ಅಲಿದೂಸ್ತಿ, ರಿಯಾಹಿ ಸೇರಿ ಪ್ರಖ್ಯಾತ ನಟಿಯರಿಗೆ ನಿಷೇಧ ಹಿಜಾಬ್ ಧರಿಸದೆ, ಕತ್ತು ಕಾಣುವಂತೆ ಮೈಮಾಟ ಪ್ರದರ್ಶನ ಟೆಹ್ರಾನ್: ಹಿಜಾಬ್ ಧರಿಸದೆ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ 12 ನಟಿಯರನ್ನು ಇರಾನ್ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಬುಧವಾರ ಹೊರಡಿಸಿದ ಆದೇಶದಲ್ಲಿ ಹಿಜಾಬ್‌ನ್ನು ಕಡ್ಡಾಯವಾಗಿ ಧರಿಸುವಂತೆ ನಿಯಮವಿದ್ದರೂ ಇದನ್ನು ಹಲವು ಬಾರಿ ಉಲ್ಲಂಘಿಸಿದ ಕಾರಣ ನಟಿಯರಿಗೆ ನಟನೆ ಮಾಡಲು ನಿಷೇಧ ಹೆರಲಾಗಿದೆ ಎಂದು ತಿಳಿಸಿದೆ. ಈ ಕುರಿತು ಮಾತನಾಡಿದ ಇರಾನ್ ದೇಶದ ಸಾಂಸ್ಕೃತಿಕ ಹಾಗೂ ಇಸ್ಲಾಂ ಮಾರ್ಗದರ್ಶನ ಸಚಿವ ಮೊಹಮ್ಮದ್ ಮೆಹ್ದಿ ಇಸ್ಮೈಲಿ, ‘ಕಾನೂನು ಪಾಲಿಸದವರನ್ನು ಕೆಲಸ ಮಾಡಲು ಬಿಡುವುದಿಲ್ಲ’ ಎಂದು ತಿಳಿಸಿದ್ದಾರೆ.