ಚಳಿಗಾಲದಲ್ಲಿ ಮತ್ತೆ ಕೋವಿಡ್‌ ವಕ್ಕರಿಸುವ ಸಾಧ್ಯತೆ: ಚೀನಾ ತಜ್ಞರು

KannadaprabhaNewsNetwork | Published : Nov 14, 2023 1:15 AM

ಸಾರಾಂಶ

ಪ್ರಸ್ತುತ ಚಳಿಗಾಲದ ಸಂದರ್ಭದಲ್ಲಿ ಮತ್ತೆ ಕೋವಿಡ್‌-19 ಸಾಂಕ್ರಾಮಿಕ ಹೆಚ್ಚಾಗುವ ಸಾಧ್ಯತೆಗಳಿದೆ ಎಂದು ಚೀನಾದ ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ

ಲಸಿಕೆ ಹಾಕಿಸಿಕೊಳ್ಳಲು, ನಿಯಂತ್ರಣ ಕ್ರಮ ಪಾಲನೆಗೆ ಸಲಹೆಸದ್ಯ ಚೀನಾದಲ್ಲಿ ಎಕ್ಸ್‌ಬಿಬಿ ಎಂಬ ಹೊಸ ರೂಪಾಂತರಿ ಅಕ್ಟೋಬರ್‌ನಲ್ಲಿ ಚೀನಾದಲ್ಲಿ 209 ಕೇಸು, 24 ಸಾವು ವರದಿ

ಬೀಜಿಂಗ್‌: ಪ್ರಸ್ತುತ ಚಳಿಗಾಲದ ಸಂದರ್ಭದಲ್ಲಿ ಮತ್ತೆ ಕೋವಿಡ್‌-19 ಸಾಂಕ್ರಾಮಿಕ ಹೆಚ್ಚಾಗುವ ಸಾಧ್ಯತೆಗಳಿದೆ ಎಂದು ಚೀನಾದ ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ದೈಹಿಕ ದುರ್ಬಲರು ಹಾಗೂ ವಯಸ್ಸಾದವರು ತಪ್ಪದೇ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಚೀನಾದ ಖ್ಯಾತ ಉಸಿರಾಟ ಸಂಬಂಧಿತ ರೋಗ ತಜ್ಞರಾದ ಜ್ಹೋಂಗ್‌ ನನ್ಶಾನ್‌ ಎಚ್ಚರಿಸಿದ್ದಾರೆ.

ಪ್ರಮುಖ ಆಸ್ಪತ್ರೆಯೊಂದರ ಮುಖಸ್ಥರಾದ ಇನ್ನೋರ್ವ ತಜ್ಞ ಲು ಹಾಂಗ್‌ಝೌ ‘ವೈರಸ್ ರೂಪಾಂತರಗೊಳ್ಳುತ್ತಿದೆ. ಆದರೆ ಜನರ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆಯಾದ್ದರಿಂದ ರೋಗದ ವಿರುದ್ಧ ಹೋರಾಡುವ ಸಾಮಾನ್ಯ ಜನರ ಸಾಮರ್ಥ್ಯವು ಕ್ಷೀಣಿಸುತ್ತಿದೆ. ಹಿಂದಿನ ಚಳಿಗಾಲದ ಅವಧಿಗಳಲ್ಲಿ ಕೋವಿಡ್‌ ಪ್ರಮಾಣ ಹೆಚ್ಚಾಗಿತ್ತಾದ್ದರಿಂದ ಈ ಬಾರಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇದಕ್ಕಾಗಿ ರೋಗ ತಡೆಗಟ್ಟುವಿಕೆಯ ನಿಯಂತ್ರಣ ಕ್ರಮಗಳನ್ನು ಮುಂದುವರೆಸಬೇಕು’ ಎಂದಿದ್ದಾರೆ. ಅದಾಗ್ಯೂ ತೀರಾ ಆತಂಕ ಪಡುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಒಟ್ಟು 209 ಹೊಸ ತೀವ್ರ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 24 ಜರರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅಲ್ಲದೇ ಜನರಲ್ಲಿ ಕಾಣಿಸಿಕೊಂಡಿದ್ದು ಕೋವಿಡ್‌ನ ಎಕ್ಸ್‌ಬಿಬಿ ಎಂಬ ಹೊಸ ರೂಪಾಂತರಿಯಾಗಿದೆ ಎಂದು ಚೀನಾ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.

Share this article