ಗುವಾಹಟಿ: ನಾಗರಹಾವು ಮತ್ತು ಕಟ್ಟು ಹಾವುಗಳು ಸತ್ತ ಬಳಿಕವೂ ಅದರ ಅವುಗಳು ವಿಷಪೂರಿತವಾಗಿರುತ್ತವೆ. ಅವುಗಳು ಕಚ್ಚುವ ಸಾಮರ್ಥ್ಯ ಹೊಂದಿರುತ್ತವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಅಸ್ಸಾಂನಲ್ಲಿ ಇಂಥ 5 ಪ್ರಕರಣ ನಡೆದಿವೆ. ಈ ಬಗ್ಗೆ ಐವರು ವೈದ್ಯರು ಹಾವಿನ ಕುರಿತು ನಡೆಸಿದ ಅಧ್ಯಯನದಲ್ಲಿ ಈ ಅಂಶ ಪತ್ತೆಯಾಗಿದೆ. ಹಾವುಗಳು ಶೀತ ರಕ್ತ ಪ್ರಾಣಿಗಳಾಗಿರುವ ಕಾರಣ ಅವುಗಳನ್ನು ಕೊಂದಾಗ ಅಥವಾ ಅವುಗಳ ತಲೆ ಕಡಿದ ಬಳಿಕವೂ ಹಾವುಗಳ ಮೆದುಳು ಸಕ್ರಿಯವಾಗಿರುತ್ತದೆ. ಅವು ತನ್ನ ಸುತ್ತಮುತ್ತಲು ನಡೆವ ಪ್ರಕ್ರಿಯೆಗಳನ್ನು ಗಮನಿಸುತ್ತಿರುತ್ತವೆ. ತನಗೆ ಸ್ಪರ್ಶದ ಅನುಭವವಾದಾಗ ತಕ್ಷಣವೇ ಪ್ರತಿಕ್ರಿಯಸಿ ಕಚ್ಚುತ್ತವೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಇದಕ್ಕೆ ಮೂರು ಉದಾಹರಣೆ ನೀಡಿರುವ ವರದಿಯು, ಅಸ್ಸಾಂನಲ್ಲಿ ಪ್ರತ್ಯೇಕ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳ ನಾಗರ ಹಾವು ಸತ್ತ ಬಳಿಕ ಸ್ಪರ್ಶಿಸಿ ಕಚ್ಚಿಸಿಕೊಂಡಿದ್ದರು. ಬಳಿಕ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಮತ್ತೊಂದು ಘಟನೆಯಲ್ಲಿ ಕಟ್ಟು ಹಾವನ್ನು ಕೊಂದಿದ್ದ ವ್ಯಕ್ತಿ ಅದನ್ನು ತೆಗೆದು ಹೊರಹಾಕುವ ವೇಳೆ ಕಚ್ಚಿಸಿಕೊಂಡಿದ್ದರು. ಬಳಿಕ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು ಎಂದು ವರದಿ ಹೇಳಿದೆ.