ಬೆಂಗಳೂರು : ದೇಶದ ಅಗ್ರಗಣ್ಯ ಟ್ರ್ಯಾಕ್ಟರ್ ಬ್ರ್ಯಾಂಡ್ ಆಗಿರುವ ‘ಮಹೀಂದ್ರ ಟ್ರ್ಯಾಕ್ಟರ್ಸ್’, ತನ್ನ ಬಹುನಿರೀಕ್ಷಿತ ಓಜಾ 2130 ಸರಣಿಯ ಟ್ರ್ಯಾಕ್ಟರ್‌ಗಳ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲು ನಿರ್ಧರಿಸಿದೆ. ಮಾರುಕಟ್ಟೆಯಲ್ಲಿ ಈ ಆಧುನಿಕ ಟ್ರ್ಯಾಕ್ಟರ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕಂಪನಿಯು ಈ ಕ್ರಮ ಕೈಗೊಂಡಿದೆ.
ಓಜಾ 2130 ಸರಣಿಯು ಕೇವಲ ಯಂತ್ರವಲ್ಲ, ಅದು ರೈತರ ಉತ್ಪಾದಕತೆಯನ್ನು ಹೆಚ್ಚಿಸುವ ಆಧುನಿಕ ಸಾಧನವಾಗಿದೆ. ಈ ಸರಣಿಯಲ್ಲಿ ಮುಖ್ಯವಾಗಿ ಮೂರು ಮಾದರಿಗಳು ಲಭ್ಯವಿವೆ:
1. ಓಜಾ 2130 - ಪ್ರೋಜಾ: ಸರ್ವತೋಮುಖ ಕೃಷಿ ಕೆಲಸಗಳಿಗೆ ಸೂಕ್ತ.2. ಓಜಾ 2130 ಲಾರ್ಜ್ ಟೈರ್: ಕಠಿಣ ಭೂಪ್ರದೇಶಗಳಲ್ಲಿ ಹೆಚ್ಚಿನ ಸ್ಥಿರತೆ ನೀಡುತ್ತದೆ.
3. ಓಜಾ 2130 ನ್ಯಾರೊ ಟ್ರ್ಯಾಕ್: ಕಬ್ಬು, ಹತ್ತಿ ಮತ್ತು ದ್ರಾಕ್ಷಿ ತೋಟಗಳಂತಹ ಕಿರಿದಾದ ಜಾಗಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
ಈ ಸರಣಿಯ ಎಲ್ಲಾ ಟ್ರ್ಯಾಕ್ಟರ್‌ಗಳು ಫೋರ್ ವೀಲ್ ಡ್ರೈವ್ ಸೌಲಭ್ಯವನ್ನು ಹೊಂದಿದ್ದು, ಹೂಳುಗದ್ದೆ ಅಥವಾ ಗುಡ್ಡಗಾಡು ಪ್ರದೇಶಗಳಲ್ಲಿಯೂ ಅಪ್ರತಿಮ ಕಾರ್ಯಕ್ಷಮತೆ ತೋರುತ್ತವೆ.
ಈ ಟ್ರ್ಯಾಕ್ಟರ್‌ಗಳಲ್ಲಿ ಶಕ್ತಿಯುತವಾದ ಮೂರು ಸಿಲಿಂಡರ್‌ಗಳ ಡಿಐ ಎಂಜಿನ್ ಅಳವಡಿಸಲಾಗಿದ್ದು, ಇದು 83.7 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಿಂದಾಗಿ ಭಾರೀ ಕೆಲಸಗಳನ್ನು ಕಡಿಮೆ ಇಂಧನ ಬಳಕೆಯಲ್ಲಿ ಮಾಡುವುದು ಸಾಧ್ಯವಾಗುತ್ತದೆ. ರೈತರ ಸೌಕರ್ಯಕ್ಕಾಗಿ ಮೊದಲ ಬಾರಿಗೆ ಟಿಲ್ಟ್ ಎಂಡ್ ಟೆಲಿಸ್ಕೋಪಿಕ್ ಸ್ಟೇರಿಂಗ್ ನೀಡಲಾಗಿದ್ದು, ಇದು ದೀರ್ಘಕಾಲದ ಕೆಲಸದ ಸಂದರ್ಭದಲ್ಲಿ ದಣಿವನ್ನು ಕಡಿಮೆ ಮಾಡುತ್ತದೆ.
ತೋಟಗಾರಿಕೆಗೆ ವರದಾನ
ನ್ಯಾರೊ ಟ್ರ್ಯಾಕ್ ಮಾದರಿಯು ಕೇವಲ 914 ಎಂಎಂ ಅಗಲವಿದ್ದು, ಕಿರಿದಾದ ಸಾಲುಗಳ ನಡುವೆ ಸುಲಭವಾಗಿ ಚಲಿಸುತ್ತದೆ. ಇದರಲ್ಲಿರುವ ಎಫ್/ಆರ್ ಶಟಲ್ ತಂತ್ರಜ್ಞಾನವು ಚಾಲಕರಿಗೆ ಪದೇ ಪದೇ ದಿಕ್ಕು ಬದಲಾಯಿಸಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ಅತಿ ಕಡಿಮೆ ವೇಗದಲ್ಲಿ ಕೆಲಸ ಮಾಡಲು ಸಹಾಯ ಮಾಡುವ ‘ಕ್ರೀಪರ್ ಮೋಡ್’ ಬಿತ್ತನೆ ಕೆಲಸದಲ್ಲಿ ಹೆಚ್ಚಿನ ನಿಖರತೆ ನೀಡುತ್ತದೆ.
ಕಂಪನಿಯ ಭರವಸೆ
ಮಹೀಂದ್ರ ಟ್ರ್ಯಾಕ್ಟರ್ಸ್‌ನ ರಾಷ್ಟ್ರೀಯ ವಹಿವಾಟು ಮುಖ್ಯಸ್ಥ ಪರೀಕ್ಷಿತ್ ಘೋಷ್ ಮಾತನಾಡಿ, ‘ಓಜಾ ಸರಣಿಯು 21-30 ಎಚ್‌ಪಿ ವರ್ಗದಲ್ಲಿ ಮಹೀಂದ್ರಾದ ಮುಂಚೂಣಿ ಸ್ಥಾನವನ್ನು ದೃಢಪಡಿಸಿದೆ. ಆಧುನಿಕ ತಂತ್ರಜ್ಞಾನದ ಮೂಲಕ ರೈತರ ಆದಾಯ ಹೆಚ್ಚಿಸುವುದೇ ನಮ್ಮ ಗುರಿಯಾಗಿದೆ. ಆಸಕ್ತ ರೈತರು ತಮ್ಮ ಹತ್ತಿರದ ಮಹೀಂದ್ರಾ ಶೋರೂಮ್‌ಗಳಿಗೆ ಭೇಟಿ ನೀಡಿ ತಮಗೆ ಬೇಕಾದಂತೆ ಟ್ರ್ಯಾಕ್ಟರ್‌ಗಳನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ’ ಎಂದು ಹೇಳಿದ್ದಾರೆ.
ಈ ಟ್ರ್ಯಾಕ್ಟರ್‌ಗಳಿಗೆ 6 ವರ್ಷಗಳ ವಾರಂಟಿ ಇದ್ದು, ದೇಶದಾದ್ಯಂತ ಇರುವ ಮಹೀಂದ್ರ ಡೀಲರ್‌ಗಳ ಬಳಿ ಇವು ಲಭ್ಯವಿವೆ. ಕಡಿಮೆ ನಿರ್ವಹಣಾ ವೆಚ್ಚ ಮತ್ತು ಹೆಚ್ಚಿನ ಬಾಳಿಕೆಯಿಂದಾಗಿ ಓಜಾ 2130 ಸರಣಿಯು ಭಾರತೀಯ ಕೃಷಿ ಭೂಮಿಯಲ್ಲಿ ಹೊಸ ಮನ್ವಂತರ ಸೃಷ್ಟಿಸುವ ನಿರೀಕ್ಷೆಯಿದೆ.