ಪಕ್ಷಿ ಸಂರಕ್ಷಣಾ ಉದ್ದೇಶದಿಂದ ಶಬ್ದರಹಿತ ದೀಪಾವಳಿ!

KannadaprabhaNewsNetwork | Published : Nov 13, 2023 1:16 AM

ಸಾರಾಂಶ

ಈರೋಡ್‌: ತಮಿಳುನಾಡಿನ ಈರೋಡ್‌ನ ಸುತ್ತಮುತ್ತ ಇರುವ 7 ಗ್ರಾಮಗಳ ನಾಗರಿಕರು ಗ್ರಾಮದ ಬಳಿ ಇರುವ ಪಕ್ಷಿಧಾಮದಲ್ಲಿರುವ ಪಕ್ಷಿಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಶಬ್ದರಹಿತ ದೀಪಾವಳಿ ಆಚರಿಸಿಕೊಂಡು ಬರುತ್ತಿದ್ದಾರೆ.

ಕಳೆದ 22 ವರ್ಷಗಳಿಂದ ಇದೇ ಸಂಪ್ರದಾಯ

ಈರೋಡ್‌: ತಮಿಳುನಾಡಿನ ಈರೋಡ್‌ನ ಸುತ್ತಮುತ್ತ ಇರುವ 7 ಗ್ರಾಮಗಳ ನಾಗರಿಕರು ಗ್ರಾಮದ ಬಳಿ ಇರುವ ಪಕ್ಷಿಧಾಮದಲ್ಲಿರುವ ಪಕ್ಷಿಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಶಬ್ದರಹಿತ ದೀಪಾವಳಿ ಆಚರಿಸಿಕೊಂಡು ಬರುತ್ತಿದ್ದಾರೆ.ಈರೋಡ್‌ ಬಳಿ ಇರುವ ಪಕ್ಷಿಧಾಮಕ್ಕೆ ಹಲವು ಕಡೆಯಿಂದ ಪಕ್ಷಿಗಳು ಮೊಟ್ಟೆಯಿಟ್ಟು ಕಾವು ಕೊಡಲು ಅಕ್ಟೋಬರ್‌ನಿಂದ ಜನವರಿವರೆಗೆ ವಲಸೆ ಬರುತ್ತವೆ. ಅವುಗಳಿಗೆ ಭಯವಾಗಬಾರದು ಎಂಬ ಉದ್ದೇಶದಿಂದ ಗ್ರಾಮಸ್ಥರು ಶಬ್ದ ಬರುವ ಯಾವುದೇ ಪಟಾಕಿಗಳನ್ನು ಸಿಡಿಸದೇ ಪಕ್ಷಿಪ್ರೇಮ ಮೆರೆಯುತ್ತಿದ್ದಾರೆ. ಸುಮಾರು 900 ಕುಟುಂಬಗಳು ಇರುವ ಈ ಪ್ರದೇಶದಲ್ಲಿ ದೀಪಾವಳಿಯನ್ನು ತಮ್ಮ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸಿ ಕೇವಲ ಹಣತೆ ಹಚ್ಚುವ ಮೂಲಕ ಆಚರಿಸಿ ಪಕ್ಷಿ ಸಂರಕ್ಷಣೆಗೆ ತಮ್ಮ ಕೊಡುಗೆ ಸಲ್ಲಿಸುತ್ತಿದ್ದಾರೆ.

Share this article