ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ

KannadaprabhaNewsNetwork |  
Published : Dec 20, 2023, 01:15 AM IST
ನೇಣು ಬಿಗಿದು ವಿದ್ಯಾರ್ಥಿನಿ ಆತ್ಮತ್ಯೆ | Kannada Prabha

ಸಾರಾಂಶ

ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ, ಮೈಸೂರುಮದುವೆ ನಿಶ್ಚಿತಾರ್ಥವಾದ ನಂತರ ವರದಕ್ಷಿಗಾಗಿ ಪೀಡಿಸಿದ ಹಿನ್ನಲೆ ಮನನೊಂದ ಕಾನೂನು ವಿಧ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮದುವೆ ನಿಶ್ಚಿತಾರ್ಥವಾದ ನಂತರ ವರದಕ್ಷಿಗಾಗಿ ಪೀಡಿಸಿದ ಹಿನ್ನಲೆ ಮನನೊಂದ ಕಾನೂನು ವಿಧ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿದೆ.

ತಮಿಳುನಾಡು ನೀಲಗಿರಿ ಮೂಲದ ಕವೀಶ (21) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಇವರು ಖಾಸಗಿ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದು, ಊಟಿ ನಿವಾಸಿ ಕಿರಣ್ ಎಂಬವರನ್ನು ಪ್ರೀತಿಸುತ್ತಿದ್ದರು. ಈ ವಿಚಾರ ಎರಡು ಮನೆಯವರಿಗೆ ಗೊತ್ತಾಗಿ, ಪೊಷಕರನ್ನ ಒಪ್ಪಿಸಿ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ನಿಶ್ಚಿತಾರ್ಥದ ನಂತರ ಕಿರಣ್ ವರದಕ್ಷಿಣೆಯಾಗಿ ಕಾರು ಹಾಗೂ ಚಿನ್ನ ನೀಡಬೇಕೆಂದು ಪೀಡಿಸಿದ್ದಾನೆ. ಇಲ್ಲದಿದ್ದಲ್ಲಿ ಮದುವೆ ನಿಲ್ಲಿಸುವುದಾಗಿ ಬೆದರಿಸಿದ್ದಾನೆ. ಇದರಿಂದಾಗಿ ಮನನೊಂದ ಕವೀಶ ತಾನು ತಂಗಿದ್ದ ಹಾಸ್ಟೆಲ್ ನಲ್ಲಿ ನೇಣಿಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಕಿರಣ್ ಹಾಗೂ ಆತನ ಪೋಷಕರ ವಿರುದ್ಧ ಕ್ರಮ ಜರುಗಿಸುವಂತೆ ಕವೀಶ ಪೋಷಕರು ದೂರು ನೀಡಿದ್ದಾರೆ.

ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದೆ.

PREV

Recommended Stories

ಬೆಂಗಳೂರು ನಗರದ 10 ಹೆರಿಗೆ ಆಸ್ಪತ್ರೆಗಳು ಬಂದ್‌: ಸಾರ್ವಜನಿಕರು ಪರದಾಟ
ಸಮಾಜ ಶುದ್ಧೀಕರಣಕ್ಕೆ ಅಧ್ಯಾತ್ಮ ಅಗತ್ಯ: ಡಾ.ಸಿ.ಎನ್‌.ಮಂಜುನಾಥ್‌