10ರಂದು ರಥೋತ್ಸವ, ಅಗ್ನಿ ಕೊಂಡೋತ್ಸವ

KannadaprabhaNewsNetwork | Published : Oct 8, 2023 12:01 AM

ಸಾರಾಂಶ

ಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರಸ್ವಾಮಿ ರಥೋತ್ಸವ ಹಾಗೂ ಅಗ್ನಿ ಕೊಂಡೋತ್ಸವವು ಅ.10 ರಂದು ನಡೆಯಲಿದೆ. ರಥೋತ್ಸವದ ಹಿನ್ನಲೆಯಲ್ಲಿ ಕಳೆದ 13 ದಿನಗಳಿಂದ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ರಥೋತ್ಸವದ ಪ್ರಯುಕ್ತ ಕಳೆದ ಸೆ.25ರಿಂದ ಅ.7ರ ವರೆಗೆ ಅಂಕುರಾರ್ಪಣೆ, ಧ್ವಜಾರೋಹಣ, ಕಲಶಸ್ಥಾಪನೆ, ಕೌತುಕಧಾರಣ, ನಂದಿವಾಹನ, ನವಿಲುವಾಹನ, ತ್ರಿಪುರ ಸಂಹಾರ ಲೀಲೆ, ಪಲ್ಲಕಿ ಉತ್ಸವ, ಚಂದ್ರಮಂಡಲೋತ್ಸವ ಸೇವೆ ಸೇರಿದಂತೆ ಹಲವು ಬಗೆಯ ಧಾರ್ಮಿಕ ಕಾರ್ಯಗಳು ನಡೆದವು. ಅ.8ರ ಭಾನುವಾರ ದಕ್ಷಬ್ರಹ್ಮ ಸಂಹಾರ ಸೇವೆ. ಅ.9ರ ಸೋಮವಾರ ಹೋಮ ಹವನಾದಿ ಪೂಜಾ ಕೈಂಕರ್ಯಗಳು ನಡೆಯಲಿವೆ. ಅ.10ರ ಮಂಗಳವಾರ ರಥೋತ್ಸವ ಹಾಗೂ ಅಗ್ನಿ ಕೊಂಡೋತ್ಸವ ನಡೆಯಲಿದೆ.
ನಾಗಮಂಗಲ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರಸ್ವಾಮಿ ರಥೋತ್ಸವ ಹಾಗೂ ಅಗ್ನಿ ಕೊಂಡೋತ್ಸವವು ಅ.10 ರಂದು ನಡೆಯಲಿದೆ. ರಥೋತ್ಸವದ ಹಿನ್ನಲೆಯಲ್ಲಿ ಕಳೆದ 13 ದಿನಗಳಿಂದ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ರಥೋತ್ಸವದ ಪ್ರಯುಕ್ತ ಕಳೆದ ಸೆ.25ರಿಂದ ಅ.7ರ ವರೆಗೆ ಅಂಕುರಾರ್ಪಣೆ, ಧ್ವಜಾರೋಹಣ, ಕಲಶಸ್ಥಾಪನೆ, ಕೌತುಕಧಾರಣ, ನಂದಿವಾಹನ, ನವಿಲುವಾಹನ, ತ್ರಿಪುರ ಸಂಹಾರ ಲೀಲೆ, ಪಲ್ಲಕಿ ಉತ್ಸವ, ಚಂದ್ರಮಂಡಲೋತ್ಸವ ಸೇವೆ ಸೇರಿದಂತೆ ಹಲವು ಬಗೆಯ ಧಾರ್ಮಿಕ ಕಾರ್ಯಗಳು ನಡೆದವು. ಅ.8ರ ಭಾನುವಾರ ದಕ್ಷಬ್ರಹ್ಮ ಸಂಹಾರ ಸೇವೆ. ಅ.9ರ ಸೋಮವಾರ ಹೋಮ ಹವನಾದಿ ಪೂಜಾ ಕೈಂಕರ್ಯಗಳು ನಡೆಯಲಿವೆ. ಅ.10ರ ಮಂಗಳವಾರ ರಥೋತ್ಸವ ಹಾಗೂ ಅಗ್ನಿ ಕೊಂಡೋತ್ಸವ ನಡೆಯಲಿದೆ. ಜಿಲ್ಲೆ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಈ ರಥೋತ್ಸವದಲ್ಲಿ ಪಾಲ್ಗೊಳ್ಳುವರು. ಅ.11ರಂದು ಬಿಲ್ವೋತ್ಸವ, ಗಜವಾಹನೋತ್ಸವದೊಂದಿಗೆ ಭಕ್ತರ ಸೇವೆಗಳು ನಡೆಯಲಿವೆ. ಅ.12ರಂದು ಕಂಕಣ ವಿಸರ್ಜನೆ, ಅ.13ರಂದು ತೀರ್ಥಸ್ನಾನ ಮತ್ತು ಹಿತ್ತಾಳೆಯ ವೃಷಭವಾಹನೋತ್ಸವ, ಮಂದಾಸನ, ಶೇಷ, ನಂದಿ ಭೂತ, ನವಿಲು, ಅಶ್ವ, ಆನೆ ಉತ್ಸವಗಳು ರಾಜೋಪಚಾರ ಸೇವಾ ಕೈಂಕರ್ಯಗಳು ನಡೆಯಲಿವೆ. ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ಈ ಭಗವತ್ ಕಾರ್ಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ವಿಚಾರಣಾಕರ್ತರಾದ ನಾಗಮಂಗಲಯ್ಯ ಉ. ತಮ್ಮಯ್ಯ ಅವರ ಕುಟುಂಬಸ್ಥರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share this article