ತಿರುಪತಿ: ಇಲ್ಲಿನ ತಿರುಮಲ ವೆಂಕಟೇಶ್ವರ ದೇಗುಲಕ್ಕೆ ಹೋಗುವ ಕಾಲು ದಾರಿಯಲ್ಲಿ ಮತ್ತೆ ಚಿರತೆ, ಕರಡಿ ಪ್ರತ್ಯಕ್ಷವಾಗಿದೆ. ಇದರಿಂದಾಗಿ ಜನರಿಗೆ ಓಡಾಡುವಾಗಿ ಅತಿ ಎಚ್ಚರಿಕೆಯಿಂದ ಇರಲು ಟಿಟಿಡಿ ತಿಳಿಸಿದೆ. ಅ.14ರಿಂದ 27ರವರೆಗೆ ಇಲ್ಲಿನ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ದೇಗುಲ ಹಾಗೂ ಅಲಿಪಿರಿ ಬಳಿ ಚಿರತೆ ಹಾಗೂ ಕರಡಿ ಸಂಚರಿಸಿದ್ದು, ಇಲ್ಲಿನ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಕೆಲ ದಿನಗಳ ಹಿಂದಷ್ಟೇ ಚಿರತೆಯೊಂದು ಬಾಲಕಿಯನ್ನು ಹೊತ್ತೊಯ್ದು ಕೊಂದು ಹಾಕಿದ್ದ ಕಾರಣ ಈ ಬಾರಿ ಭಕ್ತಾದಿಗಳಿಗೆ ಸಂಚರಿಸುವಾಗ ಬಡಿಗೆ ಹಿಡಿದು, ಮಕ್ಕಳನ್ನು ಒಂಟಿಯಾಗಿ ಬಿಟ್ಟು ತೆರಳದಂತೆ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಸೂಚನೆ ನೀಡಿದೆ.