ಕನ್ನಡಪ್ರಭ ವಾರ್ತೆ ಬೆಂಗಳೂರು
ಮೊದಲ ದಿನವಾದ ಶುಕ್ರವಾರ ಮಧ್ಯಾಹ್ನ 2ಕ್ಕೆ ಆರಂಭಗೊಂಡ ದಾಸರಹಳ್ಳಿ ಸಂಭ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು. ದಿನವಿಡೀ ನಡೆದ ಮಕ್ಕಳ ವೇಷಭೂಷಣ ಸ್ಪರ್ಧೆ, ದಾಸರಹಳ್ಳಿ ಸಾಧಕರಿಗೆ ಸನ್ಮಾನ, ಓಪನ್ ಸ್ಟೇಜ್ ಮತ್ತು ಗಾಯನ, ಸಂಗೀತ ಸಂಜೆ, ಬೀಟ್ ಬಾಕ್ಸಿಂಗ್, ನೃತ್ಯ ಮತ್ತು ಮನರಂಜನಾ ಕಾರ್ಯಕ್ರಮಗಳು ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾದವು.
ದಾಸರಹಳ್ಳಿ ಕ್ಷೇತ್ರದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ಸಹಯೋಗದಲ್ಲಿ ಎರಡನೇ ಬಾರಿಗೆ ದಾಸರಹಳ್ಳಿ ಸಂಭ್ರಮ ಆಯೋಜಿಸಲಾಗಿದ್ದು, ಸ್ಥಳೀಯರ ಸಂಭ್ರಮ ಮುಗಿಲು ಮುಟ್ಟಿತ್ತು.ಮೇಲುಕೋಟೆ ಪುಳಿಯೊಗರೆ, ಆರಾಧ್ಯ ಕರದಂಟು, ಐಯ್ಯಂಗಾರ್ ಪುಳಿಯೊಗರೆ, ಸಿಮ್ಲಾ ಮಿರ್ಚಿ ಬಜ್ಜಿ, ಅಮೆರಿಕನ್ ಸ್ವೀಟ್ ಕಾರ್ನ್, ಐಸ್‌ಕ್ರೀ, ತೆಂಗಿನಕಾಯಿ ಮೊಳಕೆ ಹೂವು, ಕೇರಳ ಹಲ್ವಾ, ರಾಗಿ ಪಾಪಡ್, ದಾವಣಗೆರೆ ಬೆಣ್ಣೆದೋಸೆ, ದಾವಣಗೆರೆ ಗಿರ್ಮಿಟ್, ಡೆಲ್ಲಿ ಮಸಾಲ ಪಾಪಡ್, ಬಂಗಾರಪೇಟೆ ಚಾಟ್ಸ್, ಸಿದ್ಧ ಮಸಾಲಗಳು ಒಳಗೊಂಡಂತೆ ವಿವಿಧ ಖಾದ್ಯಗಳು ಭೋಜನ ಪ್ರಿಯರಿಗೆ ಇಷ್ಟವಾದವು. ಮಕ್ಕಳು, ಮಹಿಳೆಯರಿಗೆ ಡ್ರೆಸ್‌ಗಳು, ಅಲಂಕಾರಿಕ ವಸ್ತುಗಳು, ಮ್ಯಾಜಿಕ್ ಟಾಯ್ಸ್, ಗೃಹೋಪಯೋಗಿ ವಸ್ತುಗಳು, ಹ್ಯಾಂಡ್‌ಲೂಮ್ ಬಟ್ಟೆಗಳು, ಬಾಡಿಮಸಾಜ್ ಪಾರ್ಲರ್, ವಿವಿಧ ಶಾಲೆಗಳ ನೋಂದಣಿ ಮಳಿಗೆಗಳು, ಶೂ, ಚಪ್ಪಲಿಗಳ ಮಳಿಗೆಗಳು, ಮೊಬೈಲ್ ಶಾಪ್‌ಗಳು ಶಾಪಿಂಗ್ ಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.
ಸಂಭ್ರಮಕ್ಕೆ ಮುನಿರಾಜು ಮೆಚ್ಚುಗೆ:
ಮೂರು ದಿನಗಳು ನಡೆಯಲಿರುವ ಸಂಭ್ರಮದಲ್ಲಿ ಸಾವಿರಾರು ಜನರು ಆಗಮಿಸಲಿದ್ದು, ಆಟದ ಮೈದಾನವು ತುಂಬಿ ತುಳುಕಲಿದೆ. ಈ ಕಾರ್ಯಕ್ರಮ ಒಂದು ವರ್ಷಕಾಲ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮನೆಮಾತಾಗಿತ್ತು. ಅಂತಹ ಅಭೂತಪೂರ್ವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡಪ್ರಭದ ಸಹಾಯಕ ಸಂಪಾದಕ ಬಿ.ವಿ.ಮಲ್ಲಿಕಾರ್ಜುನ್, ಪ್ರಣಯಂ ಚಿತ್ರದ ನಟ ರಾಜವರ್ಧನ್ ಉಪಸ್ಥಿತರಿದ್ದರು.
ಬೆಳಗ್ಗೆ 11ಕ್ಕೆ ಮುದ್ದು ಮಗು ಮತ್ತು ವೇಷಭೂಷಣ(ಮಕ್ಕಳಿಗೆ), 12ಕ್ಕೆ ಅಡುಗೆ ಮಹಾರಾಣಿ (ಮಹಿಳೆಯರಿಗೆ), ಮಧ್ಯಾಹ್ನ 2ಕ್ಕೆ ಓಪನ್ ಸ್ಟೇಜ್ ಮತ್ತು ಗಾಯನ, ಸಂಜೆ 5ಕ್ಕೆ ಬೊಂಬಾಟ್ ಜೋಡಿ ಮತ್ತು ಫ್ಯಾಷನ್ ಶೋ, ಸಂಜೆ 6.30ಕ್ಕೆ ದಾಸರಹಳ್ಳಿ ಸಾಧಕರಿಗೆ ಸನ್ಮಾನ, ಸಂಜೆ 7.30ಕ್ಕೆ ಮಿಮಿಕ್ರಿ ಕಾರ್ಯಕ್ರಮ- ಮಿಮಿಕ್ರಿ ಸಾಗರ ತುರುವೆಕರೆ ಅವರಿಂದ, 8ಕ್ಕೆ ಮ್ಯೂಸಿಕಲ್ ನೈಟ್ಸ್- ರಾಗ ಮತ್ತು ತಂಡದಿಂದ, 9ಕ್ಕೆ ನೃತ್ಯ ಮತ್ತು ಮನರಂಜನಾ ಕಾರ್ಯಕ್ರಮಗಳು.