ಬೀದರ್‌ ಜಿಲ್ಲೆಯಾದ್ಯಂತ ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆ

KannadaprabhaNewsNetwork |  
Published : Dec 26, 2025, 01:15 AM IST
ಚಿತ್ರ 25ಬಿಡಿಆರ್61 | Kannada Prabha

ಸಾರಾಂಶ

ಬೀದರ್‌ನ ಮಂಗಲಪೇಟ್‌ನಲ್ಲಿರುವ ಜಿಲ್ಲಾ ಮೆಥೋಡಿಸ್ಟ್ ಚರ್ಚನಲ್ಲಿ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಡಿಸೋಜಾ ಥಾಮಸ್ ನೇತೃತ್ವದಲ್ಲಿ ವಿಶೇಷ ಉಪನ್ಯಾಸ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬವು ಗುರುವಾರ ಸಂಭ್ರಮದಿಂದ ಆಚರಿಸಿ ಪರಸ್ಪರ ಶುಭ ಕೋರಿದರು.ಬೀದರ್‌ನ ಮಂಗಲಪೇಟ್‌ನಲ್ಲಿರುವ ಜಿಲ್ಲಾ ಮೆಥೋಡಿಸ್ಟ್ ಚರ್ಚ್‌ನಲ್ಲಿ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಡಿಸೋಜಾ ಥಾಮಸ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ, ಬೈಬಲ್ ಪಠಣ, ದಿನವಿಡೀ ಭಜನೆ, ಮತ್ತಿತರ ಕಾರ್ಯಕ್ರಮಗಳು ಜರುಗಿದವು.ಈ ಸಂದರ್ಭದಲ್ಲಿ ರೇವರೆಂಡ್ ತುಕರಾಮ, ರೇವರೆಂಡ್.ವಿಜಯಕುಮಾರ ಡೇವಿಡ್, ಇಮಾನ್ವೆಲ್ ಪ್ರದೀಪ್, ಧೂಳಪ್ಪ, ಜಾನ್ ಮತ್ತಿತರರು ಇದ್ದರು.ಧರ್ಮ ಗುರುಗಳಿಂದ ಬೈಬಲ್ ಪಠಣ ಜರುಗಿತು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿ ಸಹಸ್ರಾರು ಕ್ರೈಸ್ತರು ಶ್ರದ್ಧೆ, ಭಕ್ತಿಯಿಂದ ಚರ್ಚಗೆ ಆಗಮಿಸಿ ಪ್ರಾರ್ಥನೆಯಲ್ಲಿ ಭಾಗಿಯಾದರು.ಪೌರಾಡಳಿತ ಸಚಿವ ರಹೀಂ ಖಾನ್, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ಮಹಾನಗರ ಪಾಲಿಕೆ ಅಧ್ಯಕ್ಷ ಮಹ್ಮದ್ ಗೌಸೊದ್ದೀನ್, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪುರ ಸೇರಿದಂತೆ ವಿವಿಧ ಪಕ್ಷದ ಜನಪ್ರತಿನಿಧಿಗಳು, ಸಮಾಜದ ಪ್ರಮುಖರು, ಗಣ್ಯರು ಕ್ರಿಸ್ಮಸ್ ಶುಭ ಕೋರಿದರು. ಚರ್ಚ ಬಳಿ ಜಾತ್ರೆಯ ವಾತಾವರಣ ಇದ್ದು ಮೂರು ದಿನಗಳ ವರೆಗೆ ಮಕ್ಕಳಿಗೆ ಮನರಂಜನೆ ನಡೆಯಲಿವೆ ಸಂಜೆ ಚರ್ಚ ಪರಿಸರದಲ್ಲಿ ಜನಸ್ತೋಮ ಸೇರಿತ್ತು.ಚರ್ಚ್‌ಗಳಿಗೆ ವಿಶೇಷ ಶೃಂಗಾರ:ಬೀದರ್ ಹೊಸ ಬಸ್ ನಿಲ್ದಾಣ ಎದುರಿನ ವಿಜಯನಗರದ ಸೆಕ್ರೆಟ್ ಹಾರ್ಟ ಚರ್ಚ, ಶಹಾಗಂಜ್ ಚರ್ಚ, ನಾವದಗೇರಿ ಇಮ್ಯಾನುವೆಲ್ ಚರ್ಚ್, ವಿದ್ಯಾನಗರ ಚರ್ಚ್, ಚಿದ್ರಿ, ಚಿಯೋನ್ ಕಾಲೋನಿ, ಶಹಾಪುರ ಗೇಟ್ ಹತ್ತಿರದ ಸೇಂಟ್ ಜೋಸೆಫ್ ಕ್ಯಾಥೋಲಿಕ್ ಚರ್ಚ್, ಕುಂಬಾರವಾಡ ಚರ್ಚ್ ಗಳಿಗೆ ವಿಶೇಷವಾಗಿ ಶೃಂಗರಿಸಲಾಗಿತ್ತು ಅಲ್ಲದೇ ವಿವಿಧೆಡೆ ವಿಶಿಷ್ಟ ಕಾರ್ಯಕ್ರಮಗಳು ನಡೆದವು. ಕ್ರೈಸ್ತ ಬಾಂಧವರು ಪ್ರಾರ್ಥನೆ ನಂತರ ತಮ್ಮ ಮನೆಗಳಲ್ಲಿ ಸಂಬಂಧಿಕರು ಮತ್ತು ಆಪ್ತರಿಗಾಗಿ ಭೋಜನಕೂಟ ಏರ್ಪಡಿಸಿದರುಜಿಲ್ಲೆಯ ಭಾಲ್ಕಿ, ಬಸವಕಲ್ಯಾಣ, ಔರಾದ್, ಹುಮನಾಬಾದ್, ಚಿಟಗುಪ್ಪ, ಹುಲಸೂರು, ಕಮಲನಗರ ಪಟ್ಟಣಗಳು ಹಾಗೂ ಹೋಬಳಿ ಕೇಂದ್ರಗಳಲ್ಲಿ ಕ್ರಿಸ್ಮಸ್ ಹಬ್ಬ ಅದ್ದೂರಿಯಾಗಿ ಆಚರಿಸಿದರು.ಧರ್ಮ ಗುರುಗಳಿಂದ ಬೈಬಲ್ ಪಠಣದೊಂದಿಗೆ ಯೇಸು ಕ್ರಿಸ್ತನ ಬಾಲ್ಯ, ಜೀವನದ ಕುರಿತು ದೈವ ಸಂದೇಶಗಳು ನೀಡಲಾಯಿತು. ಭಜನೆ, ವಿಶೇಷ ಆರಾಧನೆಗಳು ನಡೆದವು. ಅಲ್ಲಲ್ಲಿ ಯೇಸುಕ್ರಿಸ್ತನ ಜೀವನ, ಸಾಧನೆ ಮತ್ತು ತತ್ವಗಳನ್ನು ಬಿಂಬಿಸುವ ನಾಟಕ ಪ್ರದರ್ಶನಗೊಂಡವು.

PREV

Recommended Stories

ರಾಯಚೂರು ಜಿಲ್ಲಾದ್ಯಂತ ಸಂಭ್ರಮ, ಸಡಗರದ ಕ್ರಿಸ್‌ಮಸ್ ಆಚರಣೆ
ಸನ್ನಡತೆ, ಸಂಯಮಕ್ಕೂ ಅಟಲ್‌ ಮಾದರಿ