ಬೆಂಗಳೂರು : ಇಂದಿನಿಂದ ಕಸ ವಿಲೇವಾರಿಗೂ ಬಿಬಿಎಂಪಿಯಿಂದ ಬಳಕೆದಾರರ ಶುಲ್ಕ ವಸೂಲಿ

KannadaprabhaNewsNetwork |  
Published : Apr 01, 2025, 02:00 AM ISTUpdated : Apr 01, 2025, 05:07 AM IST
ಬಿಬಿಎಂಪಿ | Kannada Prabha

ಸಾರಾಂಶ

ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಈವರೆಗೆ ಆಸ್ತಿ ತೆರಿಗೆಯಲ್ಲಿ ಉಪಕರ ಸಂಗ್ರಹಿಸುತ್ತಿದ್ದ ಬಿಬಿಎಂಪಿ ಇನ್ನು ಮುಂದೆ ಘನತ್ಯಾಜ್ಯ ನಿರ್ವಹಣೆಗಾಗಿ ತ್ಯಾಜ್ಯ ಬಳಕೆದಾರರ ಶುಲ್ಕ ವಸೂಲಿಗೆ ಮುಂದಾಗಿದೆ. ನೂತನ ಬಳಕೆದಾರರ ಶುಲ್ಕವನ್ನು ಏ.1ರಿಂದ ತೆರಿಗೆ ಪಾವತಿಸುವವರಿಂದ ವಸೂಲಿ ಮಾಡಲಾಗುತ್ತಿದೆ.

 ಬೆಂಗಳೂರು :  ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಈವರೆಗೆ ಆಸ್ತಿ ತೆರಿಗೆಯಲ್ಲಿ ಉಪಕರ ಸಂಗ್ರಹಿಸುತ್ತಿದ್ದ ಬಿಬಿಎಂಪಿ ಇನ್ನು ಮುಂದೆ ಘನತ್ಯಾಜ್ಯ ನಿರ್ವಹಣೆಗಾಗಿ ತ್ಯಾಜ್ಯ ಬಳಕೆದಾರರ ಶುಲ್ಕ ವಸೂಲಿಗೆ ಮುಂದಾಗಿದೆ. ನೂತನ ಬಳಕೆದಾರರ ಶುಲ್ಕವನ್ನು ಏ.1ರಿಂದ ತೆರಿಗೆ ಪಾವತಿಸುವವರಿಂದ ವಸೂಲಿ ಮಾಡಲಾಗುತ್ತಿದೆ.

ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗಾಗಿ ಈವರೆಗೆ ಆಸ್ತಿ ತೆರಿಗೆಯಲ್ಲೇ ಕಡಿಮೆ ಪ್ರಮಾಣದ ಉಪಕರ ವಸೂಲಿ ಮಾಡಲಾಗುತ್ತಿತ್ತು. ಆದರೆ, ಏಪ್ರಿಲ್‌ನಿಂದ ಬಳಕೆದಾರರ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಅದು ಆಸ್ತಿ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ಬಳಕೆದಾರರ ಶುಲ್ಕ ನಿಗದಿ ಮಾಡಲಾಗಿದೆ. ಏಪ್ರಿಲ್‌ 1ರಿಂದ ಪಾವತಿಸಲಾಗುವ ಆಸ್ತಿ ತೆರಿಗೆಯಲ್ಲಿಯೇ ವಾರ್ಷಿಕ ಬಳಕೆದಾರರ ಶುಲ್ಕ ವಸೂಲಿ ಮಾಡಲು ಸರ್ಕಾರ ಬಿಬಿಎಂಪಿಗೆ ಅನುಮತಿಸಿದೆ.

600 ಚದರ ಅಡಿ ವಿಸ್ತೀರ್ಣದ ನಿವೇಶನದ ವಸತಿ ಕಟ್ಟಡದಲ್ಲಿನ ಪ್ರತಿ ಮನೆಯಿಂದ ಮಾಸಿಕ 10 ರು.ನಂತೆ ವಾರ್ಷಿಕ ₹120 ಬಳಕೆದಾರರ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಹಾಗೆಯೇ, ಆಸ್ತಿಯ ವಿಸ್ತೀರ್ಣ ಹೆಚ್ಚಿದಂತೆ ಬಳಕೆದಾರರ ಶುಲ್ಕವನ್ನೂ ಹೆಚ್ಚಿಸಲಾಗಿದೆ. ಅಂತಿಮವಾಗಿ 4 ಸಾವಿರ ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡದ ಪ್ರತಿ ಮನೆಗೆ ಮಾಸಿಕ ತಲಾ 400 ರು.ನಂತೆ ವಾರ್ಷಿಕ 4,800 ರು. ಶುಲ್ಕ ವಿಧಿಸಲಾಗುತ್ತಿದೆ.

ಇನ್ನು ಸ್ವಂತ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಹೊಂದಿಲ್ಲದ ಸಗಟು ತ್ಯಾಜ್ಯ ಉತ್ಪಾದಕರು ಅಥವಾ ವಾಣಿಜ್ಯ ಕಟ್ಟಡಗಳು ಪ್ರತಿ ಕೆಜಿಗೆ 12 ರು.ನಂತೆ ಬಳಕೆದಾರರ ಶುಲ್ಕ ಪಾವತಿಸಬೇಕಿದೆ. ಅಲ್ಲದೆ, ಪ್ರತಿ ವರ್ಷ ಶೇ. 5ರಷ್ಟು ಶುಲ್ಕ ಹೆಚ್ಚಳ ಮಾಡುವುದಕ್ಕೂ ಬಿಬಿಎಂಪಿ ನಿರ್ಧರಿಸಿದೆ.

ಬಳಕೆದಾರರ ಶುಲ್ಕದ ವಿವರ: (ವಸತಿ ಕಟ್ಟಡಗಳು)

ಕಟ್ಟಡದ ವಿಸ್ತೀರ್ಣಮಾಸಿಕ ಶುಲ್ಕ (ಪ್ರತಿ ಮನೆಗೆ ₹)

600 ಚ. ಅಡಿ10

600-1 ಸಾವಿರ ಚ.ಅಡಿ50

1-2 ಸಾವಿರ ಚ.ಅಡಿ100

2-3 ಸಾವಿರ ಚ.ಅಡಿ150

3-4 ಸಾವಿರ ಚ.ಅಡಿ200

4 ಸಾವಿರ ಚ.ಅಡಿಗಿಂತ ಹೆಚ್ಚು400

PREV

Recommended Stories

ಪ್ರಜ್ವಲ್‌ ರೇವಣ್ಣಗೆ ಕಂಟಕವಾದ 5 ಅಂಶಗಳು
ಅಪ್ಪ ಬಿಟ್ಟ ಕುಲಕಸುಬನ್ನು ಶುರು ಮಾಡಿ ಉದ್ಯಮಿಯಾದ ಮಗ