ವಾರಫಲ 25.5.25 ರಿಂದ 01.06.25 ರ ವರೆಗೆ

ವಾರಫಲ

25.5.25 ರಿಂದ 01.06.25 ರ ವರೆಗೆ

Follow Us

ವಾರಫಲ

25.5.25 ರಿಂದ 01.06.25 ರ ವರೆಗೆ

ಮೇಷರಾಶಿ:

ಉದ್ದೇಶಪೂರ್ವಕವಾಗಿಯೇ ಮಾಡುತ್ತೀರೋ ಅಥವಾ ಅಂಥ ಉದ್ದೇಶವೇ ಇಲ್ಲದೆ ಮಾಡುತ್ತೀರೋ ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳು ಸಿಟ್ಟು ಮಾಡಿಕೊಳ್ಳುವಂಥ ಸನ್ನಿವೇಶ ಎದುರಾಗಲಿದೆ. ಕಾರ್ಯಕ್ರಮವೊಂದರ ಖರ್ಚು ಸಿಕ್ಕಾಪಟ್ಟೆ ಹೆಚ್ಚಾಗಲಿದೆ. ಈಗ ಪ್ರತಿಷ್ಠೆಯಿಂದ ದುಬಾರಿ ವಸ್ತುಗಳನ್ನು ಖರೀದಿಸಿದ್ರೆ ನಂತರ ನಿಮ್ಮ ತುರ್ತು ವೆಚ್ಚವೊಂದಕ್ಕೆ ಹಣ ಹೊಂದಿಸುವುದಕ್ಕೆ ಪರದಾಡುವಂತೆ ಆಗಲಿದೆ.

ವೃಷಭರಾಶಿ:

ಗುರು ನಿಮಗೆ ಸದಾ ಶುಭವನ್ನು ತರುತ್ತಾನೆ.‌ ಒಳ್ಳೆಯ ಹೆಸರು ಗೌರವ ಸಂಪಾದಿಸುತ್ತೀರಿ. ರಾಹು ಈಗ ಹತ್ತನೇ ಮನೆಗೆ ಪ್ರವೇಶವಾಗಿದ್ದಾನೆ. ಹತ್ತನೇ ಮನೆ ಕುಂಭರಾಶಿ ರಾಹುವಿಗೆ ಮಿತ್ರಸ್ಥಾನ ಹಾಗಾಗಿ‌ ಯಾವುದೇ ತೊಂದರೆ ಇಲ್ಲ. ನಿಮಗೆ ಅಧಿಕ‌ ಧನಲಾಭ ಶತ್ರುಗಳಿಂದ ಬಿಡುಗಡೆ ಇದೆ. ಆಸ್ತಿ ವ್ಯಾಜ್ಯ ವಿಚಾರಗಳು ನಿಮ್ಮ ಕೈ ಮೀರುವ ಹಂತಕ್ಕೆ ಹೋಗಬಹುದು. ಈ ಬಗ್ಗೆ ಎಚ್ಚರದಲ್ಲಿ ಇರುವುದು ಒಳ್ಳೆಯದು.

ಮಿಥುನರಾಶಿ:

ಪ್ರೀತಿಯಲ್ಲಿ ಇರುವಂಥವರು ಬಹಳ ಮುಖ್ಯವಾದ ತೀರ್ಮಾನವೊಂದನ್ನು ಮಾಡುವಂತ ಕ್ಷಣ ಬರುತ್ತದೆ. ಒಂದು ವೇಳೆ ಇಷ್ಟು ಸಮಯ ನಿಮ್ಮ ಪ್ರೀತಿಯ ವಿಚಾರ ಮನೆಯಲ್ಲಿ ಗೊತ್ತಾಗಿಲ್ಲ ಅಂತಾದರೆ ಈ ದಿನ ಆ ಬಗ್ಗೆ ತಿಳಿದುಬರಲಿದೆ. ಮೂರನೇ ಮನೆಗೆ ಕೇತು ಬಂದಿರುವುದರಿಂದ ಧನಲಾಭ ಇದೆ. ದೈಹಿಕ ಶ್ರಮ ನೋವು ಕಡಿಮೆಯಾಗುತ್ತದೆ. ಮಂಡಿ ನೋವು ಕತ್ತು ಭುಜ ನೋವು ಇವೆಲ್ಲ ಕಡಿಮೆಯಾಗುತ್ತದೆ. ಖುಷಿಯಾಗಿರಿ.

ಕಟಕರಾಶಿ:

ಈಗ ನಿಮಗೆ ಅಲ್ಪಲಾಭ. ಮಿಶ್ರಫಲ. ಕೊಂಚ ಇರಿಸುಮುರಿಸಿನ‌ ಸಮಯ. 12 ನೇ ಮನೆ ಗುರು ಜಾಗ ಬದಲಾವಣೆ ತೋರಿಸುತ್ತಾನೆ. ಹತ್ತರಲ್ಲಿ ಬುಧ ಹನ್ನೊಂದನೇ ಮನೆಯಲ್ಲಿ ಸೂರ್ಯ ಶುಭಫಲಗಳನ್ನು ಕೊಡುತ್ತಾರೆ. ಹೊಸದಾದ ವಿದ್ಯೆಯೊಂದನ್ನು ಕಲಿಯುವುದಕ್ಕೆ ಮುಂದಾಗಲಿದ್ದೀರಿ.ಮರೆತೇ ಹೋಗಿದ್ದ ಸ್ನೇಹಿತ ಅಥವಾ ಸ್ನೇಹಿತೆ ಕಾಣಿಸಿಕೊಂಡು ಭವಿಷ್ಯಕ್ಕೆ ಬಹಳ ಮುಖ್ಯವೆನಿಸುವ ಸಲಹೆ ನೀಡಲಿದ್ದಾರೆ.

ಸಿಂಹರಾಶಿ:

ಸಾಮ, ದಾನ, ಭೇದ, ದಂಡ ಹೀಗೆ ಯಾವ ಉಪಾಯವನ್ನು ಅನುಸರಿಸಿದರೆ ಉತ್ತಮ ಎಂಬುದನ್ನು ತುಂಬ ವೇಗವಾಗಿ ನಿರ್ಧಾರ ಮಾಡಲಿದ್ದೀರಿ. ನೀವು ಕೂಡಿಟ್ಟುಕೊಂಡಿದ್ದ ಹಣವೊಂದು ಆ ಉದ್ದೇಶಕ್ಕೆ ಅಲ್ಲದೆ ಬೇರೆಯದಕ್ಕೆ ಬಳಸಲೇಬೇಕು ಎಂಬ ಸನ್ನಿವೇಶ ಸೃಷ್ಟಿ ಆಗಲಿದೆ. ಸಂಕಷ್ಟಗಳು ಕಾಡಿಸುತ್ತಲೇ ಇರುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ.‌ ನೌಕರಿಯಲ್ಲಿ ಬಡ್ತಿ, ಸ್ಥಾನಮಾನ ಪದವಿ ಅಧಿಕಾರ ಪ್ರಾಪ್ತಿ ಇದೆ.

ಕನ್ಯಾರಾಶಿ:

ಗುರುಬಲ ಇಲ್ಲದಿದ್ದರೂ ಬೇರೆ ಗ್ರಹಬಲಗಳು ಇದೆ. ರಾಹು ಆರನೇ ಮನೆಗೆ ಬಂದಿರುವುದು ಲಾಭಕರ. ಧನಲಾಭ. ಶತ್ರುಗಳು ದೂರವಾಗುತ್ತಾರೆ. ಶಕ್ತಿ, ಸಾಮರ್ಥ್ಯದಿಂದ ಎಲ್ಲ ಕೆಲಸಗಳಲ್ಲಿ ಜಯ ಲಭಿಸುತ್ತದೆ. ಕುಜ ಕೂಡ ಅಲ್ಪಲಾಭ ಕೊಡುತ್ತಾನೆ. ಶುಕ್ರ ರಕ್ಷಣೆ ಮಾಡುತ್ತಾನೆ. ಹೋಟೆಲ್ ವ್ಯವಹಾರ ಮಾಡುವವರಿಗೆ ಅನಿರೀಕ್ಷಿತವಾದ ನಷ್ಟ ಎದುರಾಗಬಹುದು. ಕ್ರಮೇಣ ಈ ನಷ್ಟವನ್ನು ಸರಿದೂಗಿಸುವ ಲಾಭ ಸಿಗುತ್ತದೆ.

ತುಲಾರಾಶಿ:

ನೆನೆಗುದಿಗೆ ಬಿದ್ದ ಕೆಲಸಗಳೆಲ್ಲ ಚಟುವಟಿಕೆ ಪಡೆದುಕೊಂಡು ಮುಂದೆ ಸಾಗಿದೆ. ಗುರು ಬಲ ಶನಿಬಲ ಬಂದ ಕಾರಣ ಜೀವನ ಹಗುರವಾಗಿ ಸಾಗುತ್ತಿದೆ. ಕೇತು ಲಾಭಸ್ಥಾನದಲ್ಲಿದ್ದು ನಿಮಗೆ ಶುಭಲಾಭ ತಂದುಕೊಡುತ್ತಾನೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ವಿದ್ಯಾರ್ಥಿಗಳಿಗೆ ಶುಭವಿದೆ. ಉನ್ನತ ವ್ಯಾಸಂಗಕ್ಕೆ ಅವಕಾಶವಿದೆ. ಆಸ್ತಿ‌ಖರೀದಿ ಯೋಗ ಇದೆ. ಸುಗ್ರಾಸ ಭೋಜನ ಪ್ರಾಪ್ತಿ‌ಇದೆ. ಮನಸ್ಸಿಗೆ ನೆಮ್ಮದಿ ಇದೆ.

ವೃಶ್ಚಿಕರಾಶಿ:

ಸರಾಗವಾಗಿ‌ ನಡೆಯುತ್ತಿದ್ದ ಕೆಲಸಗಳಿಗೆ ಅನಿರೀಕ್ಷಿತ ಅಡ್ಡಿ ಆತಂಕಗಳು ತಲೆದೋರುತ್ತದೆ. ನೌಕರಿಯಲ್ಲಿ‌ ಒತ್ತಡ ಮೇಲಧಿಕಾರಿಗಳ ಕಿರುಕುಳ ಇರುತ್ತದೆ. ಗುರಿ ಮುಟ್ಟಲು ಆಗದೆ ಒತ್ತಡ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ವೃಥಾ ಅಲೆದಾಟ. ಮನಸ್ಸಿಗೆ ಸಮಾಧಾನ‌ ಇಲ್ಲದ ದಿನಗಳು. ತಾಳ್ಮೆ ಇರಲಿ. ವಾರಾಂತ್ಯದಲ್ಲಿ ಹೊಸ ಮಾರ್ಗೋಪಾಯವನ್ನು ಅನುಸರಿಸಿದ್ದರ ಫಲಿತಾಂಶವನ್ನು ಕಾಣುವಂತೆ ಆಗುತ್ತದೆ. ಉತ್ಸಾಹ ಹೆಚ್ಚಲಿದೆ.

ಧನಸ್ಸುರಾಶಿ:

ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಇದು ಉತ್ತಮ ಸಮಯ. ಶೇರು ವ್ಯವಹಾರದಲ್ಲಿ ಹಣ ಹಾಕಿರುವವರಿಗೆ ಲಾಭ ಇದೆ. ಶತ್ರುಗಳು ದೂರವಾಗುತ್ತಾರೆ. ಹೊಸ ಧೈರ್ಯ ಸಾಹಸಿ ಮನೋಭಾವ ನಿಮ್ಮಲ್ಲಿ ಬರುತ್ತದೆ. ಯಾರನ್ನಾದರೂ ಎದುರಿಸಿ ನಿಮ್ಮ ಕೆಲಸ ಸಫಲ ಮಾಡಿಕೊಳ್ಳುವ ತಾಕತ್ತು ಬರುತ್ತದೆ. ವಿವಾಹಕ್ಕಾಗಿ ಕಾಯುತ್ತಿರುವವರಿಗೆ ಶುಭಸುದ್ದಿ ಇದೆ. ಹೊಸ ಕೆಲಸ ಸಿಗುವುದು ಬಡ್ತಿ ಸಿಗುವ ಸಾಧ್ಯತೆ ಇದೆ.

ಮಕರರಾಶಿ:

ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ಒತ್ತಡ ಇರುತ್ತದೆ. ಕೊನೆ ಕ್ಷಣದಲ್ಲಿ ನಿಮ್ಮ ಜೊತೆಗೆ ವ್ಯಕ್ತಿಯೊಬ್ಬರು ಸೇರಿಕೊಂಡು, ನಕಾರಾತ್ಮಕ ಆಲೋಚನೆಯನ್ನು ಬಿತ್ತಲಿದ್ದಾರೆ. ಅತಿ ಉತ್ಸಾಹದಲ್ಲಿ ನೀವೇ ಗುರಿಯನ್ನು ನಿಗದಿಪಡಿಸಿಕೊಂಡರೆ ಸಿಕ್ಕಾಪಟ್ಟೆ ಸಮಜಾಯಿಷಿಗಳನ್ನು ನೀಡುವ ಸನ್ನಿವೇಶ ಎದುರಾಗಲಿದೆ. ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ಕಣ್ಣ ಅಂದಾಜಿಗೆ ಕಾಣುವಂತೆ ಹಲವು ಸನ್ನಿವೇಶಗಳು ಇರುವುದಿಲ್ಲ.

ಕುಂಭರಾಶಿ:

ಹೊಸ ನೌಕರಿ, ವಿವಾಹ, ಬಡ್ತಿ ಮೊದಲಾದ ಶುಭಫಲಗಳು ಸಿಗುತ್ತದೆ. ಬಹಳ ದಿನಗಳಿಂದ ಕಾಯುತ್ತಿದ್ದ ಗುರುಬಲ ಬಂದಿದೆ. ಬಹಳಷ್ಟು ಒಳ್ಳೆಯ ಬದಲಾವಣೆಗಳನ್ನು ಕಾಣುವಿರಿ. ಒಂದು ಹೊಸ ದಾರಿ ಗೋಚರಿಸುತ್ತದೆ. ಬಹಳ ದಿನಗಳಿಂದ ಕಾಯುತ್ತಿದ್ದ ಅದೃಷ್ಟ ಈಗ ನಿಮ್ಮ ಕೈ ಹಿಡಿಯುತ್ತದೆ. ಕುಜನಿಂದ ಧೈರ್ಯ, ಶಕ್ತಿ ಸಿಗುತ್ತದೆ. ಬುಧ, ಶುಕ್ರ ಅನೇಕ‌ ಶುಭ ಸಂಗತಿಗಳನ್ನು ಅನುಭವಿಸುವಂತೆ ಮಾಡುತ್ತಾರೆ.

ಮೀನರಾಶಿ:

ನಿಮಗೆ ಬಹುದೊಡ್ಡ ಸಮಸ್ಯೆಗಳನ್ನು ನಿವಾರಣೆಯಾಗುತ್ತದೆ. ಆರೋಗ್ಯ ಸುಧಾರಿಸುತ್ತದೆ. ಆರನೇ ಮನೆಯಲ್ಲಿ ಕೇತು ಹಣಕಾಸಿನ ನೆರವು ಕೊಡಿಸುತ್ತಾನೆ. ಬುಧ ಸೂರ್ಯ ಸಹ ನಿಮಗೆ ಶುಭಫಲವನ್ನು ಕೊಡುತ್ತಾರೆ. ಗುರು ಕೊಂಚ ಒತ್ತಡಗಳನ್ನು ಕೊಡುತ್ತಾನೆ. ಜಾಗರೂಕತೆಯಿಂದ ನಿಭಾಯಿಸಿ. ಭಾವನಾತ್ಮಕವಾಗಿ ಹಚ್ಚಿಕೊಂಡ ವ್ಯಕ್ತಿಯ ಅಸಹಾಯಕತೆ ನಿಮ್ಮನ್ನು ದುರ್ಬಲ ಮಾಡಿಬಿಡಬಹುದು.

Read more Articles on