ಕನ್ನಡಪ್ರಭ ವಾರ್ತೆ ಮೈಸೂರು
ಜಾತಿ- ಮತ ತಾರತಮ್ಯವಿಲ್ಲದ ಸಮಸಮಾಜ ನಿರ್ಮಾಣ ಕವಿಯ ಕನಸು. ಹೀಗಾಗಿ ಬಹುತೇಕ ಕವಿತೆಗಳು ಸ್ವಾತಂತ್ರ್ಯ,ಸಮಾನತೆ, ಸಾಮಾಜಿಕ ನ್ಯಾಯದ ಆಶಯ ಬಿಂಬಿಸುತ್ತವೆ.
ಈ ಕವನ ಸಂಕಲನಗಳ ಶೀರ್ಷಿಕೆಗಳೇ ವಿಶಿಷ್ಟವಾಗಿವೆ. ಕ್ಯಾತಯ್ಯ ಕವಿಯ ಪೂರ್ವಿಕರು. ಹೀಗಾಗಿ ಕ್ಯಾತಯ್ಯನ ಕವನಗಳು ಎಂಬ ಶೀರ್ಷಿಕೆಯಾದರೆ ವಿಪ್ರಚಂದ- ಗುರುವೃಂದದ ಡಾ.ಬಿ.ಜೆ. ವಿಜಯಕುಮಾರ್, ಪ್ರೊ.ಕೆ.ಎಂ. ಪ್ರಸನ್ನಕುಮಾರ್ ಹಾಗೂ ಡಾ.ಪಿ. ಚಂದ್ರಶೇಖರ್ ಹೆಸರುಗಳನ್ನು ಸಂಕ್ಷಿಪ್ತಗೊಳಿಸಲಾಗಿದೆ. ಮೊದಲ ಸಂಕಲನದಲ್ಲಿ 69, ಎರಡನೇ ಸಂಕಲನದಲ್ಲಿ 33 ಕವನಗಳಿವೆ.ಮೊದಲ ಸಂಕಲನದಲ್ಲಿ ಕನ್ನಡ, ಬುದ್ಧ, ಬಸವ, ಅಂಬೇಡ್ಕರ್, ಕನಕ, ಕುವೆಂಪು, ಅಪ್ಪು, ಮೈಸೂರು, ಮರ, ಸೀತೆ, ದ್ರೌಪದಿ ಮೊದಲಾದವರ ಕುರಿತ ಕವನಗಳಿವೆ.
ಎರಡನೇ ಸಂಕಲನದಲ್ಲಿ ಜಾತಿ, ಪ್ರೀತಿ, ನೀತಿ ತಿಳಿಸುವ, ಸಮಾನತೆ, ವೈಚಾರಿಕತೆ ಮೂಡಿಸುವ ಕವನಗಳೇ ಹೆಚ್ಚಿವೆ. ಇಲ್ಲಿ ಕೂಡ ಟಿಫನ್ ಬಾಕ್ಸ್ ಕವನ ಕಾಲೇಜು ದಿನಗಳನ್ನು ನೆನಪಿಸುವುದರ ಜೊತೆಗೆ ನಕ್ಕು ನಲಿಸುತ್ತದೆ. ಒಟ್ಟಾರೆ ಗ್ರಾಮ್ಯ ಭಾಷೆ, ಹಳಗನ್ನಡ ಬಳಸಿ, ವಿಭಿನ್ನ ವಸ್ತುಗಳನ್ನಿಟ್ಟು ಕವನಗಳನ್ನು ರಚಿಸಿರುವ ರಾಹುಲ್ ಭರವಸೆ ಮೂಡಿಸಿದ್ದಾರೆ.
ದಮ್ಮದಾತ
ನನ್ನಾಸೆ ಮನವ ಕಿತ್ತೊಗೆಯಬಲ್ಲ
ಒಲವ ಚಿಲುಮೆಯ ತಾ- ತುಂಬಬಲ್ಲ
ಮಾಡಿದ್ದುದು ತನಗಲ್ಲ
ತನ್ನ ಬಾಳನ್ನೇ ಬೇಯಿಸಿ
ಕೂಡಲಸಂಗಮನಿಗುಣಬಡಿಸಿಬದುಕಿನ ಬಸವನಿಗೆ ಶರಣು ಶರಣಯ್ಯ,,,
ಓ ಜೈ ಭೀಮ..ಹೆದರುತಿಹರ್ ನಿಮ್ಮ ನುಡಿಗಳಿಪ್ಪ ಕೇಳಿ
ಅಡಿಗಡಿಗೆ ಒರಳಿ ಕರುಳು ಕೊರಳು ಬಾಗಿಉರುಳಿ ಸಾಷ್ಟಾಂಗದಿ ಕರವೆತ್ತಿ ನಮಿಪತಿಹರು
ಮುಟ್ಟಲಿರಲಿ ನೋಡಲ್ ಒಲ್ಲನೆಂದ ಜನರು...