್ಯಕ್ರಮದಲ್ಲಿ ಚೆನ್ನಬಸವಣ್ಣನವರ ಜಯಂತಿ ಆಚರಣೆ ಪ್ರಯುಕ್ತ ಮಾತನಾಡಿದರು.

ಅನುಭವಮಂಟಪದಲ್ಲಿ ಪಂಚಶರಣ ಪ್ರಮುಖರಾದ ಬಸವಣ್ಣ, ಅಲ್ಲಮಪ್ರಭು, ಸಿದ್ಧರಾಮ, ಅಕ್ಕಮಹಾದೇವಿ, ಚೆನ್ನಬಸವಣ್ಣ ಪ್ರಮುಖರಾಗಿದ್ದರು. ಅತ್ಯಂತ ಕಿರಿಯ ಜ್ಞಾನಿ ಚೆನ್ನಬಸವಣ್ಣ, ಶಿವಸ್ವಾಮಿ ಅಕ್ಕನಾಗಮ್ಮನವರ ಮಗನಾಗಿ ಜ್ಞಾನಸಾಗರದಂತಿದ್ದರು. ಅವರ ಜಯಂತಿಯಂದು ಕೇವಲ ಅವರ ವಚನ ಓದಿದರೆ ಸಾಲದು, ಅರಿತು ಆಚರಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಗಮಕ ಕಲಾಶ್ರೀ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯ ಮಾತನಾಡಿ, ವರ್ಣ ಸಂಕರದಿಂದಾಗಿ ಕಲ್ಯಾಣ ಕ್ರಾಂತಿಯಾಯಿತು. ಬಸವಣ್ಣನವರು ಕಲ್ಯಾಣ ತೊರೆದರು. ಕಂಡಕಂಡಲ್ಲಿ ಶರಣರ ಹತ್ಯೆಯಾಯಿತು. ಆಗ ಚೆನ್ನಬಸವಣ್ಣನವರು ಹಲವು ಶರಣರನ್ನು ಕರೆದುಕೊಂಡು ಲಕ್ಷಾಂತರ ವಚನ ಕಟ್ಟುಗಳನ್ನು ತಲೆಮೇಲೆ ಹೊತ್ತು ಉಳವಿ ಕಡೆ ಪ್ರಯಾಣ ಬೆಳೆಸಿ ಅಲ್ಲಿಯೇ ಐಕ್ಯರಾದರು. ಇಂದು ಸಿಕ್ಕಿರುವ ವಚನ ಸಂರಕ್ಷಣೆ ಮಾಡಿದವರು ಚೆನ್ನಬಸವಣ್ಣನವರು ಎಂದರು.

ಪ್ರಾರಂಭದಲ್ಲಿ ಭವಾನಮ್ಮ ಗುರುಮಲ್ಲಪ್ಪ, ಶಿವಲಿಂಗಯ್ಯ, ಹಂ.ಸಿ.ಕುಮಾರಸ್ವಾಮಿ ವಚನ ಗಾಯನ ಮಾಡಿದರು. ಹಂಸಿ.ಕುಮಾರಸ್ವಾಮಿ ಸ್ವಾಗತಿಸಿದರು. ಬಿ.ರಾಜಶೇಖರಯ್ಯ ಪ್ರಾಸ್ತಾವಿಕ ನುಡಿದರು. ಭವಾನಮ್ಮ, ಗುರುಮಲ್ಲಪ್ಪ ನಿರೂಪಿಸಿದರು. ಎಸ್.ವಿ.ರವೀಂದ್ರನಾಥ ಠಾಗೂರ್‌ರವರು ರಾಜಶೇಖರಯ್ಯ ಈಚನೂರು ಅವರನ್ನು ಅಭಿನಂದಿಸಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಸನ್ಮಾನಿಸಿದರು. ಯೋಗಬಂಧುಗಳು ಹಾಗು ಶರಣ ಶರಣೆಯರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಎಂ.ಜಿ.ಸಿದ್ಧರಾಮಯ್ಯ, ರವೀಂದ್ರನಾಥ ಠಾಗೂರ್, ಬಿ.ರಾಜಶೇಖರಯ್ಯ, ವಿ.ಪಿ.ಕೃಷ್ಣಮೂರ್ತಿ, ಹಂ.ಸಿ.ಕುಮಾರಸ್ವಾಮಿ, ರಾಜಶೇಖರಯ್ಯ ಇತರರು ಇದ್ದಾರೆ.

----

ಶಿವಕುಮಾರ ಮಹಾಸ್ವಾಮೀಜಿಯವರ 42ನೇ ಮಾಸಿಕ ಶರಣ ಚಿಂತನ ಕಾರ್ಯಕ್ರಮ

Share this article