ನವದೆಹಲಿ: ಬಹುವಿಧದ ಬಳಕೆಗೆ ಬರುವ ಸೇನಾ ವಾಹನ ಸ್ಟ್ರೈಕರ್ ಅನ್ನು ಜಂಟಿಯಾಗಿ ತಯಾರಿಸಲು ಭಾರತ ಹಾಗೂ ಅಮೆರಿಕ ಒಪ್ಪಂದ ಮಾಡಿಕೊಂಡಿವೆ. ಇದು ಏಷ್ಯಾ ಖಂಡದಲ್ಲಿ ಚೀನಾದ ಸೇನಾ ಪ್ರಾಬಲ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಎಂದು ಬಣ್ಣಿಸಲಾಗಿದೆ. ಉಭಯ ದೇಶಗಳ ಸೇನಾ ಹಾಗೂ ವಿದೇಶಾಂಗ ಸಚಿವಾಲಯಗಳ ನಡುವೆ ನಡೆದ 2+2 ಮಾತುಕತೆಯ ನಂತರ ಮಾತನಾಡಿದ ಅಮೆರಿಕ ಸೇನಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ‘ಈ ಒಪ್ಪಂದವು ಪರಸ್ಪರ ಸೇನೆಗಳಿಗೆ ಸಹಕಾರವನ್ನು ನೀಡುವ ಮೂಲಕ ನಮ್ಮ ಬಲವನ್ನು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ.