ಜೀವಶಾಸ್ತ್ರ ಓದದವರೂ ಎಂಬಿಬಿಎಸ್‌ ಮಾಡಬಹುದು

KannadaprabhaNewsNetwork |  
Published : Nov 28, 2023, 12:30 AM IST

ಸಾರಾಂಶ

ನವದೆಹಲಿ: ವೈದ್ಯಕೀಯ ವಿಜ್ಞಾನ ವ್ಯಾಸಂಗ ಮಾಡಲು ಪ್ರವೇಶ ಪರೀಕ್ಷೆಯಾಗಿರುವ ನೀಟ್ ಪರೀಕ್ಷೆಗೆ ಹಾಜರಾಗಲು ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮಾನದಂಡಗಳನ್ನು ಬದಲಾಯಿಸಿದ್ದು, ಜೀವಶಾಸ್ತ್ರವನ್ನು ಮುಖ್ಯ ವಿಷಯವಾಗಿ ವ್ಯಾಸಂಗ ಮಾಡಿಲ್ಲದ ವಿದ್ಯಾರ್ಥಿಗಳೂ ಪರೀಕ್ಷೆಯಲ್ಲಿ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.

ನೂತನ ಶಿಕ್ಷಣ ನೀತಿಯ ಆಶಯ ಈಡೇರಿಸುವತ್ತ ದಿಟ್ಟ ಹೆಜ್ಜೆ

12ನೇ ತರಗತಿಯಲ್ಲಿ ಪಿಸಿಎಂಬಿಯಲ್ಲಿ ಒಂದನ್ನು ಐಚ್ಛಿಕವಾಗಿ ತೆಗೆದುಕೊಂಡಿದ್ದರೂ ಅರ್ಹತೆವಿದೇಶದಲ್ಲಿ ವ್ಯಾಸಂಗ ಮಾಡಲೂ ಅರ್ಹತೆ ನವದೆಹಲಿ: ವೈದ್ಯಕೀಯ ವಿಜ್ಞಾನ ವ್ಯಾಸಂಗ ಮಾಡಲು ಪ್ರವೇಶ ಪರೀಕ್ಷೆಯಾಗಿರುವ ನೀಟ್ ಪರೀಕ್ಷೆಗೆ ಹಾಜರಾಗಲು ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮಾನದಂಡಗಳನ್ನು ಬದಲಾಯಿಸಿದ್ದು, ಜೀವಶಾಸ್ತ್ರವನ್ನು ಮುಖ್ಯ ವಿಷಯವಾಗಿ ವ್ಯಾಸಂಗ ಮಾಡಿಲ್ಲದ ವಿದ್ಯಾರ್ಥಿಗಳೂ ಪರೀಕ್ಷೆಯಲ್ಲಿ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಈ ಆದೇಶವು 2024ರ ನೀಟ್‌ ಪರೀಕ್ಷೆಯಿಂದ ಜಾರಿಗೆ ಬರಲಿದೆ. ಅದರನ್ವಯ 12ನೇ ತರಗತಿಯಲ್ಲಿ (ಪಿಯುಸಿ-2) ಅಥವಾ ನಂತರ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ಹಾಗೂ ಜೈವಿಕ ತಂತ್ರಜ್ಞಾನದ ಪೈಕಿ ಕನಿಷ್ಠ ಒಂದು ವಿಷಯವನ್ನು ಐಚ್ಛಿಕವಾಗಿ ವ್ಯಾಸಂಗ ಮಾಡಿದವರೆಲ್ಲರಿಗೂ ನೀಟ್‌ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಅರ್ಥಾತ್‌ ಜೀವಶಾಸ್ತ್ರ ಓದದೇ ಕೇವಲ ಪಿಸಿಎಂ ತೆಗೆದುಕೊಂಡವರೂ ಎಂಬಿಬಿಎಸ್‌ಗೆ ಅವಕಾಶ ಸಿಗಲಿದೆ.

ಈ ಮೂಲಕ ನೂತನ ಶಿಕ್ಷಣ ನೀತಿಯ ಮೂಲ ಆಶಯವಾದ ಪಠ್ಯವಿಷಯದಲ್ಲಿ ಮುಕ್ತ ಸ್ವಾತಂತ್ರ್ಯ ಹೊಂದುವಿಕೆಯನ್ನು ವಿದ್ಯಾರ್ಥಿಗಳಿಗೆ ಪೂರೈಸುವಲ್ಲಿ ರಾಷ್ಟ್ರೀಯ ವೈದ್ಯಕೀಯ ಮಂಡಳಿ ದಿಟ್ಟ ಹೆಜ್ಜೆ ಇಟ್ಟಂತಾಗಿದೆ.ಈವರೆಗೂ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಯು ಜೀವಶಾಸ್ತ್ರ ವಿಷಯವನ್ನು 12 ನೇ ತರಗತಿಯಲ್ಲಿ ಕಡ್ಡಾಯವಾಗಿ ಪೂರ್ಣಾವಧಿ ವಿಷಯವಾಗಿ ವ್ಯಾಸಂಗ ಮಾಡುವ ಜೊತೆಗೆ ಅದರಲ್ಲಿ ಪ್ರಾಯೋಗಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕಿತ್ತು.

PREV

Recommended Stories

ಇರಾನ್‌ ಯುದ್ಧ ನಿಲ್ಲದಿದ್ರೆ ಭಾರತದ ಆರ್ಥಿಕತೆಗೆ ಪೆಟ್ಟು- ಸಂಕಷ್ಟದ ಸ್ಥಿತಿ
ಹೋಳಿ ಹುಣ್ಣಿಮೆಯಂದು ಕೇತುಗ್ರಸ್ತ ರಕ್ತ ಚಂದ್ರಗ್ರಹಣ: ನಗರದ ವಿವಿಧ ದೇಗುಲಗಳಲ್ಲಿ ಶುದ್ಧೀಕರಣ, ವಿಶೇಷ ಪೂಜೆ