ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕೆಆರ್‌ಎಸ್, ಸಂಗೀತ ಕಾರಂಜಿ

KannadaprabhaNewsNetwork | Published : Oct 17, 2023 12:45 AM

ಸಾರಾಂಶ

ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ತಾಲೂಕಿನ ಕೆಆರ್‌ಎಸ್ ಬೃಂದಾವನ ಗಾರ್ಡನ್ ಹಾಗೂ ಸಂಗೀತ ಕಾರಂಜಿಯ ವಿಶೇಷ ವಿದ್ಯುತ್ ದೀಪಾಲಂಕಾರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ತಾಲೂಕಿನ ಕೆಆರ್‌ಎಸ್ ಬೃಂದಾವನ ಗಾರ್ಡನ್ ಹಾಗೂ ಸಂಗೀತ ಕಾರಂಜಿಯ ವಿಶೇಷ ವಿದ್ಯುತ್ ದೀಪಾಲಂಕಾರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸುಮಾರು 1.8 ಕೋಟಿ ರು. ವೆಚ್ಚದಲ್ಲಿ ನವೀಕರಿಸಿರುವ ವಿದ್ಯುತ್ ದೀಪಾಲಂಕಾರ ಹಾಗೂ ಸಂಗೀತ ಕಾರಂಜಿಗೆ ಭಾನುವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಂದ ಚಾಲನೆ ದೊರೆತು ವಿದ್ಯುತ್ ದೀಪಾಲಂಕಾರವು ನೋಡುಗರನ್ನು ಆಕರ್ಷಿಸಿ, ಸಂಗೀತ ಕಾರಂಜಿಯಲ್ಲಿನ ವಿಶೇಷ ತಂತ್ರಜ್ಞಾನಕ್ಕೆ ಪ್ರವಾಸಿಗರು ತಲೆದೂಗುವಂತೆ ಮಾಡಿದೆ. ಕಳೆದ ಕೆಲವು ತಿಂಗಳಿಲಿಂದ ಜನಾಕರ್ಷಣೆಯನ್ನು ಕಳೆದುಕೊಂಡಿದ್ದ, ಬೃಂದಾವನ ಗಾರ್ಡನ್ ದೀಪಾಲಂಕಾರ ಹಾಗೂ ಸಂಗೀತ ಕಾರಂಜಿ ಇದೀಗ ಅತ್ಯಾಕರ್ಷಣೀಯ ಕೇಂದ್ರ ಬಿಂದುವಾಗಿದೆ. -------------- 16ಕೆಎಂಎನ್ ಡಿ27,28,29 ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಕೆಆರ್‌ಎಸ್ ಬೃಂದಾವನ ಗಾರ್ಡನ್ ಹಾಗೂ ಸಂಗೀತ ಕಾರಂಜಿಯ ವಿಶೇಷ ವಿದ್ಯುತ್ ದೀಪಾಲಂಕಾರ ಕಂಗೊಳಿಸುತ್ತಿರುವುದು.

Share this article