ಹಿಮಾಲಯ ರಕ್ಷಣೆಗೆ 5 ರಾಷ್ಟ್ರಗಳು ಒಗ್ಗೂಡಬೇಕು - ಹಿಮಾಲಯ ಅತ್ಯದ್ಭುತ ಸ್ಥಳ, ಸಂರಕ್ಷಣೆ ಅಗತ್ಯ

Published : Sep 01, 2026, 12:33 PM IST
sadguru

ಸಾರಾಂಶ

ಈ ವಿಕೋಪದ ಪರಿಣಾಮವನ್ನು ನೇಪಾಳ ಎದುರಿಸುತ್ತಿದೆ. ಆದರೆ ಆ ಪುಟ್ಟ ರಾಷ್ಟ್ರವೊಂದರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ, ಈ ದುರಂತಕ್ಕೆ ಇಡೀ ವಿಶ್ವವೇ ಹೊಣೆಗಾರ.

 ಸದ್ಗುರು 

ಈಶ ಸ್ಥಾಪಕ, ಆಧ್ಯಾತ್ಮಿಕ ಗುರು

ಈ ವಿಕೋಪದ ಪರಿಣಾಮವನ್ನು ನೇಪಾಳ ಎದುರಿಸುತ್ತಿದೆ. ಆದರೆ ಆ ಪುಟ್ಟ ರಾಷ್ಟ್ರವೊಂದರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ, ಈ ದುರಂತಕ್ಕೆ ಇಡೀ ವಿಶ್ವವೇ ಹೊಣೆಗಾರ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಮುಂದಿನ 25 ವರ್ಷಗಳಲ್ಲಿ, ಸಮುದ್ರ ದಂಡೆಯಲ್ಲಿರುವ 600 ಪ್ರಮುಖ ನಗರಗಳು ಕೊಚ್ಚಿಕೊಂಡು ಹೋಗಲಿವೆ ಎನ್ನಲಾಗುತ್ತದೆ.

ನೇಪಾಳದಲ್ಲಿ ಸಂಭವಿಸಿರುವಂತಹ ಭೀಕರ ಪ್ರವಾಹದಂತಹ ಸಂದರ್ಭಗಳಲ್ಲಿ ನಾವು ಅದರ ಕಾರಣ ಹುಡುಕಲು ಶುರು ಮಾಡುತ್ತೇವೆ. ಎಲ್ಲರೂ ದೈವಿಕ ಕಾರಣದ ಶೋಧಕ್ಕಿಳಿಯುತ್ತಾರೆ. ಆದರೆ ಇದು ಸಲ್ಲದು. ಇಂತಹ ಭೌತಿಕ ವಿದ್ಯಮಾನಗಳು ಭೌತಿಕ ನಿಯಮಕ್ಕೆ ಅನುಗುಣವಾಗಿ ನಡೆಯುತ್ತಿರುತ್ತವೆ.

ಇಸ್ರೋ ಪ್ರಕಾರ, ಹಿಮದ ಕರಗುವಿಕೆಯಿಂದ 2 ಸಾವಿರ ಅಡಿಯಷ್ಟು ಅಗಲದ ಹಿಮನದಿಯೊಂದು ಬೆಟ್ಟದ ತುದಿಯಿಂದ ಕೆಳಗೆ ಬಿದ್ದು, ಭೂಕಂಪದಂತಹ ಪರಿಣಾಮ ಬೀರಿತು. ಇದು, ನೇಪಾಳವು ಕಳೆದ 10 ವರ್ಷಗಳಲ್ಲಿ ಎದುರಿಸಿದ ಭೀಕರ ವಿಕೋಪವಾಗಿದೆ. ಅನೇಕರು ಮನೆ-ಮಠಗಳನ್ನು, ಪ್ರೀತಿಪಾತ್ರರನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ.

ಬಲಿಯಾದ ಈಶ ತಂಡ:

ಕೈಲಾಸ ಮಾನಸಸರೋವರ ಯಾತ್ರೆಗೆಂದು ಹೊರಟಿದ್ದ ಈಶ ತಂಡ ಆ.26ರ ಬೆಳಗ್ಗೆ 9:05ಕ್ಕೆ ಟಿಬೆಟ್‌-ನೇಪಾಳ ಗಡಿಯಲ್ಲಿರುವ ಗಿರಾಂಗ್‌ ವಲಸೆ ಕೇಂದ್ರ ತಲುಪಿತ್ತು. 9:14ರ ಹೊತ್ತಿಗೆ, 3540 ಅಡಿ ಎತ್ತರದ ಭಾರೀ ಪ್ರವಾಹವೆದ್ದ ಸುದ್ದಿ ಬಂತು. ನಮ್ಮವರು ವಲಸೆ ಕೇಂದ್ರದಲ್ಲಿರುವುದರಿಂದ ಸುರಕ್ಷಿತವಾಗಿರುತ್ತಾರೆ. ಹೆಚ್ಚೆಂದರೆ ಒಯ್ದಿದ್ದ ಚೀಲಗಳನ್ನು ಕಳೆದುಕೊಳ್ಳಬಹುದು ಎಂದುಕೊಂಡೆ. ಸಮಯ ಸರಿದಂತೆ ಇನ್ನೂ ಭೀಕರ ದೃಶ್ಯಗಳು ಕಂಡವು. ನೀರಿನೊಂದಿಗೆ ಅವಶೇಷಗಳೂ ಕೊಚ್ಚಿಕೊಂಡು ಬರುತ್ತಿದ್ದವು. ಇಂಥದ್ದೇನಾದರೂ ಆಗಬಹುದೆಂದು ಯಾರೂ ಊಹಿಸಿರಲಿಲ್ಲ. ಅವರೆಲ್ಲಾ ಒಂದರ್ಧ ಗಂಟೆ ತಡವಾಗಿ ಹೋಗಬಾರದಿತ್ತೇ ಎಂದು ಹಲುಬಿದೆ.

ಈ ವಿಕೋಪದ ಪರಿಣಾಮವನ್ನು ನೇಪಾಳ ಎದುರಿಸುತ್ತಿದೆ. ಆದರೆ ಆ ಪುಟ್ಟ ರಾಷ್ಟ್ರವೊಂದರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ, ಈ ದುರಂತಕ್ಕೆ ಇಡೀ ವಿಶ್ವವೇ ಹೊಣೆಗಾರ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಮುಂದಿನ 25 ವರ್ಷಗಳಲ್ಲಿ, ಸಮುದ್ರ ದಂಡೆಯಲ್ಲಿರುವ 600 ಪ್ರಮುಖ ನಗರಗಳು ಕೊಚ್ಚಿಕೊಂಡು ಹೋಗಲಿವೆ ಎನ್ನಲಾಗುತ್ತದೆ.

5 ರಾಷ್ಟ್ರಗಳ ಸಹಕಾರ ಅಗತ್ಯ:

ಈ ಹಿಂದೆ ಪರಿಸರ ಖಾತೆಯ ಕೇಂದ್ರ ರಾಜ್ಯ ಸಚಿವರಾಗಿದ್ದ ಅನಿಲ್ ದವೆ ಅವರು, ಪಶ್ಚಿಮ ಘಟ್ಟದ ಸಂರಕ್ಷಣೆಗಾಗಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಒಗ್ಗೂಡಬೇಕು ಎಂದು ಸೂಚಿಸಿದ್ದರು. ಈ ಘಟ್ಟ ಹಬ್ಬಿರುವ ದಕ್ಷಿಣ ಭಾರತದ ಐದೂ ರಾಜ್ಯಗಳಲ್ಲಿ ಬೇರೆಬೇರೆ ಸರ್ಕಾರಗಳಿವೆ. ಆದರೆ ಪಶ್ಚಿಮ ಘಟ್ಟಕ್ಕಾಗಿ ಎಲ್ಲರೂ ಒಗ್ಗಟ್ಟು ಅಗತ್ಯ ಎಂದು ಪ್ರತಿಪಾದಿಸಲಾಯಿತು.

ಇದೇ ರೀತಿಯ ಕ್ರಮದ ಅಗತ್ಯ ಹಿಮಾಲಯದ ತಪ್ಪಲಿನಲ್ಲಿದೆ. ಪರ್ವತಗಳಿಗೆ ನಿಮ್ಮ ರಾಜಕೀಯ ಒಲವು ಯಾವುದೆಂದು ತಿಳಿದಿರುವುದಿಲ್ಲ. ನೀವು ಯಾವ ಭಾಷೆಯನ್ನು ಮಾತನಾಡುತ್ತೀರಿ ಅಥವಾ ಎಂತಹ ಅರ್ಥಹೀನ ಮಾತುಗಳನ್ನಾಡುತ್ತೀರಿ ಎಂಬುದು ಕೂಡ ಅವುಗಳಿಗೆ ಗೊತ್ತಿರುವುದಿಲ್ಲ. ಹಿಮಾಲಯದ ಪರ್ವತದಲ್ಲಿರುವ ಪ್ರಾಣಿಗಳು ನಿಮ್ಮ ಗಡಿಗಳನ್ನು ಪರಿಗಣಿಸುವುದಿಲ್ಲ ಹಾಗೂ ಎಲ್ಲೆಂದರಲ್ಲಿ ಓಡಾಡುತ್ತಿರುತ್ತವೆ. ಗಾಳಿಯಲ್ಲಿ ಹಾರಾಡುವ ಪಕ್ಷಿಗಳಿಗೆ ನಿಮ್ಮ ರಾಷ್ಟ್ರೀಯತೆಯಾಗಲಿ ಅಥವಾ ನಿಮ್ಮ ದೇಶದ ಪವಿತ್ರ ಗಡಿಗಳಾಗಲಿ ಮುಖ್ಯವಲ್ಲ. ಮನುಷ್ಯರೆಲ್ಲ ವಲಸೆ ಹೋಗಲೆಂದು ಸಾಲಿನಲ್ಲಿ ನಿಂತಿರುವಾಗ, ಪಕ್ಷಿಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಮುಕ್ತವಾಗಿ ಸಂಚರಿಸುತ್ತಿರುವುದನ್ನು ನಾನು ಗಮನಿಸುತ್ತೇನೆ. ಹಾಗೆ ಹಾರುವಾಗ ಅವು ಮನುಷ್ಯರ ಮೂರ್ಖತನವನ್ನು ಅಣಕಿಸುತ್ತಿರುವಂತೆ ಅನ್ನಿಸುತ್ತದೆ.

ಹೀಗಿರುವಾಗ, ಭಾರತ, ಚೀನಾ, ಪಾಕಿಸ್ತಾನ, ನೇಪಾಳ ಮತ್ತು ಭೂತಾನ್ ರಾಷ್ಟ್ರಗಳನ್ನು ಒಳಗೊಂಡ ‘ಹಿಮಾಲಯನ್ ಮಂಡಳಿ’ ಸ್ಥಾಪಿಸಬೇಕು. ಈ ಎಲ್ಲಾ 5 ರಾಷ್ಟ್ರಗಳು ಒಟ್ಟಾಗಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೂ ಚಿಂತೆಯಿಲ್ಲ, ಕಡೇ ಪಕ್ಷ ಸಮಾಲೋಚನೆಯನ್ನಾದರೂ ಒಂದಾಗಿ ನಡೆಸಬೇಕು.

ಹಿಮಾಲಯವು ಭೂಮಿಯ ಮೇಲಿನ ಅತ್ಯದ್ಭುತ ಸ್ಥಳ. ಅಂತೆಯೇ ಅತ್ಯಂತ ಸೂಕ್ಷ್ಮ ಪ್ರದೇಶವೂ ಹೌದು. ಇಲ್ಲಿ ಸಂಭವಿಸಬಹುದಾದ ವಿಪತ್ತುಗಳ ಸಮಯದಲ್ಲಿ ಸಹಕಾರಕ್ಕಾಗಿ ಈ ಪ್ರದೇಶದ 5 ರಾಷ್ಟ್ರಗಳು ಒಟ್ಟಾಗಬೇಕು. ಹಿಮಾಲಯವನ್ನು ಮುಂದಿನ ಪೀಳಿಗೆಗಳಿಗಾಗಿ ಉಳಿಸಲಾದರೂ ಕ್ರಮ ಅಗತ್ಯ. ಈ ಮಂಡಳಿ ಸ್ಥಾಪಿಸುವುದರಿಂದ ಸಮಸ್ಯೆಗೆ ಪೂರ್ಣಪ್ರಮಾಣದ ಪರಿಹಾರ ಸಿಕ್ಕಿಬಿಡುತ್ತದೆ ಎಂದಲ್ಲ. ಬದಲಿಗೆ ಪರಿಸ್ಥಿತಿಯನ್ನು ಈಗಿರುವುದಕ್ಕಿಂತ ಸುಧಾರಿಸಲು ಸಾಧ್ಯವಾಗುತ್ತದೆ.

ನೇಪಾಳವನ್ನು ಕಡೆಗಣಿಸದಿರಿ:

ಪ್ರವಾಹ ಅಪ್ಪಳಿಸುತ್ತಿದ್ದಂತೆ, ಅಂತಾರಾಷ್ಟ್ರೀಯ ಮಾಧ್ಯಮಗಳು ನೇಪಾಳದಲ್ಲಿ ಈ ಹಿಂದೆ ಸಂಭವಿಸಿದ ದುರಂತಗಳ ಪಟ್ಟಿ ಮಾಡಲು ತೊಡಗಿವೆ. ಅವರ ಮುಂದಿನ ಹೆಜ್ಜೆ, ‘ಅಲ್ಲಿಗೆ ಹೋಗಬೇಡಿ’ ಎಂಬ ನಿಯಮಾವಳಿ ಬಿಡುಗಡೆ ಮಾಡುವುದು. ಹೀಗೆ ಆಗಬಾರದು. ವಿಪತ್ತಿನಿಂದ ನಮ್ಮ ಕಾಲು ಜಜ್ಜಿಹೋಯಿತೆಂದು ತಲೆಗೆ ಗುಂಡು ಹೊಡೆದುಕೊಳ್ಳಲಾದೀತೇ? ನೇಪಾಳಕ್ಕೆ ಹೋದ ಮಾತ್ರಕ್ಕೆ ನಿಮ್ಮ ಜೀವಕ್ಕೆ ಅಪಾಯವಿದೆ ಎಂದು ಭಾವಿಸಬಾರದು. ನಾನೇ ಸ್ವತಃ 21 ಬಾರಿ ಕೈಲಾಸಕ್ಕೆ ಬಂದಿದ್ದೇನೆ.

ಮಾನವ ಕಲಿಯಬೇಕಾದ ಪಾಠ:

ಈ ದೇಹ ನಶ್ವರ ಎಂದು ಬದುಕಿರುವ ಪ್ರತಿ ಕ್ಷಣವೂ ನೆನಪಿಟ್ಟುಕೊಂಡಿರಬೇಕು. ಇದರ ಅರಿವಾಗಲು ದುರಂತಗಳು ಸಂಭವಿಸಲೆಂದು ಕಾಯಬಾರದು. ಹಾಗಿದ್ದಾಗ ಮಾತ್ರ ಸಾಧ್ಯವಾದಷ್ಟು ಸೂಕ್ಷ್ಮ ರೀತಿಯಲ್ಲಿ ನಾವು ಜೀವನ ನಡೆಸುತ್ತೇವೆ.

PREV
Read more Articles on

Recommended Stories

ಆಷಾಢಮಾಸ- ಗ್ರಾಮೀಣ ಸೊಗಡು, ಚಾಮರಾಜನಗರ ಭಾಷಾ ಶೈಲಿಯ ಕಥೆಗಳ ಸಂಕಲನ
ನನ್ನ ಊರಿನಲ್ಲಿ ದೆವ್ವಗಳು ಕಾಣೆಯಾಗಿದ್ದಾವೆ!