ಕನ್ನಡಪ್ರಭ ವಾರ್ತೆ ಮೈಸೂರು
ಸುಬೋಧ ರಾಮರಾಮಯರು ರಚಿಸಿರುವ ‘ಶ್ರೀಮದ್ಭಾಗವತ ಕಥಾಸಾರ’ ಗದ್ಯಗ್ರಂಥವನ್ನು ಆಕಾರವಾಗಿಟ್ಟುಕೊಂಡು ‘ಕಾವ್ಯಭಾಗವತ’ ಎಂಬ ಪದ್ಯರೂಪದ ಕೃತಿಯನ್ನು ಹೊರತಂದಿದ್ದಾರೆ.
ವ್ಯಾಸಮುನಿಗಳ ಅಷ್ಟಾದಶಪುರಾಣಗಳ ಪೈಕಿ ಅತ್ಯಂತ ಶ್ರೇಷ್ಠವಾದ ಭಾಗವತ ಮಹಾಪುರಾಣವನ್ನು ತಿರುಳ್ಗನ್ನಡದ ಮುಕ್ತಛಂದಸ್ಸು ಎನ್ನಬಹುದಾದ ಪದ್ಯಶೈಲಿಯಲ್ಲಿ ಅವರು ರಚಿಸಿರುವುದು ವಿಶೇಷ. ವ್ಯಾಸಮುನಿಗಳ ಭಾಗವತ ಮಹಾಪುರಾಣ 12 ಸ್ಕಂದ, 384 ಅಧ್ಯಾಯ,18 ಸಾವಿರ ಶ್ಲೋಕಗಳಿಂದ ಕೂಡಿದೆ. ಇದನ್ನು ಆನಂದ ಅವರ ಚಿಕ್ಕತಾತ ಸುಬೋಧ ರಾಮರಾಯರು ‘ಶ್ರೀಮದ್ಭಾಗವತ ಕಥಾಸಾರ’ ಎಂಬ ಶೀರ್ಷಿಕೆಯಲ್ಲಿ ಸರಳಗನ್ನಡ ಗದ್ಯ ರಚಿಸಿದ್ದಾರೆ. 12 ಸ್ಕಂದಗಳನ್ನು ಯಥಾವತ್ತಾಗಿ ಇರಿಸಿಕೊಂಡು 55 ಅಧ್ಯಾಯಗಳಲ್ಲಿ ಈ ಗ್ರಂಥ ರಚಿಸಲಾಗಿದೆ. ಆನಂದ ಅವರು 125 ಪದ್ಯಗಳನ್ನು ಸಚಿತ್ರವಾಗಿ ಪ್ರಕಟಿಸಿದ್ದಾರೆ.ಭಗವತ್ ಅವತಾರ, ಗುರುಪುತ್ರ, ಭೀಷ್ಮ ನಿರ್ಯಾಣ, ಅಂಧ ಧೃತರಾಷ್ಟ್ರ, ಕೃಷ್ಣನಿರ್ಗಮನ ಕಲ್ಕ್ಯಾಗಮನ, ಸೃಷ್ಟಿ ರಹಸ್ಯ, ವಿಧುರ, ಭಾಗವತ ತತ್ತ್ವ, ಹಿರಣಾಕ್ಷ, ಕಪಿಲ, ದಾಕ್ಷಾಯಿಣಿ, ದೈವಕಾರ್ಯ, ಧ್ರುವ, ಮೇನನ ಪೃಥು, ಪುರಂಜನೋಪಖ್ಯಾನ, ಪ್ರಿಯವ್ರತ, ಋಷಭದೇವ, ಪಶುಮೋಹ, ಆತ್ಮತತ್ತ್ವ, ಭರತ, ಜಡಭರತ, ಸ್ವರ್ಗ- ನರಕ, ಅಜಾಮಿಳ, ದೇವೇಂದ್ರ, ವೃತ್ರಾಸುರ, ಮೋಕ್ಷ ಮಾರ್ಗ, ಜಯವಿಜಯ, ಪ್ರಹ್ಲಾದ ಚರಿತ್ರೆ, ವರ್ಣಾಶ್ರಮ ಧರ್ಮ, ಸಮುದ್ರಮಥನ, ಬಲಿ, ಬಲಿ- ವಾಮನ, ಮತ್ಸಾವತಾರಾ, ವೈವಸ್ವತ ಮನುವಂಶ ಚರಿತೆ, ಅಂಬರೀಶ, ಸೂರ್ಯವಂಶ ಕಥಾ, ಶ್ರೀರಾಮ ಕಥಾ, ಪರಶುರಾಮ, ಯಯಾತಿ, ರಂತಿದೇವ ಚರಿತೆ, ಕೌರವ- ಪಾಂಡವರು, ಶ್ರೀಕೃಷ್ಣ ಕಥೆ, ಶ್ರೀಕೃಷ್ಣ- ವಸುದೇವ- ದೇವಕಿ, ದುರ್ಗಾವತಾರ, ಗೋಕಲದಿ ಜನ್ಮೋತ್ಸವ, ಪೂತನಾ ವಧಾ, ಶ್ರೀಕೃಷ್ಣ ಬಾಲಲೀಲೆ, ಗೋಕುಲ ನಿರ್ಗಮನ, ವತ್ತಾಸುರ, ಬಕಾಸುರ ವಧೆ, ಬ್ರಹ್ಮಮಾಯೆಯ ಕೃಷ್ಣಮಾಯೆ, ಧೇನುಕಾಸುರ ವಧೆ, ಕಾಳಿಂಗ ಮರ್ಧನ, ಗೋಪಿಯರ ವಸ್ತ್ರಾಪರಣ, ಬ್ರಾಹ್ಮಣ ಸ್ತ್ರೀ ಹರಿಭಕ್ತಿ, ಗೋವರ್ಧನೋದ್ದಾರ, ಕೃಷ್ಣ ಗೋಪಿಯರ ರಾಸಕ್ರೀಡೆ, ಶಂಖಚೂಡ, ವೃಷಭಾಸುರ ವಧಾ, ಅಕ್ರೂರ, ಕಂಸ ವಧೆ, ಕೃಷ್ಣಾನುಗ್ರಹ ಪರಿ, ಜರಾಸಂಧ, ರುಕ್ಮಿಣಿ, ಪ್ರದ್ಯುಮ್ನ ಸ್ಯಮಂತಕೋಪಾಖ್ಯಾನ, ಶತಧನ್ವ ವಧಾ, ಶ್ರೀಕೃಷ್ಣ ಪಾಣಿಗ್ರಹಣ ಪರ್ವ, ನರಕಾಸುರ ವಧಾ, ಉಷಾ- ಅನಿರುದ್ಧರ ಕಲ್ಯಾಣ- ಬಾಣಾಸುರ ಯುದ್ಧ, ನೃಗೋಪಖ್ಯಾನ,
ಮೈಸೂರು ಸಾಹಿತ್ಯ ದಾಸೋಹ ಈ ಕೃತಿಯನ್ನು ಪ್ರಕಟಿಸಿದ್ದು, ಖ್ಯಾತ ವಿದ್ವಾಂಸ ಡಾ.ಕೆ.ಅನಂತರಾಮು ಮುನ್ನುಡಿ, ಬಿ.ಹೇಮಲತಾ ಬೆನ್ನುಡಿ ಬರೆದಿದ್ದಾರೆ. ಆಸಕ್ತರು ಎಂ.ಆರ್. ಆನಂದ, ಮೊ. 99860 02632 ಸಂಪರ್ಕಿಸಬಹುದು.